14000 ಅಡಿ ಎತ್ತರದಲ್ಲಿ ಭಾರತದ ಮಷಿನ್‌ ಗನ್‌ ಪರೀಕ್ಷೆ ಯಶಸ್ವಿ

| N/A | Published : Jun 10 2025, 02:23 AM IST / Updated: Jun 10 2025, 05:27 AM IST

14000 ಅಡಿ ಎತ್ತರದಲ್ಲಿ ಭಾರತದ ಮಷಿನ್‌ ಗನ್‌ ಪರೀಕ್ಷೆ ಯಶಸ್ವಿ
Share this Article
  • FB
  • TW
  • Linkdin
  • Email

ಸಾರಾಂಶ

ತಂತ್ರಜ್ಞಾನ ಕ್ಷೇತ್ರವನ್ನು ಆಳುತ್ತಿರುವ ಕೃತಕಬುದ್ಧಿಮತ್ತೆಯಲ್ಲಿ ಪಾರಮ್ಯ ಸಾಧಿಸುವ ನಿಟ್ಟಿನಲ್ಲಿ ಹಾಗೂ ಇದನ್ನು ದೇಶದ ಭದ್ರತೆಯಲ್ಲೂ ಬಳಸಿಕೊಳ್ಳಲು ಭಾರತ, ಎಐ ಚಾಲಿತ ಲೈಟ್‌ ಮೆಷಿನ್ ಗನ್‌ಅನ್ನು 14000 ಅಡಿ ಎತ್ತರದ ಭೂಪ್ರದೇಶದಲ್ಲಿ ಯಶಸ್ವಿಯಾಗಿ ಪರೀಕ್ಷಿಸಿದೆ.

ನವದೆಹಲಿ: ತಂತ್ರಜ್ಞಾನ ಕ್ಷೇತ್ರವನ್ನು ಆಳುತ್ತಿರುವ ಕೃತಕಬುದ್ಧಿಮತ್ತೆಯಲ್ಲಿ ಪಾರಮ್ಯ ಸಾಧಿಸುವ ನಿಟ್ಟಿನಲ್ಲಿ ಹಾಗೂ ಇದನ್ನು ದೇಶದ ಭದ್ರತೆಯಲ್ಲೂ ಬಳಸಿಕೊಳ್ಳಲು ಭಾರತ, ಎಐ ಚಾಲಿತ ಲೈಟ್‌ ಮೆಷಿನ್ ಗನ್‌ಅನ್ನು 14000 ಅಡಿ ಎತ್ತರದ ಭೂಪ್ರದೇಶದಲ್ಲಿ ಯಶಸ್ವಿಯಾಗಿ ಪರೀಕ್ಷಿಸಿದೆ.

ಡೆಹ್ರಾಡೂನ್‌ ಮೂಲದ ರಕ್ಷಣಾ ಉಪಕರಣಗಳ ತಯಾರಕ ಕಂಪನಿಯಾಗಿರುವ ಬಿಎಸ್‌ಎಸ್‌ ಮಟೀರಿಯಲ್ಸ್‌ ಲಿ. ಅಭಿವೃದ್ಧಿಪಡಿಸಿರುವ ‘ನೆಗೆವ್‌’ ಹೆಸರಿನ ಈ ಗನ್‌ಗಳನ್ನು ಭಾರತೀಯ ಸೇನೆಯ ಸಹಯೋಗದೊಂದಿಗೆ ಪರೀಕ್ಷಿಸಲಾಯಿತು. ಈ ವೇಳೆ, ಗನ್‌ಗಳು ಪರ್ವತಗಳಲ್ಲಿನ ಕಠಿಣ ಗುರಿಗಳನ್ನು ಗುರುತಿಸಿ, ನಿಯಂತ್ರಿತ ದಾಳಿ ನಡೆಸುವಲ್ಲಿ ಯಶಸ್ವಿಯಾಗಿವೆ. ಜತೆಗೆ ಇದರಲ್ಲಿನ ಸೆನ್ಸಾರ್‌, ಸ್ವಯಂಚಾಲಿತ ಗುರಿ ಪತ್ತೆ, ವೈರಿ ಗುರಿಯ ವರ್ಗೀಕರಣಕ್ಕೆ ಸಹಕಾರಿಯಾಗಿದೆ.ಇದು ಗಡಿ ಪ್ರದೇಶದ ಭದ್ರತೆಗೆ ಶಕ್ತಿ ತುಂಬುವುದರ ಜತೆಗೆ, ಮೇಕ್‌ ಇನ್‌ ಇಂಡಿಯಾ ಮತ್ತು ಆತ್ಮನಿರ್ಭರ ಭಾರತದಂತಹ ಯೋಜನೆಗಳ ಅಡಿಯಲ್ಲಿ ಸೇನೆಯನ್ನು ಆಧುನೀಕರಣಗೊಳಿಸಲು ಸಹಕಾರಿಯಾಗಿದೆ. 

ಬಳಕೆ ಎಲ್ಲೆಲ್ಲಿ?:ನೆಗೆವ್‌ ಗನ್‌ಗಳನ್ನು ಎತ್ತರದ, ಶಸ್ತ್ರಾಸ್ತ್ರಗಳನ್ನು ಸಾಗಿಸಲು ಕಷ್ಟವಾಗುವ, ತಕ್ಷಣಕ್ಕೆ ಸಿಬ್ಬಂದಿ ನಿಯೋಜನೆ ಕಷ್ಟವಾಗುವ ಪ್ರದೇಶಗಳಲ್ಲಿ ನಿಯೋಜಿಸಬಹುದು. ಇವುಗಳನ್ನು ಬೇಸ್‌ಗಳ ಭದ್ರತೆ, ಬೆಂಗಾವಲುಪಡೆಯ ಸುರಕ್ಷತೆಗೆ ಬಳಸಬಹುದು. ಅಂತೆಯೇ, ಇವುಗಳನ್ನು ಲೈಟ್‌ ಮಷಿನ್‌ ಗನ್‌ಗಳಿಂದ ಹಿಡಿದು ಡ್ರೋನ್‌ ವಿರೋಧಿ ಶಸ್ತ್ರಗಳಲ್ಲಿ ಅಳವಡಿಸಬಹುದು.

Read more Articles on