2028ರ ವೇಳೆಗೆ ಭಾರತವು ಜಗತ್ತಿನ 3ನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ದೇಶ : ಸ್ಟಾನ್ಲಿ ವರದಿ

| N/A | Published : Mar 15 2025, 01:05 AM IST / Updated: Mar 15 2025, 05:05 AM IST

ಸಾರಾಂಶ

2028ರ ವೇಳೆಗೆ ಭಾರತವು ಜಗತ್ತಿನ 3ನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಲಿದೆ ಎಂದು ಮಾರ್ಗನ್ ಸ್ಟಾನ್ಲಿ ವರದಿ ಹೇಳಿದೆ.

ನವದೆಹಲಿ: 2028ರ ವೇಳೆಗೆ ಭಾರತವು ಜಗತ್ತಿನ 3ನೇ ಅತಿ ದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಲಿದೆ ಎಂದು ಮಾರ್ಗನ್ ಸ್ಟಾನ್ಲಿ ವರದಿ ಹೇಳಿದೆ.

‘2023ರಲ್ಲಿ 297 ಲಕ್ಷ ಕೋಟಿ ರು. ಆರ್ಥಿಕತೆ ಹೊಂದಿದ್ದ ದೇಶದ ಆರ್ಥಿಕತೆಯು 2026ರಲ್ಲಿ 400 ಲಕ್ಷ ಕೋಟಿ ರು.ಗೆ ತಲುಪಲಿದ್ದು, 4ನೇ ಅತಿದೊಡ್ಡ ಆರ್ಥಿಕತೆ ಹೊಂದಿರುವ ದೇಶವಾಗಿಲಿದೆ. ಈಗ ಅಮೆರಿಕ, ಚೀನಾ, ಜರ್ಮನಿಯ ನಂತರ ಭಾರತ ಸ್ಥಾನದಲ್ಲಿದೆ. 2028ರ ವೇಳೆಗೆ 484 ಲಕ್ಷ ಕೋಟಿ ರು. ಆರ್ಥಿಕತೆಯನ್ನು ಹೊಂದಲಿದ್ದು, ಈ ಮೂಲಕ ಜರ್ಮನಿಯನ್ನು ಹಿಂದಿಕ್ಕಲಿದೆ’ ಎಂದಿದೆ.ಅಲ್ಲದೇ 2029ರ ವೇಳೆಗೆ ಜಾಗತಿಕ ಜಿಡಿಪಿಗೆ ಭಾರತ ನೀಡುವ ಪಾಲು ಶೇ.3.5ರಿಂದ ಶೇ.4.5ಕ್ಕೆ ಏರಿಕೆಯಾಗಬಹುದು ಎಂದಿದೆ.

ಜನಸಂಖ್ಯಾ ಬೆಳವಣಿಗೆ, ಉತ್ತಮ ಮೂಲಸೌಕರ್ಯ, ಹೆಚ್ಚುತ್ತಿರುವ ಉದ್ಯಮ ವರ್ಗ ಸೇರಿದಂತೆ ಹಲವು ನೀತಿಗಳು ಮುಂಬರುವ ದಶಕಗಳಲ್ಲಿ ಭಾರತವು ಜಾಗತಿಕ ಉತ್ಪಾದನೆಯಲ್ಲಿ ತನ್ನ ಪಾಲು ಪಡೆಯಲು ಕಾರಣ. ಗ್ರಾಹಕ ಮಾರುಕಟ್ಟೆಯಲ್ಲಿ ಬೇಡಿಕೆ ಮತ್ತು ಜಾಗತಿಕ ಉತ್ಪಾದನೆಯಲ್ಲಿ ಭಾರತವು ದೊಡ್ಡ ಪಾಲು ಪಡೆಯಲಿದೆ ಎಂದು ವರದಿ ಹೇಳಿದೆ.

ಮೋದಿಯಿಂದ ಪ್ರಗತಿ ಪಥ '

ಭಾರತವು 2028 ರ ವೇಳೆಗೆ ವಿಶ್ವದ 3 ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಮತ್ತು ಜರ್ಮನಿಯನ್ನು ಮೀರಿಸಲಿದೆ. ಕೇವಲ 10 ವರ್ಷಗಳ ಹಿಂದೆ, ನಾವು ವಿಶ್ವದ 5 ದುರ್ಬಲ ಆರ್ಥಿಕತೆಗಳಲ್ಲಿ ಒಂದಾಗಿದ್ದೆವು. ಪ್ರಧಾನಿ ನರೇಂದ್ರ ಮೋದಿ ಅವರು 10 ವರ್ಷಗಳ ಕಠಿಣ ಹಾಗೂ ಅವಿರತ ಕೆಲಸದಿಂದ ಭಾರತದ ಪಥವನ್ನು ಬದಲಾಯಿಸಿದ್ದಾರೆ.

- ರಾಜೀವ್‌ ಚಂದ್ರಶೇಖರ್‌, ಬಿಜೆಪಿ ಮುಖಂಡ/ಮಾಜಿ ಕೇಂದ್ರ ಸಚಿವ