ಏಷ್ಯಾ ಸರ್ಫಿಂಗ್‌: ಕನ್ನಡಿಗ ರಮೇಶ್‌ ಫೈನಲ್‌ಗೆ ಪ್ರವೇಶ

| N/A | Published : Aug 10 2025, 01:30 AM IST / Updated: Aug 10 2025, 04:35 AM IST

ಏಷ್ಯಾ ಸರ್ಫಿಂಗ್‌: ಕನ್ನಡಿಗ ರಮೇಶ್‌ ಫೈನಲ್‌ಗೆ ಪ್ರವೇಶ
Share this Article
  • FB
  • TW
  • Linkdin
  • Email

ಸಾರಾಂಶ

ಇಲ್ಲಿ ನಡೆಯುತ್ತಿರುವ ಏಷ್ಯನ್‌ ಸರ್ಫಿಂಗ್ ಚಾಂಪಿಯನ್‌ಶಿಪ್‌ನ ಪುರುಷರ ಮುಕ್ತ ವಿಭಾಗದಲ್ಲಿ ಕರ್ನಾಟಕದ ರಮೇಶ್‌ ಬುಧಿಯಾಲ ಫೈನಲ್ ಪ್ರವೇಶಿಸಿದ್ದಾರೆ.

ಚೆನ್ನೈ: ಇಲ್ಲಿ ನಡೆಯುತ್ತಿರುವ ಏಷ್ಯನ್‌ ಸರ್ಫಿಂಗ್ ಚಾಂಪಿಯನ್‌ಶಿಪ್‌ನ ಪುರುಷರ ಮುಕ್ತ ವಿಭಾಗದಲ್ಲಿ ಕರ್ನಾಟಕದ ರಮೇಶ್‌ ಬುಧಿಯಾಲ ಫೈನಲ್ ಪ್ರವೇಶಿಸಿದ್ದಾರೆ. ಈ ಸಾಧನೆ ಮಾಡಿದ ಭಾರತದ ಮೊದಲ ಆಟಗಾರ ಎನಿಸಿಕೊಂಡಿದ್ದಾರೆ. ಶನಿವಾರ ಕ್ವಾರ್ಟರ್‌ ಫೈನಲ್‌ನಲ್ಲಿ ಫಿಲಿಪ್ಪೀನ್ಸ್‌ನ ನೀಲ್‌ ಸ್ಯಾಂಚೆಸ್‌ರನ್ನು ಹಿಂದಿಕ್ಕಿದ ರಮೇಶ್‌ ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದರು. ಆ ಬಳಿಕ ಸೆಮಿಫೈನಲ್‌ನಲ್ಲಿ 2ನೇ ಸ್ಥಾನ ಪಡೆದು ಫೈನಲ್‌ ಪ್ರವೇಶಿಸಿದರು.

ಭಾರತದ ಕಿಶೋರ್‌ ಕುಮಾರ್‌ ಸೆಮಿಫೈನಲ್ ಪ್ರವೇಶಿಸಿದರೂ 4ನೇ ಸ್ಥಾನ ಪಡೆಯುವ ಮೂಲಕ ಫೈನಲ್‌ ಅವಕಾಶ ತಪ್ಪಿಸಿಕೊಂಡರು. ಡಿ.ಶ್ರೀಕಾಂತ್ ಕ್ವಾರ್ಟರ್‌ ಫೈನಲ್‌ನಲ್ಲೇ ಪರಾಭವಗೊಂಡರು.

