ಸಾರಾಂಶ
ಮಾದಕ ವಸ್ತು ತಿನ್ನಿಸಿ ಅಜ್ಞಾತ ಸ್ಥಳಕ್ಕೆ ಕರೆದೊಯ್ದು ಕೃತ್ಯ ಎಸಗಿರುವುದಾಗಿ ಸಂತ್ರಸ್ತ ಯುವತಿ ಪೊಲೀಸರಿಗೆ ದೂರು ನೀಡಿದ್ದಾಳೆ.
ನವದೆಹಲಿ: ಸಾಮಾಜಿಕ ಮಾಧ್ಯಮದಲ್ಲಿ ಪರಿಚಯವಾದ ಇಬ್ಬರು ಗೆಳೆಯರು 18 ವರ್ಷದ ಯುವತಿಯೊಬ್ಬರನ್ನು ಗ್ಯಾಂಗ್‌ರೇಪ್ ಮಾಡಿರುವ ಘಟನೆ ನಡೆದಿದೆ. ಈ ಸಂಬಂಧ ಉತ್ತರ ಪ್ರದೇಶದ ಮೇರಠ್‌ನಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ.
ಬಂಧಿತ19 ಮತ್ತು 21 ವರ್ಷದ ಆರೋಪಿಗಳ ವಿರುದ್ಧ ವಿವಿಧ ಪ್ರಕರಣಗನ್ನು ದಾಖಲಿಸಲಾಗಿದೆಸೋಮವಾರ ಮಧ್ಯಾಹ್ನ 1 ಗಂಟೆಗೆ ಮಂದಗಿರ್ ಬಳಿ ಮಾತನಾಡಲು ಆರೋಪಿಗಳು ಯುವತಿಯನ್ನು ಕರೆಸಿದ್ದಾರೆ. ಬಳಿಕ ಸ್ಕೂಟರ್ ಹತ್ತಲು ಹೇಳಿದಾಗ ಯುವತಿ ನಿರಾಕರಿಸಿದ್ದಾಳೆ. ಆಗ ಆರೋಪಿಗಳು ಬೆದರಿಕೆ ಹಾಕಿದಾಗ ಯುವತಿ ಸ್ಕೂಟರ್‌ನಲ್ಲಿ ತೆರಳಿದ್ದಾಳೆ. ಮಾಲ್ವಿಯಾ ನಗರಕ್ಕೆ ಕರೆದೊಯ್ದು ಯುವತಿಗೆ ಮಾದಕ ದ್ರವ್ಯದ ಆಹಾರ ನೀಡಿದ್ದಾರೆ. ಆಗ ಯುವತಿಗೆ ಪ್ರಜ್ಞೆ ತಪ್ಪಿದೆ. ಎಚ್ಚರದ ಬಳಿಕ ತಾನು ಅತ್ಯಾಚಾರಕ್ಕೆ ಒಳಗಾಗಿರುವುದು ಅರಿವಿಗೆ ಬಂದಿದೆ ಎಂದು ಯುವತಿ ಪೊಲೀಸರಿಗೆ ನೀಡಿದ ದೂರಿನಲ್ಲಿ ಉಲ್ಲೇಖಿಸಿದ್ದಾರೆ.