ಸಾರಾಂಶ
ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರದಲ್ಲಿ ಶನಿವಾರ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷದ 6 ಶಾಸಕರು ಅಡ್ಡಮತದಾನ ಮಾಡಿದ ಬಳಿಕ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರ ಹಿಂಪಡೆದಿದ್ದ ವಿಕ್ರಮಾದಿತ್ಯ ಸಿಂಗ್, ಮತ್ತೆ ಪಕ್ಷಕ್ಕೆ ಕಂಟಕವಾಗುವ ಸಾಧ್ಯತೆಯಿದೆ.
ಶಿಮ್ಲಾ: ಹಿಮಾಚಲ ಪ್ರದೇಶದ ಕಾಂಗ್ರೆಸ್ ಸರ್ಕಾರದಲ್ಲಿ ಶನಿವಾರ ಬಿಕ್ಕಟ್ಟು ಮತ್ತಷ್ಟು ತೀವ್ರಗೊಂಡಿದೆ. ರಾಜ್ಯಸಭೆಯಲ್ಲಿ ಕಾಂಗ್ರೆಸ್ ಪಕ್ಷದ 6 ಶಾಸಕರು ಅಡ್ಡಮತದಾನ ಮಾಡಿದ ಬಳಿಕ ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿ ನಂತರ ಹಿಂಪಡೆದಿದ್ದ ವಿಕ್ರಮಾದಿತ್ಯ ಸಿಂಗ್, ಮತ್ತೆ ಪಕ್ಷಕ್ಕೆ ಕಂಟಕವಾಗುವ ಸಾಧ್ಯತೆಯಿದೆ.
ಇದೇ ವೇಳೆ, ಶನಿವಾರ ಸಂಪುಟ ಸಭೆಯಯಿಂದ ಇಬ್ಬರು ಸಚಿವರು ಸಭಾತ್ಯಾಗ ಮಾಡಿದ್ದಾರೆ. ಇನ್ನೊಂದು ಕಡೆ ಸಿಎಂ ಸುಖವಿಂದರ್ ಸಿಂಗ್ ಸುಖು ಕಾರ್ಯವೈಖರಿಯಿಂದ ಬೇಸತ್ತ 9 ಕಾಂಗ್ರೆಸ್ ಶಾಸಕರು ನಮ್ಮ ಸಂಪರ್ಕದಲ್ಲಿದ್ದಾರೆ ಎಂದು ಅನರ್ಹ ಕಾಂಗ್ರೆಸ್ ಶಾಸಕ ರಾಜೇಂದ್ರ ರಾಣಾ ಬಾಂಬ್ ಸಿಡಿಸಿದ್ದಾರೆ.
ವಿಕ್ರಮಾದಿತ್ಯ ತಮ್ಮ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಂಬಂಧಿಸಿದ ಎಲ್ಲ ಪದನಾಮಗಳನ್ನು ತೆಗೆದುಹಾಕಿದ್ದು, ಕೇವಲ ‘ಹಿಮಾಚಲದ ಸೇವಕ’ ಎಂಬ ಪದನಾಮವನ್ನು ಮಾತ್ರ ಉಳಿಸಿಕೊಂಡಿದ್ದಾರೆ.
ಅಲ್ಲದೆ ಮೂಲಗಳ ಪ್ರಕಾರ ಅವರು ಶುಕ್ರವಾರ ರಾತ್ರಿ ಅನರ್ಹ ಶಾಸಕರನ್ನು ಭೇಟಿ ಮಾಡಿ ದೆಹಲಿಗೆ ತೆರಳಿದ್ದು, ಬಿಜೆಪಿಯ ಹಿರಿಯ ನಾಯಕರನ್ನು ಭೇಟಿಯಾಗಲಿದ್ದಾರೆ ಎನ್ನಲಾಗಿದೆ.
ಈ ಹಿನ್ನೆಲೆಯಲ್ಲಿ, ಕರ್ನಾಟಕ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಸಂಧಾನದ ಬಳಿಕ ಹಿಮಾಚಲದಲ್ಲಿ ಬಿಕ್ಕಟ್ಟು ಶಮನವಾಯಿತು ಎನ್ನುವಾಗಲೇ ಮತ್ತೆ ಸಮಸ್ಯೆ ಉಲ್ಬಣಗೊಳ್ಳುವ ಸಾಧ್ಯತೆಗಳು ಗೋಚರಿಸುತ್ತಿವೆ.