ರಕ್ಷಣಾ ಮಾತುಕತೆ ಸೇರಿ ವಿವಿಧ ವಿಷಯಗಳ ಚರ್ಚೆಗಾಗಿ ಫ್ರಾನ್ಸ್‌ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಈ ವೇಳೆ ಭಾರತದ ಪಿನಾಕಾ ರಾಕೆಟ್‌ ಸಿಸ್ಟಂ ಅನ್ನು ಫ್ರಾನ್ಸ್‌ಗೆ ಪೂರೈಸುವ ಆಫರ್‌ ಅನ್ನು ಫ್ರಾನ್ಸ್‌ ಮುಂದಿಟ್ಟಿದ್ದಾರೆ ಎನ್ನಲಾಗಿದೆ.

ನವದೆಹಲಿ: ರಕ್ಷಣಾ ಮಾತುಕತೆ ಸೇರಿ ವಿವಿಧ ವಿಷಯಗಳ ಚರ್ಚೆಗಾಗಿ ಫ್ರಾನ್ಸ್‌ಗೆ ಭೇಟಿ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ, ಈ ವೇಳೆ ಭಾರತದ ಪಿನಾಕಾ ರಾಕೆಟ್‌ ಸಿಸ್ಟಂ ಅನ್ನು ಫ್ರಾನ್ಸ್‌ಗೆ ಪೂರೈಸುವ ಆಫರ್‌ ಅನ್ನು ಫ್ರಾನ್ಸ್‌ ಮುಂದಿಟ್ಟಿದ್ದಾರೆ ಎನ್ನಲಾಗಿದೆ. 

ಫ್ರಾನ್ಸ್‌ ಭೇಟಿ ವೇಳೆ 26 ನೌಕೆ ಆವೃತ್ತಿಯ ರಫೇಲ್ ಯುದ್ಧ ವಿಮಾನ ಮತ್ತು ಜಲಾಂತರ್ಗಾಮಿ ನೌಕೆ ಖರೀದಿ ಒಪ್ಪಂದದ ವೇಳೆ ಪ್ರಧಾನಿ ನರೇಂದ್ರ ಮೋದಿ ಅವರು ಈ ಆಫರ್‌ ಮುಂದಿಟ್ಟಿದ್ದಾರೆ. ಏಕಕಾಲಕ್ಕೆ ಹಲವು ರಾಕೆಟ್‌ಗಳನ್ನು ಉಡ್ಡಯನ ಮಾಡುವ ಸಾಮರ್ಥ್ಯವನ್ನು ಪಿನಾಕಾ ರಾಕೆಟ್‌ ಸಿಸ್ಟಂ ಹೊಂದಿದೆ.