ಬೆಳ್ಳಿ ಬೆಲೆಯ ನಾಗಾಲೋಟ ಮುಂದುವರೆದಿದ್ದು, ಶನಿವಾರ ಒಂದೆ ದಿನ ಬೆಂಗಳೂರಿನಲ್ಲಿ 1 ಕೆಜಿ ಬೆಳ್ಳಿ ಬೆಲೆ 14700 ರು. ಏರಿಕೆಯಾಗಿ 2,57,700 ರು.ಗೆ ತಲುಪಿದೆ ಶುಕ್ರವಾರವೂ ಕೂಡಾ ಬೆಲೆ 9500 ರು.ನಷ್ಟು ಜಿಗಿದಿತ್ತು.
ನವದೆಹಲಿ: ಬೆಳ್ಳಿ ಬೆಲೆಯ ನಾಗಾಲೋಟ ಮುಂದುವರೆದಿದ್ದು, ಶನಿವಾರ ಒಂದೆ ದಿನ ಬೆಂಗಳೂರಿನಲ್ಲಿ 1 ಕೆಜಿ ಬೆಳ್ಳಿ ಬೆಲೆ 14700 ರು. ಏರಿಕೆಯಾಗಿ 2,57,700 ರು.ಗೆ ತಲುಪಿದೆ. ಶುಕ್ರವಾರವೂ ಕೂಡಾ ಬೆಲೆ 9500 ರು.ನಷ್ಟು ಜಿಗಿದಿತ್ತು.
ಅದಿರಿನಲ್ಲಿ ನಿಕ್ಷೇಪದ ಕೊರತೆ, ಹೂಡಿಕೆದಾರರಿಂದ ಹೆಚ್ಚಿನ ಸಂಗ್ರಹಣೆ
ಜಾಗತಿಕವಾಗಿ ಕೈಗಾರಿಕಾ ವಲಯದಿಂದ ಭಾರೀ ಬೇಡಿಕೆ, ಅದಿರಿನಲ್ಲಿ ನಿಕ್ಷೇಪದ ಕೊರತೆ, ಹೂಡಿಕೆದಾರರಿಂದ ಹೆಚ್ಚಿನ ಸಂಗ್ರಹಣೆಯು ಬೆಳ್ಳಿ ಬೆಲೆ ಏರಿಕೆಗೆ ಕಾರಣಗಳಾಗಿವೆ. ಕಳೆದ 6 ದಿನಗಳ ಅವಧಿಯಲ್ಲಿ ಪ್ರತಿ ಕೆಜಿ ಬೆಳ್ಳಿ ಬೆಲೆಯಲ್ಲಿ 35900 ರು. ಏರಿಕೆ ದಾಖಲಾಗಿದೆ.
1,33,350 ರು.ಗೆ, ಚಿನ್ನ
ಇನ್ನು 22 ಕ್ಯಾರಟ್ ಚಿನ್ನದ ಬೆಲೆಯು 10 ಗ್ರಾಂಗೆ 1150 ರು. ಏರಿಕೆಯಾಗಿ 1,33,350 ರು.ಗೆ, 10 ಗ್ರಾಂ 24 ಕ್ಯಾರಟ್ ಚಿನ್ನ 1250 ರು. ಜಿಗಿದು 1,45,450 ರು.ಗೆ ತಲುಪಿದೆ.
