ಯೂನಸ್‌ ನೇತೃತ್ವದ ಮಧ್ಯಂತರ ಸರ್ಕಾರ, ಹಸೀನಾ ತಂದೆಯೂ ಆಗಿರುವ ಬಾಂಗ್ಲಾದೇಶ ಸಂಸ್ಥಾಪಕ ಶೇಖ್‌ ಮುಜಿಬುರ್‌ ರೆಹಮಾನ್‌ ಅವರ ಚಿತ್ರವಿದ್ದ ನೋಟನ್ನು ಜೂ.1ರಿಂದ ಹಿಂಪಡೆದಿದೆ.

 ಢಾಕಾ: ಪ್ರಧಾನಿಯಾಗಿದ್ದ ಶೇಖ್‌ ಹಸೀನಾ ಪದತ್ಯಾಗ ನಂತರ ಅಧಿಕಾರಕ್ಕೆ ಬಂದಿರುವ ಅವರ ವಿರೋಧಿ ಯೂನಸ್‌ ನೇತೃತ್ವದ ಮಧ್ಯಂತರ ಸರ್ಕಾರ, ಹಸೀನಾ ತಂದೆಯೂ ಆಗಿರುವ ಬಾಂಗ್ಲಾದೇಶ ಸಂಸ್ಥಾಪಕ ಶೇಖ್‌ ಮುಜಿಬುರ್‌ ರೆಹಮಾನ್‌ ಅವರ ಚಿತ್ರವಿದ್ದ ನೋಟನ್ನು ಜೂ.1ರಿಂದ ಹಿಂಪಡೆದಿದೆ.

ಇದರ ಬದಲು ದೇಶದ ರಾಷ್ಟ್ರೀಯ ಸ್ಮಾರಕಗಳಾದ ಹಿಂದು ಹಾಗೂ ಬೌದ್ಧ ದೇವಾಲಯಗಳು, ದಿ. ಜೈನುಲ್ ಅಬೇದಿನ್‌ರ ಕಲಾಕೃತಿ, 1971ರ ಬಾಂಗ್ಲಾ ವಿಮೋಚನಾ ಯುದ್ಧದಲ್ಲಿ ಮಡಿದವರ ನೆನಪಾರ್ಥ ನಿರ್ಮಾಣವಾದ ರಾಷ್ಟ್ರೀಯ ಹುತಾತ್ಮರ ಸ್ಮಾರಕದ ಚಿತ್ರಗಳನ್ನು ಹಾಕಲಾಗಿದೆ. ಹೊಸ 1000, 50, 20 ಟಾಕಾ ಮುಖಬೆಲೆಯ ಹೊಸ ನೋಟುಗಳು ಜೂ.1ರಿಂದಲೇ ಚಲಾವಣೆಗೆ ಬಂದಿವೆ.

ಬಾಂಗ್ಲಾದಲ್ಲಿ ಹಿಂದು ವಿರೋಧಿ ಹಿಂಸೆ ನಡೆದರೂ ಹಿಂದು ದೇಗುಲ ಚಿತ್ರಕ್ಕೆ ಮಣೆ ಹಾಕಿದ್ದು ವಿಶೇಷ.

ಈ ಬಗ್ಗೆ ಬಾಂಗ್ಲಾ ಬ್ಯಾಂಕ್‌ನ ವಕ್ತಾರ ಆರಿಫ್‌ ಹುಸ್ಸೇನ್‌ ಮಾತನಾಡಿ, ‘ಹೊಸ ನೋಟುಗಳಲ್ಲಿ ಯಾವುದೇ ವ್ಯಕ್ತಿಗಳ ಚಿತ್ರವಿರದು. ಬದಲಿಗೆ, ದೇಶದ ನಿಸರ್ಗ ಮತ್ತು ಹೆಗ್ಗುರುತುಗಳಿರಲಿವೆ’ ಎಂದರು.