ಕರ್ನಾಟಕದ ಸೊಸೆ ಇಂದ್ರಾ ನೂಯಿ ಸೋದರಿ ಚಂದ್ರಿಕಾ ಟಂಡನ್‌ಗೆ ಈ ಬಾರಿಯ ಗ್ರ್ಯಾಮಿ ಪ್ರಶಸ್ತಿ

| N/A | Published : Feb 04 2025, 12:32 AM IST / Updated: Feb 04 2025, 03:45 AM IST

ಸಾರಾಂಶ

ಕರ್ನಾಟಕದ ಸೊಸೆ, ಪೆಪ್ಸಿಕೋದ ಮಾಜಿ ಸಿಇಒ ಇಂದ್ರಾ ನೂಯಿ ಅವರ ಸಹೋದರಿ ಚಂದ್ರಿಕಾ ಟಂಡನ್‌ ಅವರಿಗೆ ಈ ಬಾರಿಯ ಗ್ರ್ಯಾಮಿ ಪ್ರಶಸ್ತಿ ಲಭಿಸಿದೆ.

ನವದೆಹಲಿ: ಕರ್ನಾಟಕದ ಸೊಸೆ, ಪೆಪ್ಸಿಕೋದ ಮಾಜಿ ಸಿಇಒ ಇಂದ್ರಾ ನೂಯಿ ಅವರ ಸಹೋದರಿ ಚಂದ್ರಿಕಾ ಟಂಡನ್‌ ಅವರಿಗೆ ಈ ಬಾರಿಯ ಗ್ರ್ಯಾಮಿ ಪ್ರಶಸ್ತಿ ಲಭಿಸಿದೆ.

 ಅಮೆರಿಕದಲ್ಲಿ ಉದ್ಯಮಿಯೂ ಆಗಿರುವ ಟಂಡನ್‌ ಅವರಿಗೆ ಅಮೆರಿಕದ ಲಾಸ್‌ ಏಂಜಲಿಸ್‌ನಲ್ಲಿ ನಡೆದ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ, 2024ರ ಆ.30ರಂದು ಬಿಡುಗಡೆಯಾದ ‘ತ್ರಿವೇಣಿ’ ಆಲ್ಬಂಗೆ ಪ್ರಶಸ್ತಿ ಲಭಿಸಿದೆ. ತಮ್ಮ ಜೊತೆಗಾರರಾದ ದಕ್ಷಿಣ ಆಫ್ರಿಕಾದ ಫ್ಲೌಟಿಸ್ಟ್ ವೂಟರ್ ಕೆಲ್ಲರ್ಮನ್ ಹಾಗೂ ಜಪಾನ್‌ನ ಸೆಲಿಸ್ಟ್ ಎರು ಮಾಟ್ಸುಮೊಟೊ ಅವರೊಂದಿಗೆ ಟಂಡನ್‌ ಪ್ರಶಸ್ತಿ ಸ್ವೀಕರಿಸಿದರು.

ಟಂಡನ್‌ ಅವರಿಗೆ ಎಕ್ಸ್‌ನಲ್ಲಿ ಟ್ವೀಟ್‌ ಮಾಡುವ ಮೂಲಕ ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದನೆ ಸಲ್ಲಿಸಿದರು.

ಗ್ರ್ಯಾಮಿ ಕಾರ್ಯಕ್ರಮದಲ್ಲಿ ಝಾಕಿರ್‌ ಹುಸೇನ್‌ರ ಸ್ಮರಿಸದೆ ಅಗೌರವ, ಟೀಕೆ

ಪ್ರತಿ ಬಾರಿ ಆ ವರ್ಷ ಮೃತರಾದ ಗ್ರಾಮಿ ವಿಜೇತರನ್ನು ಪ್ರಶಸ್ತಿ ಪ್ರದಾನದ ವೇಳೆ ಸ್ಮರಿಸುವುದು ವಾಡಿಕೆ. ಆದರೆ ಈ ಬಾರಿ ಲಾಸ್‌ ಏಂಜಲಿಸ್‌ನಲ್ಲಿ ನಡೆದ 67ನೇ ಗ್ರಾಮಿ ಪ್ರಶಸ್ತಿ ವಿತರಣಾ ಕಾರ್ಯಕ್ರಮದಲ್ಲಿ 4 ಬಾರಿ ಪ್ರಶಸ್ತಿ ಪಡೆದ ಭಾರತದ ಪಸಿದ್ಧ ತಬಲಾ ವಾದಕ ಝಾಕಿರ್‌ ಹುಸೇನ್‌ ಅವರನ್ನು ಸ್ಮರಿಸದೇ ಇದ್ದದ್ದು ಭಾರತೀಯರ ಅಸಮಾಧಾನಕೆ ಕಾರಣವಾಗಿದೆ. ಆದರೆ ಇವರ ಹೆಸರನ್ನು ಅಕಾಡೆಮಿಯ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲಾಗಿತ್ತು.