ಸಾರಾಂಶ
ಅರುಣಾಚಲ ಪ್ರದೇಶದಲ್ಲಿ ಸದಾ ತಕರಾರು ತೆಗೆಯುವ ಚೀನಾಗೆ ಭಾರತ ತಿರುಗೇಟು ನೀಡಲು ಮುಂದಾಗಿದ್ದು, ಚೀನಾ ಆಕ್ರಮಿತ ಟಿಬೆಟ್‌ನಲ್ಲಿ 30 ಪ್ರದೇಶಗಳನ್ನು ಮರುನಾಮಕರಣ ಮಾಡಿ ಬಹಿರಂಗ ಮಾಡಲು ನಿರ್ಧರಿಸಿದೆ.
ನವದೆಹಲಿ: ಅರುಣಾಚಲ ಪ್ರದೇಶದಲ್ಲಿ ಸದಾ ತಕರಾರು ತೆಗೆಯುವ ಚೀನಾಗೆ ಭಾರತ ತಿರುಗೇಟು ನೀಡಲು ಮುಂದಾಗಿದ್ದು, ಚೀನಾ ಆಕ್ರಮಿತ ಟಿಬೆಟ್‌ನಲ್ಲಿ 30 ಪ್ರದೇಶಗಳನ್ನು ಮರುನಾಮಕರಣ ಮಾಡಿ ಬಹಿರಂಗ ಮಾಡಲು ನಿರ್ಧರಿಸಿದೆ.
ಚೀನಾ ಗಡಿಯಲ್ಲಿರುವ ವಾಸ್ತವಿಕ ಗಡಿ ನಿಯಂತ್ರಣಾ ರೇಖೆ(ಎಲ್‌ಎಸಿ) ಆಸುಪಾಸಿನಲ್ಲಿ ಬರುವ 11 ವಸತಿ ಪ್ರದೇಶಗಳು, 12 ಪರ್ವತಗಳು, 4 ನದಿಗಳು, 1 ಕೆರೆ, 1 ಪರ್ವತಕಣಿವೆ ಮತ್ತು 1 ತುಂಡು ಭೂಮಿಯ ಹೆಸರನ್ನು ಬದಲಿಸಲು ಸರ್ಕಾರ ಅನುಮೋದನೆ ನೀಡಿದೆ. ಇದನ್ನು ಭಾರತೀಯ ಸೇನೆ ತನ್ನ ನಕ್ಷೆಯಲ್ಲಿ ಪ್ರಕಟಿಸುವ ಮೂಲಕ ಅರುಣಾಚಲದಲ್ಲಿ ಮರುನಾಮಕರಣ ಮಾಡಿ ಭಾರತಕ್ಕೆ ತೊಂದರೆ ನೀಡುತ್ತಿದ್ದ ಚೀನಾಗೆ ತಿರುಗೇಟು ನೀಡಲು ಮುಂದಾಗಿದೆ.ಚೀನಾ ಅರುಣಾಚಲದಲ್ಲಿ 2017ರಿಂದಲೂ ಹೆಸರುಗಳನ್ನು ಮರುನಾಮಕರಣ ಮಾಡುತ್ತಿದ್ದು, ಇತ್ತೀಚೆಗೆ ಕಳೆದ ಏಪ್ರಿಲ್‌ನಲ್ಲಿ ಹೆಸರುಗಳನ್ನು ಬದಲಿಸಿತ್ತು.