ಸಾರಾಂಶ
ಆಪರೇಷನ್ ಸಿಂದೂರದ ವೇಳೆ ಪಾಕಿಸ್ತಾನವನ್ನು ಹೆಡೆಮುರಿ ಕಟ್ಟಿದ್ದ ಭಾರತೀಯ ವಾಯಪಡೆ, ಇದೀಗ ದಾಳಿಯಲ್ಲಿ ತಾನು ಧ್ವಂಸಗೊಳಿಸಿದ್ದ ವಾಯುನೆಲೆ, ಸೇನಾ ನೆಲೆ, ಉಗ್ರರ ಕಚೇರಿಗಳ ಪ್ರದೇಶಗಳ ಹೆಸರನ್ನು ತನ್ನ ಔತಣದ ಕೂಟದ ಮೆನುವಿಗೆ ಇಟ್ಟು ಪಾಕಿಸ್ತಾನವನ್ನು ಮತ್ತಷ್ಟು ಅಣಕವಾಡಿದೆ.
ನವದೆಹಲಿ: ಆಪರೇಷನ್ ಸಿಂದೂರದ ವೇಳೆ ಪಾಕಿಸ್ತಾನವನ್ನು ಹೆಡೆಮುರಿ ಕಟ್ಟಿದ್ದ ಭಾರತೀಯ ವಾಯಪಡೆ, ಇದೀಗ ದಾಳಿಯಲ್ಲಿ ತಾನು ಧ್ವಂಸಗೊಳಿಸಿದ್ದ ವಾಯುನೆಲೆ, ಸೇನಾ ನೆಲೆ, ಉಗ್ರರ ಕಚೇರಿಗಳ ಪ್ರದೇಶಗಳ ಹೆಸರನ್ನು ತನ್ನ ಔತಣದ ಕೂಟದ ಮೆನುವಿಗೆ ಇಟ್ಟು ಪಾಕಿಸ್ತಾನವನ್ನು ಮತ್ತಷ್ಟು ಅಣಕವಾಡಿದೆ.
ಭಾರತೀಯ ವಾಯುಪಡೆಯು 93ನೇ ವಾರ್ಷಿಕೋತ್ಸವದ ಅಂಗವಾಗಿ ಹಮ್ಮಿಕೊಂಡಿದ್ದ ಔತಣ ಕೂಟಕ್ಕೆ ಹಲವು ರೀತಿಯ ವಸ್ತುಗಳನ್ನು ಸಿದ್ಧಪಡಿಸಿ ಅದನ್ನು ಅಧಿಕಾರಿಗಳಿಗೆ, ಯೋಧರಿಗೆ ಉಣ ಬಡಿಸಲಾಗಿತ್ತು.
ಈ ವೇಳೆ ಆಹಾರ ಪದಾರ್ಥಗಳ ಕುರಿತು ಮಾಹಿತಿ ನೀಡಲು ಸಿದ್ಧಪಡಿಸಿದ್ದ ಮೆನುವಿನಲ್ಲಿ, ಪ್ರತಿಯೊಂದಕ್ಕೂ ಪಾಕಿಸ್ತಾನವನ್ನು ಅಣಕವಾಡುವ ರೀತಿಯಲ್ಲಿ ಹೆಸರು ಇಡಲಾಗಿದೆ.
ಏನೇನು ಹೆಸರು?:
ರಾವಲ್ಪಿಂಡಿ ಚಿಕನ್ ಟಿಕ್ಕಾ ಮಸಾಲಾ, ಬಹಾವಲ್ಪುರ ನಾನ್, ರಫಿಕಿ ರಾರಾ ಮಟನ್, ಭೊಲಾರಿ ಪನೀರ್ ಮೆತಿ ಮಲೈ, ಸುಕ್ಕುರ್ ಶಾಮ್ ಸವೇರಾ ಕೊಫ್ತಾ, ಸರಗೊಧಾ ದಾಲ್ ಮಖನಿ, ಜಾಕೋಬಾಬಾದ್ ಮೆವಾ ಪಲಾವ್‌ದೆಂದು ಹೆಸರಿಟ್ಟಿದೆ. ಅದೇ ರೀತಿ ಸಿಹಿ ತಿಂಡಿಗಳಿಗೆ: ಬಾಲಾಕೋಟ್ ತಿರಮಿಸು, ಮುಜ್ಜಾಫರಾಬಾದ್ ಕುಲ್ಫಿ ಫಲುದಾ, ಮುರಿದ್ಕೆ ಮೀಠಾ ಪಾನ್ ಎಂದು ಹೆಸರಿಟ್ಟಿದ್ದು, ಈ ಮೆನುವಿನ ಫೋಟೋ ಭಾರಿ ಹರಿದಾಡುತ್ತಿದೆ.