ಸಾರಾಂಶ
ಶಿವಸೇನಾ ಉದ್ಧವ್ ಠಾಕ್ರೆ ಬಣದ ನಾಯಕಿ ಸುಶ್ಮಾ ಅಂಧಾರೆ ಅವರನ್ನು ಕರೆದೊಯ್ಯಲು ಬಂದಿದ್ದ ಹೆಲಿಕಾಪ್ಟರ್ ಪತನವಾಗಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮುಂಬೈ: ಶಿವಸೇನೆಯ ಉದ್ಧವ್ ಠಾಕ್ರೆ ಬಣದ ನಾಯಕಿಯೊಬ್ಬರನ್ನು ಕರೆದೊಯ್ಯಲು ಬರುತ್ತಿದ್ದ ಹೆಲಿಕಾಪ್ಟರ್‌ವೊಂದು ಪತನಗೊಂಡು, ಪೈಲಟ್‌ಗಳು ಗಾಯಗೊಂಡ ಘಟನೆ ಶುಕ್ರವಾರ ನಡೆದಿದೆ.
ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.ಶುಕ್ರವಾರ ರಾಯಗಢ ಜಿಲ್ಲೆಯಲ್ಲಿ ಶಿವಸೇನೆ ಉದ್ಧವ್ ಬಣದ ನಾಯಕಿ ಸುಷ್ಮಾ ಅಂಧಾರೆ ಅವರನ್ನು ಚುನಾವಣಾ ಪ್ರಚಾರಕ್ಕೆ ಕರೆದೊಯ್ಯಲು ಹೆಲಿಕಾಪ್ಟರ್ ಬರುತ್ತಿತ್ತು.
ಕಾಪ್ಟರ್ ಇಳಿಯುವ ವೇಳೆ ಅದರ ರೆಕ್ಕೆ ತುಂಡಾಗಿ ಇಳಿಯಲು ತಾಂತ್ರಿಕ ತೊಂದರೆ ಅನುಭವಿಸಿ ಅತ್ತಿಂದಿತ್ತ ತೇಲಾಡಲು ಆರಂಭಿಸಿ, ಏಕಾಏಕಿ ಕುಸಿತಕ್ಕೆ ಒಳಗಾಯಿತು.ಇದನ್ನು ಕೂಡಲೇ ಅರಿತ ಪೈಲೆಟ್‌ಗಳು ಹೆಲಿಕಾಪ್ಟರ್‌ನಿಂದ ಹಾರಿ ತಮ್ಮ ಜೀವ ರಕ್ಷಿಸಿಕೊಂಡರು.
ಬಳಿಕ ಕಾಪ್ಟರ್ ಕ್ರಾಷ್ ಆಯಿತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.