ಬೆಲೆ ಏರಿದ್ದರೂ 3 ತಿಂಗಳಲ್ಲಿ 180 ಟನ್‌ ಬಂಗಾರ ಆಮದು!

| Published : May 01 2024, 01:18 AM IST / Updated: May 01 2024, 01:19 AM IST

ಸಾರಾಂಶ

ಚಿನ್ನದ ಬೆಲೆ ಗಗನಕ್ಕೆ ಏರಿದ್ದರೂ ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತಿಂಗಳಲ್ಲಿ ಭಾರತ ಭರ್ಜರಿ 179.4 ಟನ್‌ ಚಿನ್ನ ಆಮದು ಮಾಡಿಕೊಂಡಿದೆ.

ನವದೆಹಲಿ: ಚಿನ್ನದ ಬೆಲೆ ಗಗನಕ್ಕೆ ಏರಿದ್ದರೂ ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತಿಂಗಳಲ್ಲಿ ಭಾರತ ಭರ್ಜರಿ 179.4 ಟನ್‌ ಚಿನ್ನ ಆಮದು ಮಾಡಿಕೊಂಡಿದೆ. ಕಳೆದ ವರ್ಷದ 143.4 ಟನ್‌ ಚಿನ್ನದ ಆಮದಿಗೆ ಹೋಲಿಸಿದರೆ ಈ ಬಾರಿ ಆಮದು ಶೇ.25ರಷ್ಟು ಹೆಚ್ಚಳವಾಗಿದೆ.ಜೊತೆಗೆ ಮೊದಲ ತ್ರೈಮಾಸಿಕದಲ್ಲಿ ದೇಶದಲ್ಲಿ 75,470 ಕೋಟಿ ರು. ಮೌಲ್ಯದ 136 ಟನ್‌ ಚಿನ್ನದ ವಹಿವಾಟು ನಡೆದಿದೆ. ಇದು ಕಳೆದ ಬಾರಿಯ ಇದೇ ಅವಧಿಗಿಂತ ಶೇ.20ರಷ್ಟು ಏರಿಕೆಯಾಗಿದೆ. ಇದರಲ್ಲಿ 95.5 ಟನ್‌ಗಳಷ್ಟು (52,750 ಕೋಟಿ ರು.) ಆಭರಣಗಳ ಮಾರಾಟ ನಡೆದಿದ್ದರೆ, ಹೂಡಿಕೆಯಾಗಿ 41.1 ಟನ್‌ (22,720 ಕೋಟಿ ರು.) ಪ್ರಮಾಣದ ಚಿನ್ನದ ವಹಿವಾಟು ನಡೆದಿದೆ. ಈ ಅವಧಿಯಲ್ಲಿ 10 ಗ್ರಾಂ ಚಿನ್ನದ ಸರಾಸರಿ ಬೆಲೆ 55 ಸಾವಿರ ರು.ನಷ್ಟಿದ್ದು, ಕಳೆದ ಬಾರಿಗಿಂತ ಶೇ.11ರಷ್ಟು ಏರಿಕೆ ಕಂಡಿದೆ.

ಏನು ಕಾರಣ?:

ಆರ್‌ಬಿಐ 19 ಟನ್‌ ಚಿನ್ನ ಖರೀದಿ ಮಾಡಿದ್ದು, ಶುಭ ಸಮಾರಂಭಗಳ ಹಿನ್ನೆಲೆಯಲ್ಲಿ ಭಾರಿ ಖರೀ ದಿ ಚಿನ್ನದ ಆಮದು ಮತ್ತು ವಹಿವಾಟು ಹೆಚ್ಚಳಕ್ಕೆ ಕಾರಣವಾಗಿದೆ ಎಂದು ವಿಶ್ವ ಚಿನ್ನ ಮಂಡಳಿ ವರದಿ ಹೇಳಿದೆ.