ಸೋನಿಪತ್‌ನ ಕಾಲುವೆಯಲ್ಲಿ ಗಂಟಲು ಸೀಳಿದ ಸ್ಥಿತಿಯಲ್ಲಿ ಹರ್ಯಾಣ ಮೂಲದ ರೂಪದರ್ಶಿ ಶೀತಲ್‌ ಅವರ ಮೃತದೇಹ ಪತ್ತೆಯಾಗಿದೆ.

ಸೋನಿಪತ್: ಸೋನಿಪತ್‌ನ ಕಾಲುವೆಯಲ್ಲಿ ಗಂಟಲು ಸೀಳಿದ ಸ್ಥಿತಿಯಲ್ಲಿ ಹರ್ಯಾಣ ಮೂಲದ ರೂಪದರ್ಶಿ ಶೀತಲ್‌ ಅವರ ಮೃತದೇಹ ಪತ್ತೆಯಾಗಿದೆ.

ಕೊಲೆಗೆ ಕಾರಣ ಪತ್ತೆಯಾಗಿಲ್ಲ.ಅವರು ಹರಿಯಾಣ್ವಿ ಸಂಗೀತ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು.‘ಶೀತಲ್ ತಮ್ಮ ತಂಗಿ ನೇಹಾ ಜತೆ ಪಾಣಿಪತ್‌ನಲ್ಲಿ ವಾಸವಿದ್ದರು. ಜೂ.14ರಂದು ಶೂಟಿಂಗ್‌ಗಾಗಿ ಅಹರ್ ಹಳ್ಳಿಗೆ ತೆರಳಿದ್ದರು. ಮರಳಿ ಮನೆಗೆ ಬರದಿದ್ದಾಗ, ಅವರ ತಂಗಿ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. 

ತನಿಖೆ ವೇಳೆ ಖಾಂಡಾ ಹಳ್ಳಿಯ ಸಮೀಪದ ಕಾಲುವೆಯಲ್ಲಿ ಕುತ್ತಿಗೆ ಸೀಳಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ. ಶವವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕಳೆದ ವಾರವಷ್ಟೇ ಪಂಜಾಬ್‌ನ ಸಾಮಾಜಿಕ ಮಾಧ್ಯಮ ಪ್ರಭಾವಿ ಕಮಲ್ ಕೌರ್ ಶವ ಕಾರಿನಲ್ಲಿ ಪತ್ತೆಯಾಗಿತ್ತು.