ರಂಜಿತ್‌ ಸಿಂಗ್‌ ಹತ್ಯೆ: ಡೇರಾಮುಖ್ಯಸ್ಥ ಗುರ್ಮೀತ್‌ ಖುಲಾಸೆ

| Published : May 29 2024, 12:49 AM IST

ರಂಜಿತ್‌ ಸಿಂಗ್‌ ಹತ್ಯೆ: ಡೇರಾಮುಖ್ಯಸ್ಥ ಗುರ್ಮೀತ್‌ ಖುಲಾಸೆ
Share this Article
  • FB
  • TW
  • Linkdin
  • Email

ಸಾರಾಂಶ

ಡೇರಾ ಸಚ್ಚಾ ಸಂಸ್ಥೆಯ ಮ್ಯಾನೇಜರ್‌ ರಂಜಿತ್‌ ಸಿಂಗ್‌ ಹತ್ಯೆ ಪ್ರಕರಣದಲ್ಲಿ ಡೇರಾ ಸಚ್ಚಾ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ ಅವರನ್ನು ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ ಮಂಗಳವಾರ ಖುಲಾಸೆಗೊಳಿಸಿದೆ.

ಚಂಡೀಗಢ: ಡೇರಾ ಸಚ್ಚಾ ಸಂಸ್ಥೆಯ ಮ್ಯಾನೇಜರ್‌ ರಂಜಿತ್‌ ಸಿಂಗ್‌ ಹತ್ಯೆ ಪ್ರಕರಣದಲ್ಲಿ ಡೇರಾ ಸಚ್ಚಾ ಮುಖ್ಯಸ್ಥ ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ ಅವರನ್ನು ಪಂಜಾಬ್‌ ಮತ್ತು ಹರ್ಯಾಣ ಹೈಕೋರ್ಟ್‌ ಮಂಗಳವಾರ ಖುಲಾಸೆಗೊಳಿಸಿದೆ.

ರಂಜಿತ್‌ ಸಿಂಗ್‌ರನ್ನು 2002 ಜುಲೈ 12 ರಂದು ಹರ್ಯಾಣದ ಕುರುಕ್ಷೇತ್ರದ ಖಾನ್‌ಪುರ್‌ನ ಕೊಲಿಯಾನ್‌ ಗ್ರಾಮಾದಲ್ಲಿ ಗುಂಡಿಕ್ಕಿ ಕೊಲ್ಲಲಾಗಿತ್ತು. ಈ ಹತ್ಯೆ ನಡೆದು 19 ವರ್ಷಗಳ ಬಳಿಕ ವಿಶೇಷ ನ್ಯಾಯಾಲಯವು 2021ರಲ್ಲಿ ಗುರ್ಮೀತ್‌ ಮತ್ತು ಇತರೆ ನಾಲ್ಕು ಮಂದಿಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು. ಈ ತೀರ್ಪನ್ನು ಪ್ರಶ್ನಿಸಿ ಗುರ್ಮೀತ್‌ ರಾಮ್‌ ರಹೀಮ್‌ ಸಿಂಗ್‌ ಹೈಕೋರ್ಟ್‌ ಮೊರೆ ಹೋಗಿದ್ದರು. ಹೈಕೋರ್ಟ್‌ ಅವರನ್ನು ಖುಲಾಸೆ ಮಾಡಿದೆ.

ಪ್ರಸ್ತುತ ಇಬ್ಬರು ಶಿಷ್ಯೆಯರ ಮೇಲಿನ ಅತ್ಯಾಚಾರದ ಆರೋಪದಡಿ ಗುರ್ಮೀತ್‌ ಹರ್ಯಾಣದ ಸುನಾರಿಯಾ ಜೈಲಿನಲ್ಲಿದ್ದಾರೆ.

ಇ.ಡಿ. ಮೇಲೆ ದಾಳಿ ಪ್ರಕರಣ:ಶಹಜಹಾನ್‌ ವಿರುದ್ಧ ಕೊಲೆ ಯತ್ನದ ಆರೋಪಸಂದೇಶ್‌ಖಾಲಿ: ಜಾರಿ ನಿರ್ದೇಶನಾಲಯ ತಂಡದ ಮೇಲೆ ಗುಂಪು ದಾಳಿಗೆ ಸಂಬಂಧಿಸಿದಂತೆ ಟಿಎಂಸಿ ನಾಯಕ ಶಜಹಾನ್‌ ಮತ್ತು ಆತನ ಆಪ್ತರ ವಿರುದ್ಧ ಸಿಬಿಐ ಹತ್ಯೆ ಯತ್ನದ ಆರೋಪ ಹೊರಿಸಿದೆ. ಪ್ರಕರಣ ಸಂಬಂಧ ಇದು ಸಿಬಿಐ ದಾಖಲಿಸಿರುವ ಮೊದಲ ಆರೋಪಪಟ್ಟಿಯಾಗಿದೆ. ಪಡಿತರ ಹಗರಣದ ತನಿಖೆಗೆಂದು ಕಳೆದ ಜ.5ರಂದು ಇ.ಡಿ. ಅಧಿಕಾರಿಗಳ ತಂಡ ಆಗಮಿಸಿದ್ದ ವೇಳೆ ಆರೋಪಿ ಶಜಹಾನ್‌ನ ಸಾವಿರಾರು ಆಪ್ತರು ಇ.ಡಿ ಅಧಿಕಾರಿಗಳು, ವಾಹನದ ಮೇಲೆ ದಾಳಿ ನಡೆಸಿದ್ದರು. ಈ ವೇಳೆ ಇಬ್ಬರು ಅಧಿಕಾರಿಗಳು ಗಾಯಗೊಂಡಿದ್ದರು.