ಸಾರಾಂಶ
ವಿಶ್ವ ಪ್ಯಾರಾ ಅರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ 18 ವರ್ಷದ ಶೀತಲ್ ದೇವಿ ಇತಿಹಾಸ ಬರೆದಿದ್ದಾರೆ. ಕೈಗಳಿಲ್ಲದ ಮಹಿಳೆಯೊಬ್ಬರು ವಿಶ್ವ ಚಾಂಪಿಯನ್ ಆಗಿದ್ದು ಇದೇ ಮೊದಲು. ಮತ್ತೊಂದೆಡೆ ವೈಯಕ್ತಿಕ ವಿಭಾಗದಲ್ಲಿ ತೋಮನ್ ಕುಮಾರ್‌ರ ಸ್ವರ್ಣ ಸೇರಿ ಭಾರತ ಕೂಟದಲ್ಲಿ 5 ಪದಕ ಜಯಿಸಿದೆ.
ಗ್ವಾಂಗ್‌ಜು( ದಕ್ಷಿಣ ಕೊರಿಯಾ): ಇಲ್ಲಿ ನಡೆಯುತ್ತಿರುವ ವಿಶ್ವ ಪ್ಯಾರಾ ಅರ್ಚರಿ ಚಾಂಪಿಯನ್‌ಶಿಪ್‌ನಲ್ಲಿ ಭಾರತದ 18 ವರ್ಷದ ಶೀತಲ್ ದೇವಿ ಇತಿಹಾಸ ಬರೆದಿದ್ದಾರೆ. ಕೈಗಳಿಲ್ಲದ ಮಹಿಳೆಯೊಬ್ಬರು ವಿಶ್ವ ಚಾಂಪಿಯನ್ ಆಗಿದ್ದು ಇದೇ ಮೊದಲು. ಮತ್ತೊಂದೆಡೆ ವೈಯಕ್ತಿಕ ವಿಭಾಗದಲ್ಲಿ ತೋಮನ್ ಕುಮಾರ್‌ರ ಸ್ವರ್ಣ ಸೇರಿ ಭಾರತ ಕೂಟದಲ್ಲಿ 5 ಪದಕ ಜಯಿಸಿದೆ.
ಮಹಿಳೆಯರ ಕಾಂಪೌಂಡ್ ವಿಭಾಗದ ವೈಯಕ್ತಿಕ ಸ್ಪರ್ಧೆಯಲ್ಲಿ ಶೀತಲ್, ವಿಶ್ವ ನಂ.1 ಟರ್ಕಿಯ ಒಝ್ನೂರ್ ಗಿರ್ದಿ ವಿರುದ್ಧ 146-143ರಲ್ಲಿ ಗೆದ್ದರು.
ಇದಕ್ಕೂ ಮೊದಲು ಶೀತಲ್ ಅವರು ತೋಮನ್ ಕುಮಾರ್‌ರ ಜತೆಗೂಡಿ ಕಾಂಪೌಂಡ್ ಮಿಶ್ರ ವಿಭಾಗದಲ್ಲಿ ಕಂಚು ಗೆದ್ದಿದ್ದರು. ನಂತರ ನಡೆದ ಪುರುಷರ ಕಾಂಪೌಂಡ್ ವೈಯಕ್ತಿಕ ವಿಭಾಗದಲ್ಲಿ ತೋಮರ್ ಭಾರತದ ರಾಕೇಶ್‌ರನ್ನು ಸೋಲಿಸಿದರು. ಮಹಿಳೆ ತಂಡ ವಿಭಾಗದಲ್ಲಿ ಶೀತಲ್ ಹಾಗೂ ಸರಿತಾ ಬೆಳ್ಳಿಗೆ ತೃಪ್ತಿಪಟ್ಟರು.