ಸಾರಾಂಶ
ಸೌರಶಕ್ತಿ ಉತ್ಪಾದನೆಯಲ್ಲಿ ಜಪಾನ್ ಅನ್ನು ಹಿಂದಿಕ್ಕಿ ಭಾರತ ಜಾಗತಿಕವಾಗಿ 3ನೇ ಸ್ಥಾನಕ್ಕೆ ತಲುಪಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಹಿತಿ ನೀಡಿದ್ದಾರೆ.
ನವದೆಹಲಿ: ಸೌರಶಕ್ತಿ ಉತ್ಪಾದನೆಯಲ್ಲಿ ಜಪಾನ್ ಅನ್ನು ಹಿಂದಿಕ್ಕಿ ಭಾರತ ಜಾಗತಿಕವಾಗಿ 3ನೇ ಸ್ಥಾನಕ್ಕೆ ತಲುಪಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಮಾಹಿತಿ ನೀಡಿದ್ದಾರೆ.
ಈ ಬಗ್ಗೆ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ ಅವರು, ‘ಜಪಾನ್ 96,459 ಜಿಡಬ್ಲ್ಯೂಎಚ್ (ಗಿಗಾವ್ಯಾಟ್/ಗಂಟೆ) ಸೌರಶಕ್ತಿ ಉತ್ಪಾದಿಸಿದರೆ, ಭಾರತ 1,08,494 ಜಿಡಬ್ಲ್ಯೂಎಚ್ ಸೌರಶಕ್ತಿ ಉತ್ಪಾದಿಸುವ ಮೂಲಕ ಜಪಾನ್ ಅನ್ನು ಹಿಂದಿಕ್ಕಿದೆ ಮತ್ತು ಈಗ ವಿಶ್ವದ 3ನೇ ಅತಿದೊಡ್ಡ ಸೌರವಿದ್ಯುತ್ ಉತ್ಪಾದಕ ದೇಶವಾಗಿ ಹೊರಹೊಮ್ಮಿದೆ. ಪ್ರಧಾನಿ ಮೋದಿಯವರ ದೂರದೃಷ್ಟಿಯ ನಾಯಕತ್ವಕ್ಕೆ ಧನ್ಯವಾದಗಳು’ ಎಂದು ತಿಳಿಸಿದ್ದಾರೆ.
ಸೌರಶಕ್ತಿ ಉತ್ಪಾದನೆಯಲ್ಲಿ ಚೀನಾ ಹಾಗೂ ಅಮೆರಿಕ ಮೊದಲ 2 ಸ್ಥಾನಗಳಲ್ಲಿವೆ. ಇದೀಗ ಜಪಾನ್ 4ನೇ ಸ್ಥಾನಕ್ಕೆ ತಳ್ಳಲ್ಪಟ್ಟಿದೆ.