ಮುಂಬೈನಲ್ಲಿ ಬಿಗ್‌ಬಿ ಪಕ್ಕದ ಮನೆ ಬೇಕಾ? ಬರೀ ₹25 ಕೋಟಿ ಕೊಡಿ

| Published : Mar 14 2024, 02:03 AM IST

ಮುಂಬೈನಲ್ಲಿ ಬಿಗ್‌ಬಿ ಪಕ್ಕದ ಮನೆ ಬೇಕಾ? ಬರೀ ₹25 ಕೋಟಿ ಕೊಡಿ
Share this Article
  • FB
  • TW
  • Linkdin
  • Email

ಸಾರಾಂಶ

ಮುಂಬೈನಲ್ಲಿ ಅಮಿತಾಭ್‌ ಬಚ್ಚನ್‌ ವಾಸಿಸುವ ಪಕ್ಕದ ಮನೆ ಹರಾಜು ಪ್ರಕ್ರಿಯೆ ಮಾ.27ಕ್ಕೆ ನಡೆಯಲಿದ್ದು, ಮೂಲ ಬೆಲೆಯಾಗಿ 25 ಕೋಟಿ ರು.ಗಳನ್ನು ನಿಗದಿಪಡಿಸಲಾಗಿದೆ.

ಮುಂಬೈ: ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಅವರ ಮನೆ ಪಕ್ಕ ಯಾರಿಗಾರೂ ಮನೆ ಮಾಡಬೇಕು ಎಂದು ಆಸೆ ಇದ್ದರೆ ಅವರಿಗೊಂದು ಸಿಹಿ ಸುದ್ದಿ.

ಮುಂಬೈನ ಜುಹೂ ಪ್ರಾಂತ್ಯದಲ್ಲಿರುವ ಅಮಿತಾಭ್‌ ಬಚ್ಚನ್‌ ಅವರ ಜಾಲ್ಸಾ ನಿವಾಸದ ಪಕ್ಕದ ಮನೆ ಮಾರಾಟಕ್ಕಿದೆ.

ಈ ಮನೆಯನ್ನು ಡಚ್ಚಿಸ್‌ಲ್ಯಾಂಡ್‌ ಬ್ಯಾಂಕ್‌ ಹರಾಜು ಪ್ರಕ್ರಿಯೆಗೆ ಒಳಪಡಿಸಿದ್ದು, ಇದರ ಮೂಲ ಬೆಲೆ 25 ಕೋಟಿ ರು. ನಿಗದಿಪಡಿಸಿದೆ.

ಈ ಮನೆಯ 3339 ಚದರ ಅಡಿ ಇದ್ದು, ಇದರ ಹರಾಜು ಮಾ.27ರಂದು ನಡೆಯಲಿದೆ ಎಂದು ಬ್ಯಾಂಕ್‌ ತಿಳಿಸಿದೆ.