ಸಾರಾಂಶ
ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಆತ್ಮಹತ್ಯೆ ಹಿನ್ನೆಲೆ ಕೋಟಾದಲ್ಲಿ ಹಾಸ್ಟೆಲ್‌ನ್ನು ಸೀಲ್ ಮಾಡಲಾಗಿದೆ.
ಕೋಟಾ: ರಾಜಸ್ಥಾನದ ಕೋಟಾದಲ್ಲಿ ಇತ್ತೀಚೆಗೆ ಮತ್ತೊಬ್ಬ ವಿದ್ಯಾರ್ಥಿ ಆತ್ಮಹತ್ಯೆ ಮಾಡಿಕೊಂಡ ಹಾಸ್ಟೆಲ್‌ನಲ್ಲಿ ‘ಆತ್ಮಹತ್ಯೆ ತಡೆ ಫ್ಯಾನ್ ಅಥವಾ ಸ್ಪ್ರಿಂಗ್ ಫ್ಯಾನ್’ಗಳನ್ನು ಅಳವಡಿಸಲಾಗಿಲ್ಲ ಎಂಬ ಕಾರಣಕ್ಕೆ ಹಾಸ್ಟೆಲ್ ಅನ್ನು ಅಧಿಕಾರಿಗಳು ವಶಕ್ಕೆ ಪಡೆದುಕೊಂಡಿದ್ದಾರೆ.
ಕೋಟಾದ ರಾಜೀವ್ ಗಾಂಧಿ ನಗರದಲ್ಲಿದ್ದ ಕಾಂಚನ ರೆಸಿಡೆನ್ಸಿಯಲ್ಲಿ ವಾಸವಿದ್ದ ನೀಟ್ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿಯೊಬ್ಬ ಜ.23 ರಂದು ತನ್ನ ಕೊಠಡಿಯಲ್ಲಿ ಫ್ಯಾನ್‌ಗೆ ನೇಣು ಬಿಗಿದುಕೊಂಡು ಸಾವನ್ನಪ್ಪಿದ್ದ. ಆದರೆ ವಿದ್ಯಾರ್ಥಿಯು ಆತ್ಮಹತ್ಯೆ ಮಾಡಿಕೊಳ್ಳು ಯತ್ನಿಸಿದರೆ ಫ್ಯಾನ್ ಕೆಳಗೆ ಬೀಳುವ ಹಾಗೆ ಸೈರನ್ ಹೊಡೆಯುವ ತಂತ್ರಜ್ಞಾನವಿರುವ ಫ್ಯಾನ್ ಅಳವಡಿಸುವಂತೆ ಈ ಹಿಂದೆಯೇ ಜಿಲ್ಲಾಡಳಿತ ಸೂಚಿಸಿತ್ತು. ಆದರೂ ನಿಯಮ ಪಾಲಿಸದ್ದಕ್ಕೆ ಹಾಸ್ಟೆಲ್ ಅನ್ನು ಮುಚ್ಚಲಾಗಿದೆ.