ಇಂಡಿಯಾ ಕೂಟಕ್ಕೆ ಈಗಾಗಲೇ 272 ಕ್ಷೇತ್ರದಲ್ಲಿ ಜಯ : ಜೈರಾಂ

| Published : May 26 2024, 01:33 AM IST / Updated: May 26 2024, 05:04 AM IST

ಇಂಡಿಯಾ ಕೂಟಕ್ಕೆ ಈಗಾಗಲೇ 272 ಕ್ಷೇತ್ರದಲ್ಲಿ ಜಯ : ಜೈರಾಂ
Share this Article
  • FB
  • TW
  • Linkdin
  • Email

ಸಾರಾಂಶ

‘ದೇಶದಲ್ಲಿ ಇದುವರೆಗೆ 6 ಹಂತದಲ್ಲಿ ಮತದಾನ ನಡೆದಿರುವ 486 ಲೋಕಸಭಾ ಕ್ಷೇತ್ರಗಳ ಪೈಕಿ ಇಂಡಿಯಾ ಕೂಟ ಈಗಾಗಲೇ ಬಹುಮತಕ್ಕೆ ಬೇಕಾದ 272 ಕ್ಷೇತ್ರಗಳಲ್ಲಿ ಗೆಲುವನ್ನು ಖಾತರಿ ಪಡಿಸಿಕೊಂಡಿದೆ.

ನವದೆಹಲಿ: ‘ದೇಶದಲ್ಲಿ ಇದುವರೆಗೆ 6 ಹಂತದಲ್ಲಿ ಮತದಾನ ನಡೆದಿರುವ 486 ಲೋಕಸಭಾ ಕ್ಷೇತ್ರಗಳ ಪೈಕಿ ಇಂಡಿಯಾ ಕೂಟ ಈಗಾಗಲೇ ಬಹುಮತಕ್ಕೆ ಬೇಕಾದ 272 ಕ್ಷೇತ್ರಗಳಲ್ಲಿ ಗೆಲುವನ್ನು ಖಾತರಿ ಪಡಿಸಿಕೊಂಡಿದೆ. 350ಕ್ಕೂ ಹೆಚ್ಚು ಕ್ಷೇತ್ರವನ್ನು ಈ ಬಾರಿ ಗೆಲ್ಲುತ್ತೇವೆ’ ಎಂದು ಕಾಂಗ್ರೆಸ್‌ ನಾಯಕ ಜೈರಾಂ ರಮೇಶ್ ಹೇಳಿದ್ದಾರೆ.

6ನೇ ಹಂತ ಮುಗಿದ ಬಳಿಕ ಮಾತನಾಡಿದ ಅವರು, ‘ಇಂಡಿಯಾ ಕೂಟವು ಎನ್‌ಡಿಎಯನ್ನು ಅಳಿಸಿ ಹಾಕುವುದಕ್ಕೆ ಸಿದ್ಧವಾಗಿದೆ. ಪ್ರತಿ ಹಂತದ ಚುನಾವಣೆಯಲ್ಲಿಯೂ ಇಂಡಿಯಾ ಕೂಟದ ಬಲ ಹೆಚ್ಚಾಗಿದೆ.ಇಂಡಿಯಾ ಕೂಟ ಈಗಾಗಲೇ 272ರ ಅರ್ಧ ದಾರಿಯಲ್ಲಿ ಗೆಲುವು ಸಾಧಿಸಿದೆ. ಒಟ್ಟು 350 ಕ್ಷೇತ್ರಗಳಲ್ಲಿ ಗೆಲುವು ಸಾಧಿಸುವ ಗುರಿಯನ್ನು ಹೊಂದಿದ್ದೇವೆ’ ಎಂದಿದ್ದಾರೆ.