ಕೋಟಿಗಟ್ಟಲೆ ಹಣ ಕೊಟ್ಟು ಕಾರು ಖರೀದಿ ಗೊತ್ತು. ಅದರೆ ಹರ್ಯಾಣದ ವ್ಯಕ್ತಿಯೊಬ್ಬರು ತಮ್ಮಿಷ್ಟದ ರಿಜಿಸ್ಟರ್‌ ನಂಬರ್‌ ಖರೀದಿಗೆ ಬರೋಬ್ಬರಿ 1.17 ಕೋಟಿ ರು. ಪಾವತಿಸಿದ್ದಾರೆ. ಇದು ದೇಶದಲ್ಲೇ ಅತಿ ದುಬಾರಿ ಮೊತ್ತ ನೀಡಿ ಖರೀದಿಸಿದ ಫ್ಯಾನ್ಸಿ ನಂಬರ್‌ ಎಂಬ ದಾಖಲೆಗೆ ಪಾತ್ರವಾಗಿದೆ.

ನವದೆಹಲಿ: ಕೋಟಿಗಟ್ಟಲೆ ಹಣ ಕೊಟ್ಟು ಕಾರು ಖರೀದಿ ಗೊತ್ತು. ಅದರೆ ಹರ್ಯಾಣದ ವ್ಯಕ್ತಿಯೊಬ್ಬರು ತಮ್ಮಿಷ್ಟದ ರಿಜಿಸ್ಟರ್‌ ನಂಬರ್‌ ಖರೀದಿಗೆ ಬರೋಬ್ಬರಿ 1.17 ಕೋಟಿ ರು. ಪಾವತಿಸಿದ್ದಾರೆ. ಇದು ದೇಶದಲ್ಲೇ ಅತಿ ದುಬಾರಿ ಮೊತ್ತ ನೀಡಿ ಖರೀದಿಸಿದ ಫ್ಯಾನ್ಸಿ ನಂಬರ್‌ ಎಂಬ ದಾಖಲೆಗೆ ಪಾತ್ರವಾಗಿದೆ. 

ಫ್ಯಾನ್ಸಿ, ವಿಐಪಿ ನಂಬರ್‌ಗಳ ಹರಾಜು ಪ್ರಕ್ರಿಯೆ

ಫ್ಯಾನ್ಸಿ, ವಿಐಪಿ ನಂಬರ್‌ಗಳ ಹರಾಜು ಪ್ರಕ್ರಿಯೆಯಲ್ಲಿ ‘ಎಚ್‌ಆರ್‌88ಬಿ8888’ ಸಂಖ್ಯೆಗೆ ಬರೋಬ್ಬರಿ 45 ಮಂದಿ ಬಿಡ್‌ ಸಲ್ಲಿಸಿದ್ದರು, 50 ಸಾವಿರದಿಂದ ಆರಂಭವಾದ ಈ ಮೂಲ ಬೆಲೆಯನ್ನು ವ್ಯಕ್ತಿಯೊಬ್ಬರು 1.17 ಕೋಟಿ ರು. ಕೊಟ್ಟು ಖರೀದಿಸಿದ್ದಾರೆ.

‘ಬಿ’ ಅಕ್ಷರವನ್ನು ಇಂಗ್ಲೀಷ್‌ನಲ್ಲಿ ದಪ್ಪ ಅಕ್ಷರದಲ್ಲಿ ಬರೆಸಿದರೆ 8ರ ಸರಣಿಯಂತೆ ಕಾಣುತ್ತದೆ

 ಇದರ ವಿಶೇಷವೆಂದರೆ ‘ಬಿ’ ಅಕ್ಷರವನ್ನು ಇಂಗ್ಲೀಷ್‌ನಲ್ಲಿ ದಪ್ಪ ಅಕ್ಷರದಲ್ಲಿ ಬರೆಸಿದರೆ 8ರ ಸರಣಿಯಂತೆ ಕಾಣುತ್ತದೆ. ರಾಜ್ಯದಲ್ಲೇ ಕಳೆದ ವಾರ 37.91 ಲಕ್ಷ ರು.ಗೆ ಇನ್ನೊಂದು ರಿಜಿಸ್ಟರ್‌ ನಂಬರ್‌ ಬಿಕರಿಯಾಗಿತ್ತು.