2025ನೇ ಸಾಲಿನ ಪ್ರತಿಷ್ಠಿತ ಗೋಲ್ಡನ್‌ ಗ್ಲೋಬ್ ಪ್ರಶಸ್ತಿಯಲ್ಲಿ ಪಾಯಲ್ ಕಪಾಡಿಯಾ ‘ಆಲ್‌ ವಿ ಇಮ್ಯಾಜಿನ್ ಆಸ್‌ ಲೈಟ್‌’ ಸಿನಿಮಾದ ನಿರ್ದೇಶನಕ್ಕಾಗಿ ಅತ್ಯುತ್ತಮ ನಿರ್ದೇಶನ ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿದ್ದಾರೆ. ನಿರ್ದೇಶನ ವಿಭಾಗದಲ್ಲಿ ಭಾರತೀಯರೊಬ್ಬರು ಸ್ಪರ್ಧಿಸುತ್ತಿರುವುದು ಇದೇ ಮೊದಲು.

ನವದೆಹಲಿ: 2025ನೇ ಸಾಲಿನ ಪ್ರತಿಷ್ಠಿತ ಗೋಲ್ಡನ್‌ ಗ್ಲೋಬ್ ಪ್ರಶಸ್ತಿಯಲ್ಲಿ ಪಾಯಲ್ ಕಪಾಡಿಯಾ ‘ಆಲ್‌ ವಿ ಇಮ್ಯಾಜಿನ್ ಆಸ್‌ ಲೈಟ್‌’ ಸಿನಿಮಾದ ನಿರ್ದೇಶನಕ್ಕಾಗಿ ಅತ್ಯುತ್ತಮ ನಿರ್ದೇಶನ ವಿಭಾಗದಲ್ಲಿ ನಾಮ ನಿರ್ದೇಶನಗೊಂಡಿದ್ದಾರೆ. 

ನಿರ್ದೇಶನ ವಿಭಾಗದಲ್ಲಿ ಭಾರತೀಯರೊಬ್ಬರು ಸ್ಪರ್ಧಿಸುತ್ತಿರುವುದು ಇದೇ ಮೊದಲು.ಇದರ ಜೊತೆಗೆ ಇಂಗ್ಲಿಷ್‌ ಭಾಷೆಯಲ್ಲದ ಅತ್ಯುತ್ತಮ ಚಲನಚಿತ್ರ ವಿಭಾಗಕ್ಕೆ ‘ಆಲ್‌ ವಿ ಇಮ್ಯಾಜಿನ್ ಆಸ್‌ ಲೈಟ್‌’ ಸಿನಿಮಾ ನಿರ್ದೇಶನಗೊಂಡಿದ್ದು, ಈ ಬಗ್ಗೆ ಅಧಿಕೃತವಾಗಿ ಪ್ರಕಟಣೆ ಹೊರ ಬಿದ್ದಿದೆ.