ಸಾರಾಂಶ
81336 ಟನ್ ಹೊಂದಿರುವ ಅಮೆರಿಕ ಚಿನ್ನ ಮೀಸಲು ಹೊಂದಿರುವ ದೇಶಗಳಲ್ಲಿ ನಂ.1 ಸ್ಥಾನದಲ್ಲಿದ್ದು, ಪಟ್ಟಿಯಲ್ಲಿ ಭಾರತ 9ನೇ ಸ್ಥಾನದಲ್ಲಿದೆ ಎಂದು ಫೋರ್ಬ್ಸ್ ಶ್ರೇಯಾಂಕ ಪಟ್ಟಿ ಉಲ್ಲೇಖಿಸಿದೆ.
ನವದೆಹಲಿ: ಜಗತ್ತಿನಲ್ಲಿ ಅತಿ ಹೆಚ್ಚು ಚಿನ್ನ ಮೀಸಲು ಇಟ್ಟುಕೊಂಡಿರುವ ದೇಸಗಳ ಪಟ್ಟಿಯನ್ನು ಅಮೆರಿಕದ ಫೋರ್ಬ್ಸ್ ಮ್ಯಾಗಜಿನ್ ಬಿಡುಗಡೆ ಮಾಡಿದೆ. ಇದರಲ್ಲಲಿ 81336 ಟನ್ ಚಿನ್ನ ಹೊಂದಿರುವ ಅಮೆರಿಕ ಮೊದಲ ಸ್ಥಾನದಲ್ಲಿದ್ದರೆ, 800.78 ಟನ್ ಚಿನ್ನ ಮೀಸಲು ಹೊಂದಿರುವ ಭಾರತ 9ನೇ ಸ್ಥಾನದಲ್ಲಿದೆ.
ಚಿನ್ನವನ್ನು ಮೊದಲಿನಿಂದಲೂ ಹೂಡಿಕೆಗೆ ಅತ್ಯುತ್ತಮ ವಿಧಾನ ಎಂದೇ ಪರಿಗಣಿಸಲಾಗಿದೆ. ಚಿನ್ನದ ಬೆಲೆ ಯಾವಾಗಲೂ ಸ್ಥಿರವಾಗಿರುತ್ತದೆ.
ಯಾವುದೇ ಜಾಗತಿಕ ಹೊಡೆತವನ್ನು ತಡೆಯಲು ಸಲುವಾಗಿ ವಿಶ್ವದ ಪ್ರತಿಯೊಂದು ದೇಶಗಳೂ ದಶಕಗಳಿಂದ ಚಿನ್ನವನ್ನು ಸಂಗ್ರಹ ಮಾಡಿಕೊಳ್ಳುವ ಪರಿಪಾಠ ಹೊಂದಿದೆ.
ಚಿನ್ನದ ಮೀಸಲು ದೇಶದ ಸದೃಢ ಆರ್ಥಿಕತೆಯ ಪ್ರತಿಬಿಂಬವೂ ಹೌದು.
ಟಾಪ್ 10 ದೇಶಗಳು
ಅಮೆರಿಕ (81336 ಟನ್),
ಜರ್ಮನಿ (3352 ಟನ್),
ಇಟಲಿ (2451 ಟನ್),
ಫ್ರಾನ್ಸ್ (2436 ಟನ್)
ರಷ್ಯಾ (2332 ಟನ್),
ಚೀನಾ (2191 ಟನ್),
ಸ್ವಿಜರ್ಲೆಂಡ್ (1040 ಟನ್),
ಜಪಾನ್ (846),
ಭಾರತ (800),
ನೆದರ್ಲೆಂಡ್ (612 ಟನ್).
ಅಮೆರಿಕ (81336 ಟನ್), ಜರ್ಮನಿ (3352 ಟನ್), ಇಟಲಿ (2451 ಟನ್), ಫ್ರಾನ್ಸ್ (2436 ಟನ್) ರಷ್ಯಾ (2332 ಟನ್), ಚೀನಾ (2191 ಟನ್), ಸ್ವಿಜರ್ಲೆಂಡ್ (1040 ಟನ್), ಜಪಾನ್ (846), ಭಾರತ (800), ನೆದರ್ಲೆಂಡ್ (612 ಟನ್).