ಲೀಡ್ಸ್‌ ಪಿಚ್‌ ಅತ್ಯುತ್ತಮ,  ಬಾಕಿ 3 ತೃಪ್ತಿಕರ: ಐಸಿಸಿ

ನವದೆಹಲಿ: ಇತ್ತೀಚೆಗೆ ಮುಕ್ತಾಯಗೊಂಡ ಭಾರತ ಮತ್ತು ಇಂಗ್ಲೆಂಡ್‌ ನಡುವಿನ ಸರಣಿಗೆ ಆತಿಥ್ಯ ವಹಿಸಿದ 4 ಕ್ರೀಡಾಂಗಣಗಳ ಪಿಚ್‌ಗೆ ಐಸಿಸಿ ರೇಟಿಂಗ್ ನೀಡಿದೆ. ಈ ಪೈಕಿ ಲೀಡ್ಸ್‌ನ ಹೆಡಿಂಗ್ಲೆ ‘ಅತ್ಯುತ್ತಮ’ ರೇಟಿಂಗ್ ಪಡೆದಿದೆ. ಉಳಿದ 3 ಪಿಚ್‌ಗಳಾದ ಎಡ್ಜ್‌ಬಾಸ್ಟನ್, ಲಾರ್ಡ್ಸ್, ಓಲ್ಡ್‌ ಟ್ರಾಫರ್ಡ್‌ಗೆ ‘ತೃಪ್ತಿಕರ’ ರೇಟಿಂಗ್ ಲಭಿಸಿದೆ. ಓವಲ್‌ ಪಿಚ್‌ ರೇಟಿಂಗ್ ಇನ್ನಷ್ಟೇ ಬರಬೇಕಿದೆ.

1ನೇ ಏಕದಿನ: ವಿಂಡೀಸ್‌

ವಿರುದ್ಧ ಪಾಕ್‌ಗೆ ಗೆಲುವು

ತರೌಬ: ವೆಸ್ಟ್‌ಇಂಡೀಸ್‌ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಪಾಕಿಸ್ತಾನ 5 ವಿಕೆಟ್‌ ಗೆಲುವು ಸಾಧಿಸಿದ್ದು, 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆದಿದೆ. ಮೊದಲು ಬ್ಯಾಟ್‌ ಮಾಡಿದ ವಿಂಡೀಸ್‌ 49 ಓವರ್‌ಗಳಲ್ಲಿ 280 ರನ್‌ಗೆ ಆಲೌಟಾಯಿತು. ಎವಿನ್‌ ಲೆವಿಸ್‌ 60, ಶಾಯಿ ಹೋಪ್‌ 55, ರಾಸ್ಟನ್‌ ಚೇಸ್ 53 ರನ್‌ ಗಳಿಸಿದರು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಪಾಕ್‌ 48.5 ಓವರ್‌ಗಳಲ್ಲಿ 5 ವಿಕೆಟ್‌ ನಷ್ಟದಲ್ಲಿ ಜಯಗಳಿಸಿತು. ಹಸನ್‌ ನವಾಜ್‌ ಔಟಾಗದ 63, ನಾಯಕ ರಿಜ್ವಾನ್‌ 53, ಬಾಬರ್‌ ಆಜಂ 47 ರನ್‌ ಸಿಡಿಸಿದರು.

ಟಿ20: ಭಾರತ ಮಹಿಳಾ

‘ಎ’ಗೆ 114 ರನ್ ಸೋಲು

ಮಕಾಯ್(ಆಸ್ಟ್ರೇಲಿಯಾ): ಆಸ್ಟ್ರೇಲಿಯಾ ‘ಎ’ ವಿರುದ್ಧ 2ನೇ ಟಿ20 ಪಂದ್ಯದಲ್ಲಿ ಭಾರತ ‘ಎ’ ತಂಡ 114 ರನ್‌ಗಳ ಹೀನಾಯ ಸೋಲು ಕಂಡಿದೆ. ಇದರೊಂದಿಗೆ 3 ಪಂದ್ಯಗಳ ಸರಣಿಯನ್ನು ಆಸೀಸ್‌ 2-0 ಅಂತರದಲ್ಲಿ ಗೆದ್ದುಕೊಂಡಿತು. ಮೊದಲು ಬ್ಯಾಟ್‌ ಮಾಡಿದ ಆಸೀಸ್‌ 4 ವಿಕೆಟ್‌ಗೆ 187 ರನ್‌ ಕಲೆಹಾಕಿತು. ನಾಯಕಿ ಅಲೀಸಾ ಹೀಲಿ 44 ಎಸೆತಕ್ಕೆ 70 ರನ್‌ ಸಿಡಿಸಿದರು. ದೊಡ್ಡ ಗುರಿ ಬೆನ್ನತ್ತಿದ ರಾದಾ ಯಾದವ್‌ ನಾಯಕತ್ವದ ಭಾರತ 15.1 ಓವರ್‌ಗಳಲ್ಲಿ 73 ರನ್‌ಗೆ ಆಲೌಟಾಯಿತು. ಕಿಮ್‌ ಗಾರ್ಥ್‌ 7 ರನ್‌ಗೆ 4 ವಿಕೆಟ್‌ ಪಡೆದರು. 3ನೇ ಪಂದ್ಯ ಭಾನುವಾರ ನಡೆಯಲಿದೆ.

Read more Articles on