ಸಾರಾಂಶ
ಕಳೆದ ಜನವರಿ ತಿಂಗಳಲ್ಲಿ 1.96 ಲಕ್ಷ ಕೋಟಿ ರು.ನಷ್ಟು ಸೇವಾ ಮತ್ತು ಸರಕು ತೆರಿಗೆ (ಜಿಎಸ್ಟಿ) ಸಂಗ್ರಹವಾಗಿದೆ. ಇದು ದೇಶೀಯ ಆರ್ಥಿಕತೆಯಲ್ಲಿ ಚೇತರಿಕೆ ಕಂಡುಬಂದಿರುವ ಲಕ್ಷಣ ಎನ್ನಲಾಗಿದೆ.
ನವದೆಹಲಿ: ಕಳೆದ ಜನವರಿ ತಿಂಗಳಲ್ಲಿ 1.96 ಲಕ್ಷ ಕೋಟಿ ರು.ನಷ್ಟು ಸೇವಾ ಮತ್ತು ಸರಕು ತೆರಿಗೆ (ಜಿಎಸ್ಟಿ) ಸಂಗ್ರಹವಾಗಿದೆ. ಇದು ದೇಶೀಯ ಆರ್ಥಿಕತೆಯಲ್ಲಿ ಚೇತರಿಕೆ ಕಂಡುಬಂದಿರುವ ಲಕ್ಷಣ ಎನ್ನಲಾಗಿದೆ.
ಜನವರಿಯಲ್ಲಿ ಒಟ್ಟು 1,95,506 ಕೋಟಿ ಜಿಎಸ್ಟಿ ಸಂಗ್ರಹವಾಗಿದೆ. ಇದು ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಶೇ.12.3ರಷ್ಟು ಹೆಚ್ಚಳವಾಗಿದೆ. ಒಟ್ಟು ಜಿಎಸ್ಟಿ ಆದಾಯದಲ್ಲಿ 1.47 ಲಕ್ಷ ಕೋಟಿ ರು.ನಷ್ಟು ದೇಶೀಯವಾಗಿ ನಡೆದ ವಹಿವಾಟಿನಿಂದ ಸಂಗ್ರಹವಾಗಿದ್ದರೆ, 48382 ಕೋಟಿ ರು. ಆಮದು ಮಾಡಿಕೊಳ್ಳಲಾದ ವಸ್ತುಗಳ ಮೂಲಕ ಸಂಗ್ರಹಿಸಲಾಗಿದೆ.
32335 ಕೋಟಿ ರು. ಜಿಎಸ್ಟಿ ಸಂಗ್ರಹದೊಂದಿಗೆ ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದ್ದರೆ, 14353 ಕೋಟಿ ರು. ಸಂಗ್ರಹದೊಂದಿಗೆ ಕರ್ನಾಟಕ 2ನೇ ಸ್ಥಾನದಲ್ಲಿದೆ.