ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಾಗಿರುವ ಪಾಕಿಸ್ತಾನದಲ್ಲಿ ಹಿಂದೂಗಳ ಜನಸಂಖ್ಯೆ ಏರಿಕೆ!

| Published : Jul 20 2024, 12:47 AM IST / Updated: Jul 20 2024, 05:26 AM IST

POPULATION

ಸಾರಾಂಶ

ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಹಿಂದೂಗಳ ಜನ ಸಂಖ್ಯೆಯಲ್ಲಿ ಅಚ್ಚರಿಯ ಏರಿಕೆ ಕಂಡುಬಂದಿದೆ. ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಾಗಿರುವ ಪಾಕಿಸ್ತಾನದಲ್ಲಿ 38 ಲಕ್ಷ ಜನಸಂಖ್ಯೆಯೊಂದಿಗೆ ಹಿಂದೂ ಧರ್ಮ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿ ಹೊರಹೊಮ್ಮಿದೆ.

ಇಸ್ಲಾಮಾಬಾದ್‌: ನೆರೆಯ ರಾಷ್ಟ್ರ ಪಾಕಿಸ್ತಾನದಲ್ಲಿ ಹಿಂದೂಗಳ ಜನ ಸಂಖ್ಯೆಯಲ್ಲಿ ಅಚ್ಚರಿಯ ಏರಿಕೆ ಕಂಡುಬಂದಿದೆ. ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಾಗಿರುವ ಪಾಕಿಸ್ತಾನದಲ್ಲಿ 38 ಲಕ್ಷ ಜನಸಂಖ್ಯೆಯೊಂದಿಗೆ ಹಿಂದೂ ಧರ್ಮ ಅತಿದೊಡ್ಡ ಅಲ್ಪಸಂಖ್ಯಾತ ಸಮುದಾಯವಾಗಿ ಹೊರಹೊಮ್ಮಿದೆ.

ಕಳೆದ ವರ್ಷದ ಜಾತಿ ಗಣತಿ ಆಧಾರದ ಮೇಲೆ ಪಾಕಿಸ್ತಾನ ಬ್ಯೂರೋ ಆಫ್ ಸ್ಟಾಟಿಸ್ಟಿಕ್ಸ್‌( ಪಿಬಿಎಸ್‌) ವರದಿ ಪ್ರಕಟಿಸಿದೆ. ಅದರನ್ವಯ ಪಾಕಿಸ್ತಾನದ ಒಟ್ಟು ಜನಸಂಖ್ಯೆ 24.45 ಕೋಟಿ. ಇನ್ನು 2017ರಲ್ಲಿ 35 ಲಕ್ಷದಷ್ಟಿದ್ದ ಹಿಂದೂಗಳ ಸಂಖ್ಯೆ 2023ರಲ್ಲಿ 38 ಲಕ್ಷಕ್ಕೆ ಏರಿಕೆಯಾಗಿದೆ. ಆದರೆ ಒಟ್ಟಾರೆಯಾಗಿ ಪಾಕಿಸ್ತಾನದ ಜನಸಂಖ್ಯೆಯಲ್ಲಿ ಹಿಂದೂಗಳ ಪಾಲು ಶೇ.1.73 ರಷ್ಟಿಂದ ಶೇ.1.61ರಷ್ಟಕ್ಕೆ ಕುಸಿದಿದೆ.

ಇನ್ನು ಕ್ರೈಸ್ತರ ಜನಸಂಖ್ಯೆಯಲ್ಲೂ ಏರಿಕೆ ಕಂಡು ಬಂದಿದ್ದು, 26 ಲಕ್ಷದಿಂದ 33 ಲಕ್ಷಕ್ಕೆ ಏರಿಕೆಯಾಗಿದೆ.

ಮುಸ್ಲಿಂ ಸಂಖ್ಯೆಯಲ್ಲಿ ಇಳಿಕೆ:

ಇನ್ನು ಪಾಕಿಸ್ತಾನದಲ್ಲಿ ಕಳೆದ ಆರು ವರ್ಷಗಳಲ್ಲಿ ಮುಸ್ಲಿಂ ಜನಸಂಖ್ಯೆಯಲ್ಲಿ ಕೊಂಚ ಇಳಿಕೆ ಕಂಡು ಬಂದಿದೆ. ಮುಸ್ಲಿಂ ಬಹುಸಂಖ್ಯಾತ ರಾಷ್ಟ್ರವಾಗಿರುವ ಪಾಕ್‌ನಲ್ಲಿ, ಮುಸ್ಲಿಮರು 2017ರಲ್ಲಿ ಶೇ. 96.47ರಷ್ಟಿದ್ದರು. ಆದರೆ 2023ರಲ್ಲಿ ಆ ಪ್ರಮಾಣದಲ್ಲಿ ಇಳಿಕೆಯಾಗಿದ್ದು, ಶೇ.96.35ರಷ್ಟಿದ್ದಾರೆ ಎಂದು ಅಂಕಿ ಅಂಶ ಹೇಳಿದೆ.