ಇಂದು ಮಿಸ್‌ ವರ್ಲ್ಡ್‌ ಸ್ಫರ್ಧೆ ಆರಂಭ

| Published : Feb 20 2024, 01:49 AM IST / Updated: Feb 20 2024, 08:00 AM IST

miss world
ಇಂದು ಮಿಸ್‌ ವರ್ಲ್ಡ್‌ ಸ್ಫರ್ಧೆ ಆರಂಭ
Share this Article
  • FB
  • TW
  • Linkdin
  • Email

ಸಾರಾಂಶ

71ನೇ ಆವೃತ್ತಿಯ ಮಿಸ್‌ ವರ್ಲ್ಡ್‌ ಸ್ಪರ್ಧೆ ಮಂಗಳವಾರ ದೆಹಲಿಯಲ್ಲಿ ಆರಂಭವಾಗಲಿದೆ. ಈ ಸ್ಪರ್ಧೆ ಎರಡು ದಶಕಗಳ ಬಳಿಕ ಭಾರತಕ್ಕೆ ನಡೆಯುತ್ತಿದ್ದು, ದೆಹಲಿಯ ಅಶೋಕ ಹೋಟೆಲ್‌ ವಿಜೃಂಭಣೆಯ ಸ್ವಾಗತಕ್ಕೆ ಸಿದ್ಧವಾಗಿದೆ.

ನವದೆಹಲಿ: 71ನೇ ಆವೃತ್ತಿಯ ಮಿಸ್‌ ವರ್ಲ್ಡ್‌ ಸ್ಪರ್ಧೆ ಮಂಗಳವಾರ ದೆಹಲಿಯಲ್ಲಿ ಆರಂಭವಾಗಲಿದೆ. ಈ ಸ್ಪರ್ಧೆ ಎರಡು ದಶಕಗಳ ಬಳಿಕ ಭಾರತಕ್ಕೆ ನಡೆಯುತ್ತಿದ್ದು, ದೆಹಲಿಯ ಅಶೋಕ ಹೋಟೆಲ್‌ ವಿಜೃಂಭಣೆಯ ಸ್ವಾಗತಕ್ಕೆ ಸಿದ್ಧವಾಗಿದೆ. 

ಈ ಬಾರಿಯ ಮತ್ತೊಂದು ವಿಶೇಷವೇನೆಂದರೆ, ನಮ್ಮ ಕರಾವಳಿಯ ಬೆಡಗಿ ಸಿನಿ ಶೆಟ್ಟಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಫೆ.20ರಿಂದ ನಡೆಯುವ ಈ ಸ್ಪರ್ಧೆ ಮಾ.9ರವರೆಗೆ ನಡೆಯಲಿದೆ. 

ಮುಂಬೈನ ಜಿಯೋ ವರ್ಲ್ಡ್‌ ಸೆಂಟರ್‌ನಲ್ಲಿ ಸ್ಪರ್ಧೆಗೆ ತೆರೆಬೀಳಲಿದೆ. ಭಾರತ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ ಆಯೋಜಿಸಿದೆ.

ಮಂಗಳವಾರ ಸಂಜೆ ದೆಹಲಿಯ ಅಶೋಕ ಹೋಟೆಲ್‌ನಲ್ಲಿ ಆಗಮಿಸುವ ಈ ಸ್ಪರ್ಧೆಗೆ 120 ದೇಶಗಳ ಬೆಡಗಿಯರು ಆಗಮಿಸಿದ್ದು, ದೆಹಲಿ ಹಾಗೂ ಮುಂಬೈನಲ್ಲಿ ಸ್ಪರ್ಧೆಗಳು ನಡೆಯಲಿದೆ. 

19 ದಿನಗಳಲ್ಲಿ ವೇಷಭೂಷಣ, ಕ್ರೀಡೆ ಸೇರಿ ಹಲವು ವಿಭಾಗಗಳು ಇರಲಿದೆ. 120 ದೇಶಗಳಿಂದ ಸ್ಪರ್ಧಿಗಳು ಅಂತಿಮ ಕಿರೀಟಕ್ಕೆ ಹಣಾಹಣೆ ನಡೆಸಲಿದ್ದಾರೆ.

ಭಾರತಕ್ಕೆ 6 ಮಿಸ್ ವರ್ಲ್ಡ್ ಪಟ್ಟ: ಭಾರತದಿಂದ ಈವರೆಗೆ 6 ಮಂದಿ ಕಿರೀಟವನ್ನು ತನ್ನದಾಗಿಸಿಕೊಂಡಿದ್ದಾರೆ. ರೀತಾ ಫರಿಯಾ (1966), ಐಶ್ವರ್ಯ ರೈ (1994), ಡಯಾನಾ ಹೈಡನ್‌ (1997), ಯುಕ್ತಾ ಮೂಕೇ (1999), ಪ್ರಿಯಾಂಕಾ ಚೋಪ್ರಾ (2000) ಹಾಗೂ ಕಡೆಯದಾಗಿ 2017ರಲ್ಲಿ ಮಾನುಷಿ ಚಿಲ್ಲರ್‌ ಕಿರೀಟ ಗೆದ್ದಿದ್ದರು.

1996ರಲ್ಲಿ ಬೆಂಗಳೂರಿನಲ್ಲಿ ನಡೆದಿತ್ತು ಸ್ಪರ್ಧೆ: ಭಾರತದಲ್ಲಿ 1996ರಲ್ಲಿ ಕಡೆಯ ಬಾರಿ ಮಿಸ್‌ ವರ್ಲ್ಡ್‌ ಸ್ಪರ್ಧೆ ನಡೆದಿತ್ತು. ವಿಶೇಷವೆಂದರೆ ಅದು ಬೆಂಗಳೂರಿನಲ್ಲಿ ನಡೆದಿತ್ತು.