ಸಾರಾಂಶ
ದೆಹಲಿಯಲ್ಲಿ ನೆಲೆಸಿರುವ ಪಾಕಿಸ್ತಾನದ ನಿರಾಶ್ರಿತ ಹಿಂದೂಗಳು ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನದ ಬಗ್ಗೆ ಸೋಮವಾರ ಹರ್ಷ ವ್ಯಕ್ತಪಡಿಸಿದ್ದಾರೆ.
ನವದೆಹಲಿ/ಕೋಲ್ಕತಾ: ದೆಹಲಿಯಲ್ಲಿ ನೆಲೆಸಿರುವ ಪಾಕಿಸ್ತಾನದ ನಿರಾಶ್ರಿತ ಹಿಂದೂಗಳು ವಿವಾದಿತ ಪೌರತ್ವ ತಿದ್ದುಪಡಿ ಕಾಯ್ದೆಯ ಅನುಷ್ಠಾನದ ಬಗ್ಗೆ ಸೋಮವಾರ ಹರ್ಷ ವ್ಯಕ್ತಪಡಿಸಿದ್ದಾರೆ. ‘ನಾವು ಕೊನೆಗೂ ಭಾರತೀಯರು ಎಂದು ಕರೆಯಲ್ಪಡುತ್ತೇವೆ’ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.
ಹಾಗೆಯೇ ಪಶ್ಚಿಮ ಬಂಗಾಳದ ಮತುವಾ ಸಮುದಾಯವು ಪೌರತ್ವ ತಿದ್ದುಪಡಿ ಕಾಯ್ದೆ ಜಾರಿ ಆದ ನಂತರ ಸಂಜೆ ಸಂಬ್ರಮಾಚಣೆ ನಡೆಸಿತು. ಇದು ತಮ್ಮ ಎರಡನೇ ಸ್ವಾತಂತ್ರ್ಯ ದಿನ ಎಂದು ಬಾಂಗ್ಲಾ ಮೂಲದ ಮತುವಾ ಸಮುದಾಯ ಹೇಳಿಕೊಂಡಿದೆ.