ಭಾರತ-ಬ್ರಿಟನ್‌ ಮುಕ್ತ ವ್ಯಾಪಾರ ಒಪ್ಪಂದ ಸಾಕಾರ

| Published : May 07 2025, 12:54 AM IST

ಭಾರತ-ಬ್ರಿಟನ್‌ ಮುಕ್ತ ವ್ಯಾಪಾರ ಒಪ್ಪಂದ ಸಾಕಾರ
Share this Article
  • FB
  • TW
  • Linkdin
  • Email

ಸಾರಾಂಶ

ಅಮೆರಿಕ ಜತೆಗಿನ ತೆರಿಗೆ ಸಂಘರ್ಷದ ನಡುವೆಯೇ ಮಹತ್ವದ ಬೆಳವಣಿಗೆಯಲ್ಲಿ ಭಾರತ ಮತ್ತು ಬ್ರಿಟನ್‌ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಏರ್ಪಟ್ಟಿದೆ. ಇದರೊಂದಿಗೆ, ಬ್ರಿಟನ್‌ ಭಾರತದೊಂದಿಗೆ ಈ ಒಪ್ಪಂದ ಮಾಡಿಕೊಂಡ 16ನೇ ದೇಶವಾಗಿದ್ದು, ಇನ್ನು ಉಭಯ ದೇಶಗಳ ನಡುವಿನ ವ್ಯಾಪಾರದ ಮೇಲಿನ ಆಮದು ತೆರಿಗೆಯಲ್ಲಿ ಶೇ.90ರಷ್ಟು ಇಳಿಕೆ ಆಗಲಿದೆ ಅಥವಾ ಸಂಪೂರ್ಣ ಇಲ್ಲವಾಗಲಿದೆ.

-ಸುಂಕರಹಿತ/ ಶೇ.90ರಷ್ಟು ತೆರಿಗೆ ರಹಿತ ವ್ಯಾಪಾರ ಸಾಧ್ಯ

-ಭಾರತ ಜತೆ ಒಪ್ಪಂದ ಮಾಡಿಕೊಂಡ 16ನೇ ದೇಶ ಬ್ರಿಟನ್‌

ನವದೆಹಲಿ: ಅಮೆರಿಕ ಜತೆಗಿನ ತೆರಿಗೆ ಸಂಘರ್ಷದ ನಡುವೆಯೇ ಮಹತ್ವದ ಬೆಳವಣಿಗೆಯಲ್ಲಿ ಭಾರತ ಮತ್ತು ಬ್ರಿಟನ್‌ ನಡುವೆ ಮುಕ್ತ ವ್ಯಾಪಾರ ಒಪ್ಪಂದ ಏರ್ಪಟ್ಟಿದೆ. ಇದರೊಂದಿಗೆ, ಬ್ರಿಟನ್‌ ಭಾರತದೊಂದಿಗೆ ಈ ಒಪ್ಪಂದ ಮಾಡಿಕೊಂಡ 16ನೇ ದೇಶವಾಗಿದ್ದು, ಇನ್ನು ಉಭಯ ದೇಶಗಳ ನಡುವಿನ ವ್ಯಾಪಾರದ ಮೇಲಿನ ಆಮದು ತೆರಿಗೆಯಲ್ಲಿ ಶೇ.90ರಷ್ಟು ಇಳಿಕೆ ಆಗಲಿದೆ ಅಥವಾ ಸಂಪೂರ್ಣ ಇಲ್ಲವಾಗಲಿದೆ.

