ಐ ಲವ್‌ ಮಹಮ್ಮದ್‌ V/S ಮಹಾದೇವ ದಂಗಲ್

| N/A | Published : Sep 26 2025, 01:03 AM IST

ಸಾರಾಂಶ

ಉತ್ತರಪ್ರದೇಶದಲ್ಲಿ ಇಸ್ಲಾಮಿಕ ಧಾರ್ಮಿಕ ಕಾರ್ಯಕ್ರಮವೊಂದರ ವೇಳೆ ಹುಟ್ಟಿಕೊಂಡ ಐ ಲವ್‌ ಮೊಹಮ್ಮದ್‌ ಪೋಸ್ಟರ್‌ ವಿವಾದ ಮತ್ತು ಅದಕ್ಕೆ ಪ್ರತಿಯಾಗಿ ಐ ಲವ್‌ ಮಹಾದೇವ್‌ ಪೋಸ್ಟರ್‌ ವಾರ್‌ ಇದೀಗ ದೇಶದ 8 ರಾಜ್ಯಕ್ಕೆ ಹಬ್ಬಿದೆ. ಹಲವು ರಾಜ್ಯಗಳಲ್ಲಿ ಈ ವಿಷಯ ಹಿಂದೂ- ಮುಸ್ಲಿಂ ಗಲಭೆಗೆ ಕಾರಣವಾಗಿದೆ.

 ಉತ್ತರಪ್ರದೇಶದಲ್ಲಿ ಇಸ್ಲಾಮಿಕ ಧಾರ್ಮಿಕ ಕಾರ್ಯಕ್ರಮವೊಂದರ ವೇಳೆ ಹುಟ್ಟಿಕೊಂಡ ಐ ಲವ್‌ ಮೊಹಮ್ಮದ್‌ ಪೋಸ್ಟರ್‌ ವಿವಾದ ಮತ್ತು ಅದಕ್ಕೆ ಪ್ರತಿಯಾಗಿ ಐ ಲವ್‌ ಮಹಾದೇವ್‌ ಪೋಸ್ಟರ್‌ ವಾರ್‌ ಇದೀಗ ದೇಶದ 8 ರಾಜ್ಯಕ್ಕೆ ಹಬ್ಬಿದೆ. ಹಲವು ರಾಜ್ಯಗಳಲ್ಲಿ ಈ ವಿಷಯ ಹಿಂದೂ- ಮುಸ್ಲಿಂ ಗಲಭೆಗೆ ಕಾರಣವಾಗಿದೆ.

ವಿವಾದ ಹುಟ್ಟಿದ್ದು ಈದ್‌ ಮಿಲಾದ್‌ ವೇಳೆ

ಉತ್ತರಪ್ರದೇಶದ ಕಾನ್ಪುರದಲ್ಲಿ ಸೆ.4ರಂದು ನಡೆದ ಈದ್‌ ಇ ಮಿಲಾದ್‌ ಉನ್‌ ನಬಿ ಮೆರವಣಿಗೆಯಲ್ಲಿ ಕೆಲ ಯುವಕರು ‘ ಐ ಲವ್‌ ಮಹಮ್ಮದ್‌’ ಎಂದು ಬರೆದಿದ್ದ ಪೋಸ್ಟರ್‌ಗಳನ್ನು ಟ್ರಾಫಿಕ್‌ ಜಂಕ್ಷನ್‌ಗಳು, ಅಂಗಡಿಗಳ ಮುಂಭಾಗದಲ್ಲಿ ಪ್ರದರ್ಶಿಸಿದ್ದರು. ಆದರೆ ಇದು ಹೊಸ ಸಂಪ್ರದಾಯ. ಮೆರವಣಿಗೆ ಹೋಗುವ ಮಾರ್ಗದಲ್ಲಿ ಇಂಥ ಪೋಸ್ಟರ್‌ ಪ್ರದರ್ಶನ ಕೋಮುಸಾಮರಸ್ಯಕ್ಕೆ ಧಕ್ಕೆ ತರಬಹುದು ಎಂದು ಹಿಂದೂ ಯುವಕರು ವಿರೋಧ ವ್ಯಕ್ತಪಡಿಸಿದರು. ಮತ್ತೊಂದೆಡೆ ಅನುಮತಿ ಪಡೆಯದ್ದಕ್ಕೆ ಪೊಲೀಸರು ಪೋಸ್ಟರ್‌ ಕಿತ್ತೆಸೆದರು. ಅಲ್ಲಿಂದ ದಂಗಲ್‌ ಆರಂಭ. ಜಾಲತಾಣದಲ್ಲಿ ಅಭಿಯಾನ ಶುರು. ಮುಸ್ಲಿಮರು ಬೀದಿಗಿಳಿದು ಪೋಸ್ಟರ್‌ಗಳನ್ನು ಮತ್ತೆ ಹಾಕಬೇಕೆಂದು ಪಟ್ಟು ಹಿಡಿದರು. ಲಾಠಿ ಜಾರ್ಜ್‌ ನಡೆಯಿತು. ಹಲವರ ವಿರುದ್ಧ ಕೇಸ್‌ ಬಿತ್ತು. ಬಳಿಕ ವಿವಾದ ಕಾನ್ಪುರದಿಂದ, ರಾಯ್‌ಬರೇಲಿ, ಸಂಭಲ್‌ನಂತಹ ಇತರ ಜಿಲ್ಲೆಗಳಿಗೂ ಹಬ್ಬಿತು.

