ಕಾವೇರಿ ನದಿಗೆ ತಮಿಳುನಾಡಿನ ಮೆಟ್ಟೂರಿನಲ್ಲಿರುವ ಅಣೆಕಟ್ಟಿಗೆ ಭಾರೀ ಪ್ರಮಾಣದಲ್ಲಿ ನೀರಿನ ಒಳಹರಿವು

| Published : Jul 28 2024, 02:09 AM IST / Updated: Jul 28 2024, 05:00 AM IST

ಸಾರಾಂಶ

ಕಾವೇರಿ ನದಿಗೆ ತಮಿಳುನಾಡಿನ ಮೆಟ್ಟೂರಿನಲ್ಲಿ ಕಟ್ಟಿರುವ ಅಣೆಕಟ್ಟಿಗೆ ಭಾರೀ ಪ್ರಮಾಣದಲ್ಲಿ ನೀರಿನ ಒಳಹರಿವು ಮುಂದುವರೆದಿದ್ದು, ಸೋಮವಾರ ಸಂಜೆ ವೇಳೆಗೆ ಅದು ತನ್ನ ಪೂರ್ಣಮಟ್ಟವಾದ 120 ಅಡಿ ತಲುಪುವ ಸಾಧ್ಯತೆ ಇದೆ.

ಚೆನ್ನೈ: ಕಾವೇರಿ ನದಿಗೆ ತಮಿಳುನಾಡಿನ ಮೆಟ್ಟೂರಿನಲ್ಲಿ ಕಟ್ಟಿರುವ ಅಣೆಕಟ್ಟಿಗೆ ಭಾರೀ ಪ್ರಮಾಣದಲ್ಲಿ ನೀರಿನ ಒಳಹರಿವು ಮುಂದುವರೆದಿದ್ದು, ಸೋಮವಾರ ಸಂಜೆ ವೇಳೆಗೆ ಅದು ತನ್ನ ಪೂರ್ಣಮಟ್ಟವಾದ 120 ಅಡಿ ತಲುಪುವ ಸಾಧ್ಯತೆ ಇದೆ. 

ವವವವತಮಿಳುನಾಡಿನ ಕಾವೇರಿ ನದಿ ಪಾತ್ರದಲ್ಲಿ ಭಾರೀ ಮಳೆ ಮತ್ತು ಕರ್ನಾಟಕದ ಅಣೆಕಟ್ಟಿನಿಂದ ಭಾರೀ ಪ್ರಮಾಣದಲ್ಲಿ ನೀರು ಹೊರಬಿಡುತ್ತಿರುವ ಹಿನ್ನೆಲೆಯಲ್ಲಿ ಹಾಲಿ ಅಣೆಕಟ್ಟಿಗೆ 1.45 ಲಕ್ಷ ಕ್ಯುಸೆಕ್‌ ನೀರಿನ ಒಳಹರಿವು ಇದ್ದು ಶನಿವಾರ ಬೆಳಗ್ಗೆಯೇ ಡ್ಯಾಂನಲ್ಲಿ ನೀರಿನ ಮಟ್ಟ 103 ಅಡಿ ತಲುಪಿದೆ. ಇದೇ ಪ್ರಮಾಣದಲ್ಲಿ ಹರಿವು ಹೆಚ್ಚಾದರೆ ಸೋಮವಾರ ಸಂಜೆ ವೇಳೆಗೆ ಅಣೆಕಟ್ಟು ಗರಿಷ್ಠ 120 ಅಡಿ ತಲುಪುವ ನಿರೀಕ್ಷೆ ಇದೆ. 1934ರಲ್ಲಿ ನಿರ್ಮಾಣವಾದ ಅಣೆಕಟ್ಟು 100 ಅಡಿಗಳ ಮಟ್ಟವನ್ನು ದಾಟುತ್ತಿರುವುದು ಇದು 71ನೇ ಬಾರಿ ಎಂಬುದು ವಿಶೇಷ. ಅಣೆಕಟ್ಟು ಒಟ್ಟಾರೆ 93.47 ಟಿಸಿಎಂ ಅಡಿಗಳಷ್ಟು ನೀರು ಸಂಗ್ರಹದ ಸಾಮರ್ಥ್ಯ ಹೊಂದಿದೆ.