ಈ ಬಗ್ಗೆ ಹರ್ಷ ವ್ಯಕ್ತಪಡಿಸಿರುವ ಪ್ರಧಾನಿ ನರೇಂದ್ರ ಮೋದಿ, ‘ಇದು ಐತಿಹಾಸಿಕ ಮೈಲುಗಲ್ಲು. ಈ ಒಪ್ಪಂದ ನಮ್ಮ ಸಮಗ್ರ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ಆಳಗೊಳಿಸುತ್ತದೆ. ಎರಡೂ ಆರ್ಥಿಕತೆಗಳಲ್ಲಿ ವ್ಯಾಪಾರ, ಹೂಡಿಕೆ, ಬೆಳವಣಿಗೆ, ಉದ್ಯೋಗ ಸೃಷ್ಟಿ ಮತ್ತು ನಾವೀನ್ಯತೆಯನ್ನು ವೇಗಗೊಳಿಸುತ್ತದೆ’ ಎಂದು ಬಣ್ಣಿಸಿದ್ದಾರೆ. ಅತ್ತ, ‘ಭಾರತದೊಂದಿಗಿನ ಈ ಒಪ್ಪಂದ ಬ್ರಿಟನ್‌ನ ಆರ್ಥಿಕ ಬೆಳವಣಿಗೆಗೆ ಸಹಕಾರಿಯಾಗಿದೆ’ ಎಂದು ಬ್ರಿಟನ್‌ ಪ್ರಧಾನಿ ಕೀರ್ ಸ್ಟಾರ್ಮರ್‌ ತಿಳಿಸಿದ್ದಾರೆ. ಶುಕ್ರವಾರ ಲಂಡನ್‌ನಲ್ಲಿ ನಡೆದ ಮಾತುಕತೆ ವೇಳೆ ಬ್ರಿಟನ್‌ನ ವ್ಯವಹಾರ ಮತ್ತು ವ್ಯಾಪಾರ ಕಾರ್ಯದರ್ಶಿ ಹಾಗೂ ವಾಣಿಜ್ಯ ಸಚಿವ ಪಿಯೂಷ್ ಗೋಯಲ್ ಅವರು ಈ ಒಪ್ಪಂದವನ್ನು ಅಂತಿಮಗೊಳಿಸಿದರು.ಒಪ್ಪಂದದಿಂದ ಏನೇನು ಲಾಭ?:

- ಭಾರತದಿಂದ ರಫ್ತಾಗುವ ವಸ್ತುಗಳಿಗೆ ಬ್ರಿಟನ್‌ ಮಾರುಕಟ್ಟೆಯಲ್ಲಿ ಶೂನ್ಯ ಸುಂಕ- ಭಾರತದಿಂದ ಆಮದು ಸುಂಕ ಕಡಿತ. ಶೇ.90ರಷ್ಟು ತೆರಿಗೆ ಇಳಿಕೆ. ದಶಕದಲ್ಲಿ ಇದರ ಶೇ.85ರಷ್ಟು ವ್ಯಾಪಾರ ತೆರಿಗೆ ಮುಕ್ತ.- ಸೌಂದರ್ಯವರ್ಧಕ, ವಿಮಾನ, ವೈದ್ಯಕೀಯ ಸಾಧನ, ವಿದ್ಯುತ್ ಯಂತ್ರೋಪಕರಣ, ತಂಪು ಪಾನೀಯ, ಚಾಕೊಲೇಟ್ ಮತ್ತು ಬಿಸ್ಕತ್ತು ಸೇರಿದಂತೆ ವಿವಿಧ ವಸ್ತುಗಳ ಮಾರಾಟ ಅಗ್ಗ.- ದ್ವಿಪಕ್ಷೀಯ ವ್ಯಾಪಾರ 2.88 ಲಕ್ಷ ಕೋಟಿ ರು. ಹೆಚ್ಚುವ ಸಾಧ್ಯತೆ

- ಬ್ರಿಟನ್‌ ಜತೆ ಈಗಾಗಲೇ ಮುಕ್ತ ವ್ಯಾಪಾರ ಒಪ್ಪಂದ ಹೊಂದಿರುವ ದೇಶಗಳೊಂದಿಗೆ ಸ್ಪರ್ಧಿಸಲು ಸಮಾನ ಅವಕಾಶ