ಮತ್ತಷ್ಟು ರಾಜ್ಯಗಳಿಗೆ ವಾರ್‌ ವಿಸ್ತರಣೆ

ವಿವಾದ ಜೋರಾಗುತ್ತಿರುವ ನಡುವೆಯೇ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್‌ ಒವೈಸಿ ಐ ಲವ್‌ ಮಹಮ್ಮದ್‌ ಎನ್ನುವುದು ಅಪರಾಧ ಅಲ್ಲ ಎಂದು ಬಿಟ್ಟರು. ಅಭಿಯಾನಕ್ಕೆ ಮತ್ತಷ್ಟು ಬಲ ನೀಡಿತು, ಪರಿಣಾಮ ದೇಶದ ಇತರ ರಾಜ್ಯಗಳಿಗೂ ಸಂಘರ್ಷ ಹಬ್ಬಿತು. ಮಹಾರಾಷ್ಟ್ರದ ನಾಗ್ಪುರ, ಮುಂಬೈ, ತೆಲಂಗಾಣದ ಹೈದರಾಬಾದ್‌, ಉತ್ತರಾಖಂಡ್‌, ಗುಜರಾತ್‌, ಕರ್ನಾಟಕ, ಮಹಾರಾಷ್ಟ್ರ, ಬಿಹಾರ ಸೇರಿ ಹಲವೆಡೆ ಐ ಲವ್‌ ಮಹಮ್ಮದ್‌ ಬ್ಯಾನರ್‌ ಕಾಣಿಸತೊಡಗಿದವು.

ಐ ಲವ್‌ ಮಹಾದೇವ ಮೂಲಕ ತಿರುಗೇಟು

ಒಂದೆಡೆ ಮುಸಲ್ಮಾನರು ಐ ಲವ್‌ ಮಹಮ್ಮದ್‌ ಎಂದು ಆಂದೋಲನ ಆರಂಭಿಸಿದ್ದರೆ, ಹಿಂದೂಗಳು ಅದಕ್ಕೆ ಕೌಂಟರ್‌ ಆಗಿ ಐ ಲವ್ ಮಹಾದೇವ ಎನ್ನುವ ಅಭಿಯಾನ ಆರಂಭಿಸಿದ್ದಾರೆ. ಈ ಬರಹಗಳಿರುವ ಸಾಲುಗಳು ಜಾಲತಾಣದಲ್ಲಿ ಭಾರೀ ಟ್ರೆಂಡ್‌ ಆಗುತ್ತಿದೆ. ಇದು ಮೊದಲು ಆರಂಭವಾಗಿದ್ದು ಕೂಡ ಉತ್ತರ ಪ್ರದೇಶದಲ್ಲಿ. ವಾರಣಾಸಿಯಲ್ಲಿ ಧಾರ್ಮಿಕ ಮುಖಂಡರು ‘ಐ ಲವ್ ಮಹಾದೇವ್’ ಎಂದು ಬರೆದ ಫಲಕಗಳನ್ನು ಹಿಡಿದು ಮಂಗಳವಾರ ಬೀದಿಗಿಳಿದಿದ್ದರು.

ಕರ್ನಾಟಕದಲ್ಲೂ ಧರ್ಮ ದಂಗಲ್‌ಬೆಣ್ಣೆನಗರಿ ದಾವಣಗೆರೆಗೂ ಐ ಲವ್‌ ಮೊಹಮ್ಮದ್‌ ಪೋಸ್ಟರ್‌ ವಾರ್‌ ಕಾಲಿಟ್ಟಿದೆ. ಬುಧವಾರ ರಾತ್ರೋರಾತ್ರಿ ಈ ಬರಹಗಳಿದ್ದ ಪೋಸ್ಟರ್‌ಗಳನ್ನು, ಬ್ಯಾನರ್‌ಗಳನ್ನು ನಗರದಲ್ಲಿ ಹಾಕಲಾಗಿತ್ತು, ಇದು ಹಿಂದೂಗಳ ಆಕ್ರೋಶಕ್ಕೂ ಕಾರಣವಾಗಿ ಪ್ರತಿಭಟನೆ ಸ್ವರೂಪ ಪಡೆಯಿತು. ಲಾಠಿ ಚಾರ್ಜ್‌ ಹಂತವೂ ತಲುಪಬೇಕಾಯಿತು. ಎರಡು ಗುಂಪಿನ ನಡುವೆ ಘರ್ಷಣೆ ನಡೆಯಿತು. ನಾಲ್ವರು ಗಾಯಗೊಂಡಿದ್ದರು.

Read more Articles on