ಹಲ್ದ್ವಾನಿ ನರಮೇಧಕ್ಕೆ ಸಂಬಂಧಿಸಿದಂತೆ ಒಟ್ಟು ಬಂಧಿತರ ಸಂಖ್ಯೆ 30ಕ್ಕೇರಿಕೆಯಾಗಿದ್ದು, ಬಂಧಿತರಿಂದ ಪೊಲೀಸ್‌ ಠಾಣೆಯ ಶಸ್ತ್ರಾಸ್ತ್ರ ವಶಪಡಿಸಿಕೊಳ್ಳಲಾಗಿದೆ.

ಹಲ್ದ್ವಾನಿ (ಉತ್ತರಾಖಂಡ): ನಗರದಲ್ಲಿ ಅಕ್ರಮ ಮದರಸಾ ಕಟ್ಟಡವನ್ನು ಧ್ವಂಸಗೊಳಿಸಿದ ತರುವಾಯ ಪೊಲೀಸ್‌ ಠಾಣೆಗೆ ಬೆಂಕಿ ಹಚ್ಚಿ ಶಸ್ತ್ರಾಸ್ತ್ರಗಳನ್ನು ಕದ್ದೊಯ್ದ 25 ಮಂದಿಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 

ಇದರೊಂದಿಗೆ ಒಟ್ಟು ಬಂಧಿತರ ಸಂಖ್ಯೆ 30ಕ್ಕೇರಿದೆ.ಈ ಕುರಿತು ಮಾಹಿತಿ ನೀಡಿದ ನೈನಿತಾಲ್‌ ಉಪ ಪೊಲೀಸ್ ವರಿಷ್ಠಾಧಿಕಾರಿ ಪ್ರಹ್ಲಾದ್‌ ಮೀನಾ, ‘ನೈನಿತಾಲ್‌ ಸುತ್ತಮುತ್ತ ಇದ್ದ 25 ಮಂದಿಯನ್ನು ಬಂಧಿಸಲಾಗಿದ್ದು, ಅವರಿಂದ ಪೊಲೀಸ್‌ ಠಾಣೆಯ ಹಲವು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆಯಲಾಗಿದೆ. 

ಮುಖ್ಯ ಆರೋಪಿ ಅಬ್ದುಲ್‌ ಮಲಿಕ್‌ನನ್ನೂ ಶೀಘ್ರ ಬಂಧಿಸಲಾಗುವುದು’ ಎಂದು ತಿಳಿಸಿದರು.ಬಂಧಿತರು ಹಲ್ದ್ವಾನಿಯಲ್ಲಿರುವ ಬನ್‌ಬೂಲ್‌ಪುರ ಪೊಲೀಸ್‌ ಠಾಣೆಗೆ ನುಗ್ಗಿ ಶಸ್ತ್ರಾಸ್ತ್ರಗಳನ್ನು ಕದ್ದೊಯ್ದು ಠಾಣೆಗೆ ಬೆಂಕಿ ಹಚ್ಚಿದ್ದರು.