ಸಾರಾಂಶ
- ಗೋದಾಬಾಯಿ, ಸೂರ್ಯಕಾಂತ್, ನಾಗರಾಜ್ ಉದಾಹರಣೆ ನೀಡಿದ ರಾಗಾ
- ಈ ಪೈಕಿ ಗೋದಾಬಾಯಿ, ಸೂರ್ಯಕಾಂತ್‌ರನ್ನು ಹಾಜರುಪಡಿಸಿದ ವಿಪಕ್ಷ ನಾಯಕನವದೆಹಲಿ: ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಆಳಂದ ವಿಧಾನಸಭೆ ಕ್ಷೇತ್ರದ ಚುನಾವಣೆಯಲ್ಲಿ ಮತದಾರರ ಪಟ್ಟಿಯಿಂದ ಹೆಸರು ಕೈಬಿಡಲು ನಕಲಿ ಅರ್ಜಿಗಳನ್ನು ಸಲ್ಲಿಸಲಾಗಿತ್ತು ಎಂದು ಆರೋಪ ಮಾಡುವ ವೇಳೆ, ತಮ್ಮ ಆಪಾದನೆಗೆ ಪೂರಕವಾಗಿ ಕ್ಷೇತ್ರದ 3 ಮತದಾರರನ್ನು ಹೆಸರಿಸಿ ಹಾಜರುಪಡಿಸಿದರು. ಈ ಮತದಾರರ ಹೆಸರು ಗೋದಾಬಾಯಿ, ಸೂರ್ಯಕಾಂತ್, ನಾಗರಾಜ್.
--ಉದಾಹರಣೆ 1:ಗೋದಾಬಾಯಿ
ರಾಹುಲ್ ಗಾಂಧಿ ನೀಡಿದ ಮೊದಲ ಉದಾಹರಣೆಯೆಂದರೆ 63 ವರ್ಷದ ಗೋದಾಬಾಯಿ ಎಂಬ ಆಳಂದ ಕ್ಷೇತ್ರದ ನಿವಾಸಿ. ‘ಗೋದಾಬಾಯಿ’ ಹೆಸರನ್ನು ಬಳಸಿಕೊಂಡು ನಕಲಿ ಲಾಗಿನ್ ಅನ್ನು ರಚಿಸಲಾಗಿತ್ತು ಮತ್ತು ಅವರ 12 ನೆರೆಹೊರೆಯವರನ್ನು ಮತದಾರರ ಪಟ್ಟಿಯಿಂದ ಅಳಿಸಲು ಆ ಮೂಲಕ ಅರ್ಜಿ ಸಲ್ಲಿಸಲಾಗಿತ್ತು ಎಂದು ರಾಹುಲ್ ಆರೋಪಿಸಿದರು.‘ಈ ಬಗ್ಗೆ "ಗೋದಾಬಾಯಿಗೆ ಏನೂ ಗೊತ್ತಿರಲಿಲ್ಲ. ಮೇಲಾಗಿ ಮತದಾರರನ್ನು ಅಳಿಸುವ ಅರ್ಜಿಯಲ್ಲಿ ನಮೂದಿಸಲಾದ ಮೊಬೈಲ್ ನಂಬರ್‌ಗಳು ಕರ್ನಾಟಕದದ್ದಲ್ಲ. ಅವು ಎಲ್ಲಿಂದ ಕಾರ್ಯನಿರ್ವಹಿಸುತ್ತಿವೆ?’ ಎಂದು ಪ್ರಶ್ನಿಸಿದರು ಹಾಗೂ ಗೋದಾಬಾಯಿಯ ವಿಡಿಯೋ ಬೈಟ್ ಪ್ರದರ್ಶಿಸಿದರು.ಉದಾಹರಣೆ 2: ಸೂರ್ಯಕಾಂತ್ಗಾಂಧಿಯವರ ‘ಉದಾಹರಣೆ 2’ ಸೂರ್ಯಕಾಂತ್ ಎಂಬ ವ್ಯಕ್ತಿ. ‘ಸೂರ್ಯಕಾಂತ್ 14 ನಿಮಿಷಗಳಲ್ಲಿ 12 ಮತದಾರರನ್ನು ಅಳಿಸಿ ಹಾಕುವಲ್ಲಿ ಯಶಸ್ವಿಯಾದರು. ಅವರು ಅಳಿಸಿದ್ದ ಹೆಸರಿನಲ್ಲಿ ಬಬಿತಾ ಎಂಬ ಮತದಾರ್ತಿಯ ಹೆಸರೂ ಇದೆ’ ಎಂದು ಆಗಾ ಹೇಳಿದರು. ತಮ್ಮ ಪ್ರಸ್ತುತಿಯ ಸಮಯದಲ್ಲಿ ಸೂರ್ಯಕಾಂತ್ ಮತ್ತು ಬಬಿತಾ ಚೌಧರಿ ಇಬ್ಬರನ್ನೂ ರಾಹುಲ್ ಪ್ರತ್ಯಕ್ಞವಾಗಿ ವೇದಿಕೆಗೆ ಕರೆತಂದರು.
ಉದಾಹರಣೆ 3: ನಾಗರಾಜ್ಇನ್ನೊಂದು ಪ್ರಕರಣದಲ್ಲಿ, ‘ನಾಗರಾಜ್ ಎಂಬ ವ್ಯಕ್ತಿ 36 ಸೆಕೆಂಡುಗಳ ಒಳಗೆ 2 ಡಿಲೀಷನ್ (ಅಳಿಸುವಿಕೆ) ಅರ್ಜಿಗಳನ್ನು ಸಲ್ಲಿಸಿದ್ದರು. ಆದರೆ ಫಾರ್ಮ್‌ಗಳನ್ನು ಸಲ್ಲಿಸಿದ ಸಮಯ ಅನುಮಾನಾಸ್ಪದವಾಗಿತ್ತು. ಏಕೆಂದರೆ ಆಗ ಸಮಯ ಬೆಳಿಗ್ಗೆ 4.07 ಆಗಿತ್ತು. ಅಲ್ಲದೆ 36 ಸೆಕೆಂಡಲ್ಲಿ ಒಬ್ಬನೇ ವ್ಯಕ್ತಿ 2 ಅರ್ಜಿ ಹಾಕಲು ಸಾಧ್ಯವಿಲ್ಲ. ಏಕೆಂದರೆ ಅರ್ಜಿ ಭರ್ತಿ ಸಮಯ ತೆಗೆದುಕೊಳ್ಳುತ್ತದೆ. ಹೀಗಾಗಿ ಯಾಂತ್ರೀಕೃತವಾಗಿ ಇದನ್ನು ಮಾಡಿರುವ ಸಾಧ್ಯತೆ ಇದೆ’ ಎಂದು ಅವರು ಆರೋಪಿಸಿದರು.