ಸಾರಾಂಶ
ಭಾರತವು ನವೀಕರಿಸಬಹುದಾದ ಇಂಧನ ಮತ್ತು ಪರಿಸರ ಸ್ನೇಹಿ ವಲಯದಲ್ಲಿ ಗಮನಾರ್ಹ ಪ್ರಗತಿ ಸಾಧಿಸುತ್ತಿದ್ದು, ಜಾಗತಿಕ ನಾಯಕತ್ವದತ್ತ ಸಾಗುತ್ತಿದೆ. ಸಚಿವ ಪ್ರಹ್ಲಾದ್ ಜೋಶಿ ಅವರು ಭಾರತವು 2030 ರ ವೇಳೆಗೆ ಈ ಕ್ಷೇತ್ರದಲ್ಲಿ ಅಗ್ರ 10 ರಾಷ್ಟ್ರಗಳಲ್ಲಿ ಸ್ಥಾನ ಪಡೆಯುವ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ನವದೆಹಲಿ: ಭಾರತವು ನವೀಕರಿಸಬಹುದಾದ ಇಂಧನ ಮತ್ತು ಪರಿಸರ ಸ್ನೇಹಿ ವಲಯದಲ್ಲಿ ಜಗತ್ತಿಗೆ ಮಾದರಿಯಾಗಿದೆ. ಭವಿಷ್ಯದಲ್ಲಿ ಸುಸ್ಥಿರ ಇಂಧನ ಕ್ಷೇತ್ರದಲ್ಲಿ ಭಾರತವು ಜಗತ್ತಿನ ಧ್ವನಿಯಾಗಲಿದೆ ಎಂದು ನವೀಕರಿಸಬಹುದಾದ ಇಂಧನಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದರು.
ಜರ್ಮನಿಯ ಹ್ಯಾಂಬರ್ಗ್‌ನಲ್ಲಿ ನಡೆದ ಸಮ್ಮೇಳನವೊಂದರಲ್ಲಿ ಪಾಲ್ಗೊಂಡಿದ್ದ ವೇಳೆ ಮಾತನಾಡಿದ ಸಚಿವರು, ಸುಸ್ಥಿರ ಇಂಧನ ವಲಯದಲ್ಲಿ ಭಾರತದ ಪ್ರಗತಿಯನ್ನು ಪ್ರಸ್ತಾಪಿಸಿದರು. ‘2030ರ ವೇಳೆ ಜಗತ್ತಿನಲ್ಲಿ, ಪರಿಸರ ಸ್ನೇಹಿ ವಲಯದಲ್ಲಿ ಅಗ್ರ 10 ದೇಶಗಳಲ್ಲಿ ಭಾರತವು ಒಂದಾಗಲಿದೆ.
ಭಾರತವು ಸುಸ್ಥಿರ ಇಂಧನ ಕ್ಷೇತ್ರದಲ್ಲಿ ಪ್ರಮುಖ ಮೈಲಿಗಲ್ಲುಗಳನ್ನು ಸ್ಥಾಪಿಸಿದೆ. ನಿಗದಿತ ಸಮಯದೊಳಗೆ ಹವಮಾನ ಗುರಿಗಳನ್ನು ಸಾಧಿಸಿದ ಏಕೈಕ ಜಿ20 ದೇಶ ಭಾರತ. ಮೋದಿ ನಾಯಕತ್ವದಲ್ಲಿ ನವೀಕರಿಸಬಹುದಾದ ಇಂಧನ ಸಾಮರ್ಥ್ಯದಲ್ಲಿ ಉತ್ತಮ ಸಾಧನೆ ಮಾಡಿದೆ. ಹವಾಮಾನ ಬದಲಾವಣೆಗೆ ನಡೆಯುತ್ತಿರುವ ಜಾಗತಿಕ ಪ್ರಯತ್ನಗಳಿಗೆ ಭಾರತ ನಾಯಕತ್ವ ಸ್ಥಾನ ವಹಿಸಿಕೊಳ್ಳಲಿದೆ’ ಎಂದರು.