ಸಾರಾಂಶ
2 ದಿನದಲ್ಲಿ ದೆಹಲಿ, ಉತ್ತರ ಪ್ರದೇಶ, ಹರಿಯಾಣ, ಪಂಜಾಬ್‌ನಲ್ಲಿ ತಾಪಮಾನ ಭಾರಿ ಏರಿಕೆ ಆಗಿದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.
ನವದೆಹಲಿ: ಉತ್ತರ ಭಾರತದಲ್ಲಿ ಕೆಲವು ದಿನ ಬಿಡುವು ನೀಡಿದ್ದ ಬಿಸಿಗಾಳಿ ಈಗ ಮತ್ತೆ ತನ್ನ ಪ್ರತಾಪ ತೋರಲಾರಂಭಿಸಿದೆ. ಹಲವು ರಾಜ್ಯಗಳಲ್ಲಿ ಮಂಗಳವಾರ 45 ಡಿಗ್ರಿಗೂ ಅಧಿಕ ಉಷ್ಣಾಂಶ ದಾಖಲಾಗಿದೆ.
2 ದಿನದಲ್ಲಿ ದೆಹಲಿ, ಉತ್ತರ ಪ್ರದೇಶ, ಹರಿಯಾಣ, ಪಂಜಾಬ್‌ನಲ್ಲಿ ತಾಪಮಾನ ಭಾರಿ ಏರಿಕೆ ಆಗಿದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ.ದಿಲ್ಲಿಯಲ್ಲಿ ಸುಮಾರು 45 ಡಿಗ್ರಿ ತಾಪ ಇದೆ. ಆದರೂ 50 ಡಿಗ್ರಿ ತಾಪದ ಅನುಭವ ಆಗುತ್ತಿದೆ. ರಾಜಸ್ಥಾನದ ಗಂಗಾ ನಗರದಲ್ಲಿ 46.2 ಡಿಗ್ರಿ ಉಷ್ಣಾಂಶ ದಾಖಲಾಗಿದೆ. ಉಳಿದಂತೆ ಉತ್ತರದ ರಾಜ್ಯಗಳಾಗಿರುವ ಉತ್ತರಾಖಂಡ, ಬಿಹಾರ, ಝಾರ್ಖಂಡ್‌ನಲ್ಲಿ 46 ಡಿಗ್ರಿಗೂ ಅಧಿಕ ತಾಪಮಾನ ದಾಖಲಾಗಿದೆ. ಇನ್ನು ಉತ್ತರಾಖಂಡದ ಡೆಹ್ರಾಡೂನ್‌ನಲ್ಲಿ 43.1, ಮಸ್ಸೂರಿಯಲ್ಲಿ 43 ಡಿಗ್ರಿ, ಜಮ್ಮು ಕಾಶ್ಮೀರದ ಕಟ್ರಾದಲ್ಲಿ 40.8 ಡಿಗ್ರಿ, ಜಮ್ಮುವಿನಲ್ಲಿ 44.3 ಡಿಗ್ರಿ ಉಷ್ಣಾಂಶ ದಾಖಲಾಗಿದೆ.
ಬಿಹಾರದಲ್ಲಿ 22 ಬಲಿ:ಬಿಸಿಗಾಳಿಗೆ ಬಿಹಾರದಲ್ಲಿ ಕಳೆದ 24 ಗಂಟೆಯಲ್ಲಿಯೇ 22 ಮಂದಿ ಬಲಿಯಾಗಿದ್ದಾರೆ ಎಂದು ವರದಿಯಾಗಿದೆ.