ಸಾರಾಂಶ
ನಿವೃತ್ತ ಸರ್ಕಾರಿ ಉದ್ಯೋಗಿಯೊಬ್ಬರ ಮನೆ ಮೇಲೆ ದಾಳಿ ನಡೆಸಿದ ಮಧ್ಯಪ್ರದೇಶದ ಲೋಕಾಯುಕ್ತ ಪೊಲೀಸರು 90 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ ಹಚ್ಚಿದ್ದಾರೆ.
ಭೋಪಾಲ್: ನಿವೃತ್ತ ಸರ್ಕಾರಿ ಉದ್ಯೋಗಿಯೊಬ್ಬರ ಮನೆ ಮೇಲೆ ದಾಳಿ ನಡೆಸಿದ ಮಧ್ಯಪ್ರದೇಶದ ಲೋಕಾಯುಕ್ತ ಪೊಲೀಸರು 90 ಕೋಟಿ ರು. ಮೌಲ್ಯದ ಆಸ್ತಿ ಪತ್ತೆ ಹಚ್ಚಿದ್ದಾರೆ.
ತಾಂತ್ರಿಕ ಶಿಕ್ಷಣ ಇಲಾಖೆಯಲ್ಲಿ ಕಿರಿಯ ಲೆಕ್ಕ ಪರಿಶೋಧಕರಾಗಿ ಕಾರ್ಯ ನಿರ್ವಹಿಸುತ್ತಿದ್ದ ರಮೇಶ್ ಹಿಂಗೊರಾನೀಗೆ ಸೇರಿದ ಸ್ಥಳಗಳು, ಅವರ ಪರಿವಾರದವರು ನಡೆಸುತ್ತಿದ್ದ 2 ಶಾಲೆಗಳು, ಪಾರ್ಟಿ ಹಾಲ್‌ಗಳ ಲೋಕಾಯುಕ್ತದ ಪೊಲೀಸರ 6 ತಂಡಗಳು ಗುರುವಾರ ದಾಳಿ ನಡೆಸಿವೆ.
ದಾಳಿ ವೇಳೆ ರಮೇಶ್, ರಾಜಧಾನಿ ಭೋಪಾಲ್ ಹಾಗೂ ಅನ್ಯ ರಾಜ್ಯಗಳಲ್ಲಿ ರಿಯಲ್ ಎಸ್ಟೇಟ್ ಉದ್ಯಮದಲ್ಲಿ ಹೂಡಿಕೆ ಮಾಡಿದ್ದರ ಬಗ್ಗೆ ದಾಖಲೆಗಳು ಸಿಕ್ಕಿವೆ ಎನ್ನಲಾಗಿದೆ. ಅಅಲ್ಲದೆ ದಾಳಿ ವೇಳೆ 70 ಲಕ್ಷ ರು. ಬೆಲೆಯ ಚಿನ್ನಾಭರಣ, 12 ಲಕ್ಷ ರು. ನಗದು, 4 ಐಶಾರಾಮಿ ಕಾರು ಪತ್ತೆಯಾಗಿದೆ. ಸ್ಥಿರಾಸ್ತಿಯ ಮೌಲ್ಯವನ್ನು ಇನ್ನೂ ಲೆಕ್ಕ ಹಾಕಲಾಗುತ್ತಿದೆ.