ಸಾರಾಂಶ
ಮಹಾಕುಂಭದ ವೇಳೆ ದೋಣಿ ಚಲಾಯಿಸುತ್ತಿದ್ದ ಕುಟುಂಬವೊಂದು 30 ಕೋಟಿ ರು. ಸಂಪಾದಿಸಿದೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ ಬೆನ್ನಲ್ಲೇ, ಅಂಥದ್ದೊಂದು ಸಾಧನೆ ಮಾಡಿದ ನಾವಿಕ ಪಿಂಟು ಮಹಾರಾ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
ಪ್ರಯಾಗ್‌ರಾಜ್: ಮಹಾಕುಂಭದ ವೇಳೆ ದೋಣಿ ಚಲಾಯಿಸುತ್ತಿದ್ದ ಕುಟುಂಬವೊಂದು 30 ಕೋಟಿ ರು. ಸಂಪಾದಿಸಿದೆ ಎಂದು ಉತ್ತರಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಹೇಳಿದ ಬೆನ್ನಲ್ಲೇ, ಅಂಥದ್ದೊಂದು ಸಾಧನೆ ಮಾಡಿದ ನಾವಿಕ ಪಿಂಟು ಮಹಾರಾ ತಮ್ಮ ಅನುಭವ ಹಂಚಿಕೊಂಡಿದ್ದಾರೆ.
‘2019ರ ಅರ್ಧಕುಂಭ ಮೇಳದ ವೇಳೆಯೂ ದೋಣಿ ಸಾಗಿಸುತ್ತಿದ್ದೆವು. ಮಹಾಕುಂಭದ ವೇಳೆಗೆ ವೃತ್ತಿಯನ್ನು ವಿಸ್ತರಿಸುವ ಕನಸು ಇತ್ತಾದರೂ ಆರ್ಥಿಕ ಶಕ್ತಿ ಇರಲಿಲ್ಲ. ಹಾಗಾಗಿ ಬ್ಯಾಂಕ್‌ನಿಂದ ಸಾಲ ತೆಗೆದುಕೊಂಡು, ಚಿನ್ನವನ್ನೆಲ್ಲ ಅಡವಿಟ್ಟು ಕಷ್ಟಪಟ್ಟು 70 ಹೊಸ ದೋಣಿಗಳನ್ನು ಖರೀದಿಸಿದೆವು. ಆದರೆ ಇದೆಲ್ಲವನ್ನೂ ಮೀರಿದ ಲಾಭವಾಗಿದೆ’ ಎಂದು ತಿಳಿಸಿದ್ದಾರೆ.‘ನನ್ನ ಬಳಿ 300 ಜನರ ತಂಡವಿತ್ತು. 250 ನಾವಿಕರಿದ್ದರು. ಪ್ರಯಾಣಿಕರನ್ನು ಕರೆದೊಯ್ಯುವುದರಿಂದ ಹಿಡಿದು ಅವರಿಗೆ ಸ್ನಾನದ ವ್ಯವಸ್ಥೆ ಮಾಡುವವರೆಗೆ ಎಲ್ಲ ಕೆಲಸಗಳನ್ನು ತಂಡ ಯಶಸ್ವಿಯಾಗಿ ನೋಡಿಕೊಂಡಿತು. ಪ್ರತಿ ಹೆಜ್ಜೆಯಲ್ಲೂ ನನ್ನ ಸಹೋದರರು ಜತೆಗಿದ್ದರು’ ಎಂದು ಹೇಳಿದರು. ಇದೇ ವೇಳೆ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಮತ್ತು ಪ್ರಧಾನಿ ಮೋದಿ ಅವರಿಗೆ ಕೃತಜ್ಞತೆ ಸಲ್ಲಿಸಿದರು.