ಸಾರಾಂಶ
ಕೋಲ್ಕತಾ : ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‌ಟಿ) ಸರಳೀಕರಣದಿಂದಾಗಿ ಕೇಂದ್ರ ಸರ್ಕಾರಕ್ಕೆ ದೊಡ್ಡ ಹೊಡೆತವೇನೂ ಆಗುವುದಿಲ್ಲ. ಕೇವಲ 3,700 ಕೋಟಿ ರು. ನಷ್ಟವಷ್ಟೇ ಆಗಲಿದೆ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಸಂಶೋಧನಾ ವರದಿ ಹೇಳಿದೆ.
‘ಜಿಎಸ್‌ಟಿ ಸರಳೀಕರಣದಿಂದಾಗಿ 48 ಸಾವಿರ ಕೋಟಿ ರು.ನಷ್ಟು ವಾರ್ಷಿಕ ನಷ್ಟ ಆಗಲಿದೆ ಎಂದು ಕೇಂದ್ರ ಅಂದಾಜಿಸಿದೆ. ಆದರೆ ಎಸ್‌ಬಿಐ ವರದಿ ಪ್ರಕಾರ, ಜಿಎಸ್‌ಟಿ ಸರಳೀಕರಣದಿಂದಾಗಿ ಆರ್ಥಿಕ ಬೆಳವಣಿಗೆ ಮತ್ತು ಖರೀದಿಗೆ ಉತ್ತೇಜನ ಸಿಗಲಿದ್ದು, ಇದರಿಂದ ಕೇಂದ್ರ ಸರ್ಕಾರಕ್ಕೆ ಕನಿಷ್ಠ 3700 ಕೋಟಿ ರು.ನಷ್ಟು ನಷ್ಟವಷ್ಟೇ ಆಗಲಿದೆ. ವಿತ್ತೀಯ ಕೊರತೆ ಮೇಲೆ ಇದು ಗಂಭೀರ ಪರಿಣಾಮವನ್ನೇನೂ ಬೀರುವುದಿಲ್ಲ’ ಎಂದಿದೆ.
ದೇಶದಲ್ಲಿ ಸದ್ಯ ಶೇ.28, ಶೇ.18, ಶೇ.12 ಮತ್ತು ಶೇ.5ರಷ್ಟು ಹೀಗೆ ನಾಲ್ಕು ಸ್ಲ್ಯಾಬ್‌ಗಳಲ್ಲಿ ಜಿಎಸ್ಟಿ ವಿಧಿಸಲಾಗುತ್ತಿದೆ. ಆದರೆ ಇತ್ತೀಚೆಗೆ ನಡೆದ ಜಿಎಸ್‌ಟಿ ಕೌನ್ಸಿಲ್ ಸಭೆಯಲ್ಲಿ ಆ ಸ್ಲ್ಯಾಬ್‌ಗಳನ್ನು ನಾಲ್ಕರಿಂದ ಎರಡಕ್ಕಿಳಿಸುವ ನಿರ್ಧಾರ ಕೈಗೊಳ್ಳಲಾಗಿದೆ. ಅದರಂತೆ ಇನ್ನು ಮುಂದೆ ದೇಶದಲ್ಲಿ ಶೇ.5 ಮತ್ತು ಶೇ.12ರಷ್ಟು ತೆರಿಗೆ ಮಾತ್ರ ಚಾಲ್ತಿಯಲ್ಲಿರಲಿದೆ. ತಂಬಾಕು, ಐಷಾರಾಮಿ ವಸ್ತು, ಸೇವೆಗಳಿಗೆ ಮಾತ್ರ ಶೇ.40ರಷ್ಟು ಪ್ರತ್ಯೇಕ ತೆರಿಗೆ ಹಾಕಲು ನಿರ್ಧರಿಸಲಾಗಿದೆ.
- ಜನರು ಹೆಚ್ಚು ಖರೀದಿಸುವ ಕಾರಣ ನಷ್ಟ ಇಳಿಕೆ
- ₹48000 ಕೋಟಿ ನಷ್ಟ ಎಂಬ ಅಂದಾಜು ಸರಿಯಲ್ಲ
- ಎಸ್‌ಬಿಐ ಸಂಶೋಧನಾ ವರದಿಯಲ್ಲಿ ಉಲ್ಲೇಖ
- ಕೇಂದ್ರ ಸರ್ಕಾರಕ್ಕೆ ಇದರಿಂದ ದೊಡ್ಡ ಹೊಡೆತ ಇಲ್ಲ