ಸಾರಾಂಶ
ನವದೆಹಲಿ: ದೆಹಲಿ ಅಬಕಾರಿ ಹಗರಣದಲ್ಲಿ ಬಂಧಿತರಾಗಿ ಜೈಲು ಸೇರಿರುವ ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಅವರ ಆರೋಗ್ಯ ಬಿಗಡಾಯಿಸುತ್ತಿದೆ. ಅಲ್ಲದೆ ಅವರ ಬಂಧನ ಅಕ್ರಮವಾಗಿದ್ದು ಅವರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಇಂಡಿಯಾ ಕೂಟದ ನಾಯಕರು ಕೇಂದ್ರದ ವಿರುದ್ಧ ಮಂಗಳವಾರ ಜಂತರ್‌ಮಂತರ್ ಎದುರು ಸಭೆ ಸೇರಿ ಪ್ರತಿಭಟಿಸಿದರು.
ವಿಪಕ್ಷಗಳ ಧ್ವನಿಯನ್ನು ಹತ್ತಿಕ್ಕಲಾಗುತ್ತಿದೆ ಎಂದು ಆರೊಪಿಸಿ ‘ಭಾರತ ಮಾತಾಕಿ ಜೈ’, ‘ಸರ್ವಾಧಿಕಾರತ್ವವನ್ನು ಕೊನೆಗೊಳಿಸಿ’ ಎಂಬ ಘೋಷಣೆಗಳನ್ನು ಕೂಗಲಾಯಿತು.‘ಬಿಜೆಪಿಯ ಪಿತೂರಿಯ ಭಾಗವಾಗಿ ಆಪ್‌ನ ಮೂರು ನಾಯಕರಾದ ಕೇಜ್ರಿವಾಲ್, ಮನೀಶ್ ಸಿಸೋಡಿಯಾ ಹಾಗೂ ಸತ್ಯೇಂದ್ರ ಜೈನ್‌ರನ್ನು ಜೈಲಿಗಟ್ಟಲಾಗಿದೆ. ಇದು ಪ್ರಜಾಸತ್ತಾತ್ಮಕವಾಗಿ ಆಯ್ಕೆಯಾದ ಸರ್ಕಾರವನ್ನು ಉರುಳಿಸುವ ಪ್ರಯತ್ನ. ಮೋದಿ ನೇತೃತ್ವದ ಸರ್ಕಾರ ದೆಹಲಿ ಸರ್ಕಾರದ ಕೆಲಸಗಳಿಗೆ ತಡೆ ಒಡ್ಡಿದ ಪರಿಣಾಮ ರಾಜೇಂದ್ರ ನಗರದಲ್ಲಿ ಪ್ರವಾಹದಿಂದಾಗಿ ನೆಲಮಾಳಿಗೆಯಲ್ಲಿ ಮೂವರು ಪ್ರಾಣ ಕಳೆದುಕೊಂಡರು’ ಎಂದು ವಿಪಕ್ಷ ನಾಯಕರು ದೂರಿದರು.
==ವಕೀಲಿಕೆ ನೋಂದಣಿಗೆ 650 ರು. ಶುಲ್ಕ: ಸುಪ್ರೀಂ ಕೋರ್ಟ್ ಆದೇಶ
ನವದೆಹಲಿ: ರಾಜ್ಯ ಬಾರ್ ಕೌನ್ಸಿಲ್‌ಗಳು ಸಾಮಾನ್ಯ ವರ್ಗದ ವ್ಯಕ್ತಿಗಳನ್ನು ವಕೀಲರಾಗಿ ನೋಂದಾಯಿಸಿಕೊಳ್ಳಲು 650 ರು. ಹಾಗೂ ಎಸ್‌ಸಿ,ಎಸ್‌ಟಿ ಕಾನೂನು ಪದವೀಧರರನ್ನು ವಕೀಲರನ್ನಾಗಿ ನೋಂದಾಯಿಸಿಕೊಳ್ಳಲು 125 ರು.ಗಿಂತ ಹೆಚ್ಚಿನ ಶುಲ್ಕಗಳನ್ನು ವಿಧಿಸುವಂತಿಲ್ಲ ಎಂದು ಸುಪ್ರೀಂ ಕೋರ್ಟ್ ಆದೇಶಿಸಿದೆ.ನೋಂದಣಿ ಶುಲ್ಕ ವಿವಾದದ ವಿಚಾರಣೆ ನಡೆಸಿದ್ದ ತ್ರಿಸದಸ್ಯ ಪೀಠ, ‘ಹೆಚ್ಚಿನ ಶುಲ್ಕ ವಿಧಿಸುವುದು ಬಾರ್ ಕೌನ್ಸಿಲ್ ಆಫ್ ಇಂಡಿಯಾ (ಬಿಸಿಐ) ನಿಯಮ ಉಲ್ಲಂಘನೆ. ದುಬಾರಿ ಶುಲ್ಕವು ಬಡ ಯುವ ಪದವೀಧರರ ದಾಖಲಾತಿಗೆ ತೊಂದರೆಯಾಗುತ್ತದೆ’ ಎಂದು ಅಭಿಪ್ರಾಯ ಪಟ್ಟಿದೆ.ಬಿಸಿಐ ಮತ್ತು ರಾಜ್ಯ ಬಾರ್ ಕೌನ್ಸಿಲ್‌ಗಳು ಕಾನೂನು ಪದವೀಧರರನ್ನು ವಕೀಲರನ್ನಾಗಿ ನೋಂದಾಯಿಸಿಕೊಳ್ಳುವ ಅಧಿಕಾರವನ್ನು ಹೊಂದಿರುತ್ತಾರೆ.
==ಇನ್ನೂ ಐಟಿ ರಿಟರ್ನ್ಸ್ ಫೈಲ್ ಮಾಡಿಲ್ವಾ? ಇಂದೇ ಕೊನೆ ದಿನ
ನವದೆಹಲಿ: ಆದಾಯ ತೆರಿಗೆ ರಿಟರ್ನ್ಸ್ ಸಲ್ಲಿಸಲು ಬುಧವಾರ (ಜು.31) ಕೊನೆ ದಿನವಾಗಿದೆ. ಈ ದಿನಾಂಕವನ್ನು ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡುವುದಿಲ್ಲ ಎಂದು ಆದಾಯ ತೆರಿಗೆ ಇಲಾಖೆ ಸ್ಪಷ್ಟಪಡಿಸಿದೆ. ಜೊತೆಗೆ ಈ ವರ್ಷ 5 ಕೋಟಿ ಜನರು ತಮ್ಮ ರಿಟರ್ನ್ಸ್ ಸಲ್ಲಿಸಿದ್ದಾರೆ ಎಂದು ಹೇಳಿದೆ.ತನ್ನ ಎಕ್ಸ್ ಖಾತೆಯಲ್ಲಿ ಮಾಹಿತಿ ಹಂಚಿಕೊಂಡಿರುವ ಇಲಾಖೆ, ‘ಜು.26ರವರಗೆ 5 ಕೋಟಿ ಜನರು ತೆರಿಗೆ ರಿಟರ್ನ್ಸ್ ಸಲ್ಲಿಸಿದ್ದಾರೆ. ಯಾವುದೇ ದಂಡ ಹಾಗೂ ಹೆಚ್ಚು ಹಣ ಬೀಳದಿರಲು ಜು.31ರ ಒಳಗಾಗಿ ಸಲ್ಲಿಸಿ’ ಎಂದು ಹೇಳಿದೆ.;Resize=(128,128))
;Resize=(128,128))
;Resize=(128,128))
;Resize=(128,128))