ಸಾರಾಂಶ
ಮನೆಯಲ್ಲಿ ಕಂತೆಕಂತೆ ಹಣ ಪತ್ತೆಯಾದ ಬೆನ್ನಲ್ಲೇ ಅಹಮದಾಬಾದ್ ಹೈಕೋರ್ಟ್‌ಗೆ ವರ್ಗವಾಗಿದ್ದ ನ್ಯಾ। ಯಶವಂತ್ ವರ್ಮಾ ಅವರ ವಿರುದ್ಧ ಮುಂದಿನ ಸಂಸತ್ ಅಧಿವೇಶನದಲ್ಲಿ ವಾಗ್ದಂಡನೆ ಪ್ರಕ್ರಿಯೆ ಗೊತ್ತುವಳಿ ಮಂಡನೆಗೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.
ಮುಂದಿನ ಅಧಿವೇಶನದಲ್ಲಿ ಗೊತ್ತುವಳಿ
ನವದೆಹಲಿ: ಮನೆಯಲ್ಲಿ ಕಂತೆಕಂತೆ ಹಣ ಪತ್ತೆಯಾದ ಬೆನ್ನಲ್ಲೇ ಅಹಮದಾಬಾದ್ ಹೈಕೋರ್ಟ್‌ಗೆ ವರ್ಗವಾಗಿದ್ದ ನ್ಯಾ। ಯಶವಂತ್ ವರ್ಮಾ ಅವರ ವಿರುದ್ಧ ಮುಂದಿನ ಸಂಸತ್ ಅಧಿವೇಶನದಲ್ಲಿ ವಾಗ್ದಂಡನೆ ಪ್ರಕ್ರಿಯೆ ಗೊತ್ತುವಳಿ ಮಂಡನೆಗೆ ಕೇಂದ್ರ ಸರ್ಕಾರ ಸಿದ್ಧತೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಈ ಸಂಬಂಧ ವಿವಿಧ ಪಕ್ಷಗಳ ಮುಖ್ಯಸ್ಥರೊಂದಿಗೆ ಚರ್ಚಿಸಿ, ನ್ಯಾ। ವರ್ಮ ವಿರುದ್ಧ ಕ್ರಮಕ್ಕೆ ವಿಪಕ್ಷಗಳ ಬೆಂಬಲ ಯಾಚಿಸಲಿದ್ದಾರೆ ಎನ್ನಲಾಗಿದೆ. ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾ। ಸಂಜೀವ್ ಖನ್ನಾ ಅವರು ರಚಿಸಿದ 3 ಸದಸ್ಯರ ಸಮಿತಿ ಈಗಾಗಲೇ ವರ್ಮಾ ವಿರುದ್ಧ ದೋಷಾರೋಪಣೆ ವರದಿಯನ್ನು ಸಲ್ಲಿಸಿದೆ. ಅದರ ಬೆನ್ನಲ್ಲೇ ಸರ್ಕಾರ ಈ ಕ್ರಮಕ್ಕೆ ಮುಂದಾಗಿದೆ.ಒಂದು ವೇಳೆ ವಾಗ್ದಂಡನೆಗೂ ಮುನ್ನ ನ್ಯಾ. ವರ್ಮಾ ರಾಜೀನಾಮೆ ನೀಡದೇ ಹೋದಲ್ಲಿ, ವಾಗ್ದಂಡನೆಗೆ ಗುರಿಯಾಗುವ ಮೊದಲ ಜಡ್ಜ್ ಎನ್ನಿಸಿಕೊಳ್ಳಲಿದ್ದಾರೆ.ಮಾರ್ಚ್‌ನಲ್ಲಿ ನ್ಯಾ। ವರ್ಮಾ ಮನೆಯ ಗೋದಾಮಿಗೆ ಬೆಂಕಿ ಹತ್ತಿಕೊಂಡಾಗ, ಸುಟ್ಟುಹೋದ ನೋಟಿನ ಕಂತೆಗಳು ಪತ್ತೆಯಾಗಿದ್ದವು. ಇದರ ಬೆನ್ನಲ್ಲೇ ಅವರನ್ನು ದೆಹಲಿಯಿಂದ ಅಹಮದಾಬಾದ್ ನ್ಯಾಯಾಲಯಕ್ಕೆ ವರ್ಗಾಯಿಸಲಾಗಿತ್ತು.
)
;Resize=(128,128))
;Resize=(128,128))
;Resize=(128,128))
;Resize=(128,128))
;Resize=(128,128))