ಸಾರಾಂಶ
ಯಶಸ್ವಿ ಗಗನಯಾನದ ಬಳಿಕ ಮೊದಲ ಸಲ ತವರಿಗೆ ಮರಳಿರುವ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ, ಅವರಿಗೆ ಸೋಮವಾರ ಹುಟ್ಟೂರು ಲಖನೌನಲ್ಲಿ ಅದ್ಧೂರಿ ಸ್ವಾಗತ ದೊರೆಯಿತು.
ಲಖನೌ: ಯಶಸ್ವಿ ಗಗನಯಾನದ ಬಳಿಕ ಮೊದಲ ಸಲ ತವರಿಗೆ ಮರಳಿರುವ ಭಾರತದ ಗಗನಯಾತ್ರಿ ಶುಭಾಂಶು ಶುಕ್ಲಾ, ಅವರಿಗೆ ಸೋಮವಾರ ಹುಟ್ಟೂರು ಲಖನೌನಲ್ಲಿ ಅದ್ಧೂರಿ ಸ್ವಾಗತ ದೊರೆಯಿತು.
ಲಖನೌ ವಿಮಾನ ನಿಲ್ದಾಣದಲ್ಲಿ ಕುಟುಂಬಸ್ಥರು ಅವರನ್ನು ಸ್ವಾಗತಿಸಿದರು. ಬಳಿ ತೆರೆದ ವಾಹನದಲ್ಲಿ ರೋಡ್ ಶೋ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ನೂರಾರು ಮಂದಿ ತ್ರಿವರ್ಣ ಧ್ವಜ ಹಾರಿಸುತ್ತಾ, ವಂದೇ ಮಾತರಂ ಘೋಷಣೆ ಕೂಗುತ್ತಾ ಜೊತೆ ಸಾಗಿದರು. ಬಳಿಕ ಮಾತನಾಡಿದ ಶುಕ್ಲಾ, ‘ ಇಲ್ಲಿ ನೆರೆದಿರುವವರ ಉತ್ಸಾಹ ನೋಡಲು ತುಂಬಾ ಖುಷಿಯಾಗಿದೆ’ ಎಂದರು.ಈ ನಡುವೆ ಶುಕ್ಲಾ ದಂಪತಿ, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರನ್ನೂ ಭೇಟಿಯಾದರು.
ಸ್ಕಾಲರ್‌ಶಿಪ್:ಅಂತರಿಕ್ಷ ಕುರಿತ ಕೋರ್ಸುಗಳ ವಿದ್ಯಾರ್ಥಿಗಳಿಗೆ ಶುಭಾಂಶು ಶುಕ್ಲಾ ಹೆಸರಿನಲ್ಲಿ ಸ್ಕಾಲರ್‌ಶಿಪ್ ನೀಡಲು ಯೋಗಿ ಸರ್ಕಾರ ನಿರ್ಧರಿಸಿದೆ.------
ಆ.17ರಂದೇ ಭಾರತಕ್ಕೆ ಬಂದಿದ್ದ ಶುಕ್ಲಾ ವಿವಿಧ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ ಇದೀಗ ತವರಿಗೆ ಮರಳಿದ್ದಾರೆ.ವಾಯುಪಡೆಯ ಚಿಹ್ನೆ ಇರುವ ಕಂದುಬಣ್ಣದ ಜಾಕೆಟ್, ಅದರ ತೋಳಿನಲ್ಲಿ ತ್ರಿವರ್ಣ ಧ್ವಜ, ಮತ್ತೊಂದು ತೋಳಿನಲ್ಲಿ ಇಸ್ರೋ ಲಾಂಛನ ಧರಿಸಿ ಶುಕ್ಲಾ ಸೆಳೆದರು.