ರಾಜ್ಯದಲ್ಲಿ ವಕ್ಫ್‌ಕಾಯ್ದೆ ಅನುಷ್ಠಾನಮಾಡಲ್ಲ - ಕಾಯ್ದೆಗೆ ನಮ್ಮ ಸರ್ಕಾರದ ವಿರೋಧವಿದೆ : ಜಮೀರ್‌

| N/A | Published : Apr 14 2025, 01:20 AM IST / Updated: Apr 14 2025, 05:08 AM IST

Zameer Ahmed Khan
ರಾಜ್ಯದಲ್ಲಿ ವಕ್ಫ್‌ಕಾಯ್ದೆ ಅನುಷ್ಠಾನಮಾಡಲ್ಲ - ಕಾಯ್ದೆಗೆ ನಮ್ಮ ಸರ್ಕಾರದ ವಿರೋಧವಿದೆ : ಜಮೀರ್‌
Share this Article
  • FB
  • TW
  • Linkdin
  • Email

ಸಾರಾಂಶ

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಕ್ಫ್ ತಿದ್ದುಪಡಿ ಕಾಯ್ದೆಗೆ ನಮ್ಮ ಸರ್ಕಾರದ ವಿರೋಧವಿದ್ದು, ರಾಜ್ಯದಲ್ಲಿ ಈ ಕಾನೂನು ಜಾರಿಗೆ ತರದಿರಲು ನಿರ್ಧರಿಸಲಾಗಿದೆ ಎಂದು ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ ಹೇಳಿದ್ದಾರೆ.

 ಹುಬ್ಬಳ್ಳಿ : ಕೇಂದ್ರ ಸರ್ಕಾರ ಜಾರಿಗೊಳಿಸಿರುವ ವಕ್ಫ್ ತಿದ್ದುಪಡಿ ಕಾಯ್ದೆಗೆ ನಮ್ಮ ಸರ್ಕಾರದ ವಿರೋಧವಿದ್ದು, ರಾಜ್ಯದಲ್ಲಿ ಈ ಕಾನೂನು ಜಾರಿಗೆ ತರದಿರಲು ನಿರ್ಧರಿಸಲಾಗಿದೆ ಎಂದು ವಸತಿ ಸಚಿವ ಜಮೀರ್‌ ಅಹಮದ್‌ ಖಾನ್‌ ಹೇಳಿದ್ದಾರೆ.

ಭಾನುವಾರ ಇಲ್ಲಿ ಸುದ್ದಿಸಂಸ್ಥೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ ಅವರು, ವಕ್ಫ್ ತಿದ್ದುಪಡಿ ಕಾಯ್ದೆಯನ್ನು ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ, ತಮಿಳುನಾಡು ಮುಖ್ಯಮಂತ್ರಿ ಸ್ಟಾಲಿನ್‌ ಹಾಗೂ ಕೇರಳ ಸರ್ಕಾರಗಳು ಜಾರಿಗೊಳಿಸದಿರಲು ನಿರ್ಧಾರ ತೆಗೆದುಕೊಂಡಿವೆ. ಹಾಗಾಗಿ ಕರ್ನಾಟಕದಲ್ಲೂ ವಕ್ಫ್ ತಿದ್ದುಪಡಿ ಕಾಯ್ದೆ ಜಾರಿಗೆ ತರುವುದಿಲ್ಲ ಎಂದು ಹೇಳುವ ಮೂಲಕ ಕರ್ನಾಟಕದ ನಿಲುವನ್ನು ಸ್ಪಷ್ಟಪಡಿಸಿದರು.--ಆಯ್ಕೆಯೇ ಇಲ್ಲ, ಜಾರಿ

ಮಾಡ್ಲೇಬೇಕು: ಜೋಶಿ

ಹುಬ್ಬಳ್ಳಿ: ವಕ್ಫ್‌ ತಿದ್ದುಪಡಿ ಕಾಯ್ದೆ ಕೇಂದ್ರದ ಕಾನೂನು. ಇದನ್ನು ಎಲ್ಲ ರಾಜ್ಯಗಳಲ್ಲೂ ಜಾರಿಗೆ ತರಲೇ ಬೇಕು. ಹಾಗಾಗಿ ಕರ್ನಾಟಕ ರಾಜ್ಯದಲ್ಲೂ ಜಾರಿಗೆ ತರಬೇಕು. ಇದಕ್ಕೆ ಬೇರೆ ಯಾವ ಆಯ್ಕೆಯೂ ಇಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದಾರೆ.

ವಸತಿ ಸಚಿವ ಜಮೀರ ಅಹಮದ್‌ ಖಾನ್‌ ರಾಜ್ಯದಲ್ಲಿ ವಕ್ಫ್‌ ತಿದ್ದುಪಡಿ ಕಾಯ್ದೆ ಜಾರಿಗೆ ತರುವುದಿಲ್ಲ ಎಂದು ನೀಡಿರುವ ಹೇಳಿಕೆಗೆ ಪ್ರತಿಕ್ರಿಯಿಸಿ, ಇದು ಕೇಂದ್ರ ಸರ್ಕಾರ ಮಾಡಿದ ಕಾನೂನು. ಪ್ರತಿಯೊಬ್ಬರೂ ಇದನ್ನು ಜಾರಿಗೆ ತರಲೇ ಬೇಕು ಎಂದರು.

 2-3 ರಾಜ್ಯಗಳಲ್ಲಿ ವಿರೋಧವಿರುವುದು ಸಹಜ. ಹಾಗಂತ ಕಾಯ್ದೆ ಜಾರಿಗೊಳಿಸುವುದಿಲ್ಲ ಎಂಬುದು ಸಮಂಜಸವಲ್ಲ. ಕರ್ನಾಟಕದಲ್ಲೂ ಈ ಕಾಯ್ದೆ ಜಾರಿಗೊಳಿಸಲೇಬೇಕು. ಬೇರೆ ಆಯ್ಕೆಯಿಲ್ಲ ಎಂದು ಹೇಳಿದರು.