ಭಾರತ ವಿಶ್ವದಲ್ಲೇ 4 ನೇ ಶಕ್ತಿಶಾಲಿ ಸೇನೆ ಹೊಂದಿರುವ ದೇಶ!

| Published : Jan 18 2024, 02:04 AM IST / Updated: Jan 18 2024, 09:21 AM IST

ಸಾರಾಂಶ

ಶಕ್ತಿಶಾಲಿ ಸೇನೆಯಲ್ಲಿ ಅಮೆರಿಕ, ರಷ್ಯಾ, ಚೀನಾ ಟಾಪ್‌-3 ಸ್ಥಾನ ಹೊಂದಿದ್ದು, ಭಾರತೀಯ ಸೇನೆ ನಾಲ್ಕನೇ ಸ್ಥಾನದಲ್ಲಿದೆ ಎಂದು ‘ಗ್ಲೋಬಲ್‌ ಫೈರ್ ಪವರ್‌’ ಸಮೀಕ್ಷೆ ವರದಿ ತಿಳಿಸಿದೆ.

ನವದೆಹಲಿ: ಜಗತ್ತಿನ ಅತ್ಯಂತ ಶಕ್ತಿಶಾಲಿ ಸೇನಾಪಡೆಗಳನ್ನು ಹೊಂದಿರುವ ದೇಶದಲ್ಲಿ ಭಾರತ 4ನೇ ಸ್ಥಾನವನ್ನು ಪಡೆದುಕೊಂಡಿದೆ. 

ಅಮೆರಿಕದ ಸೇನೆ ಮೊದಲ ಸ್ಥಾನದಲ್ಲಿದ್ದು, ರಷ್ಯಾ ಮತ್ತು ಚೀನಾ ದೇಶಗಳ ಸೇನೆ ಕ್ರಮವಾಗಿ 2 ಮತ್ತು 3ನೇ ಸ್ಥಾನ ಪಡೆದುಕೊಂಡಿವೆ.

ಜಗತ್ತಿನ ರಕ್ಷಣಾ ವ್ಯವಸ್ಥೆಯ ಮಾಹಿತಿ ಕಲೆ ಹಾಕುವ ಗ್ಲೋಬಲ್‌ ಫೈರ್ ಪವರ್‌ ಈ ಸಮೀಕ್ಷೆಯನ್ನು ನಡೆಸಿದ್ದು, 2024ರ ಜಾಗತಿಕ ರ್‍ಯಾಂಕಿಂಗ್ ಪಟ್ಟಿಯನ್ನು ಬಿಡುಗಡೆ ಮಾಡಿದೆ. 

ಸೇನಾಪಡೆಗಳ ಸಂಖ್ಯೆ, ಶಸ್ತ್ರಾಸ್ತ್ರಗಳು, ಆರ್ಥಿಕ ದೃಢತೆ, ಭೌಗೋಳಿಕ ಸ್ಥಾನ ಮತ್ತು ಲಭ್ಯವಿರುವ ಸಂಪನ್ಮೂಲಗಳು ಸೇರಿದಂತೆ 60ಕ್ಕೂ ಹೆಚ್ಚು ಅಂಶಗಳನ್ನು ಗಮನದಲ್ಲಿಟ್ಟುಕೊಂಡು ಈ ವರದಿಯನ್ನು ತಯಾರಿಸಲಾಗಿದೆ. 

ಅಲ್ಲದೇ ಕಳೆದ 1 ವರ್ಷದಲ್ಲಿ ಈ ದೇಶಗಳ ರ್‍ಯಾಂಕಿಂಗ್‌ ಬದಲಾಗಿರುವ ಬಗ್ಗೆಯೂ ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

145 ದೇಶಗಳಲ್ಲಿ ಅಮೆರಿಕ, ರಷ್ಯಾ, ಚೀನಾ, ಭಾರತ, ದಕ್ಷಿಣ ಕೊರಿಯಾ, ಬ್ರಿಟನ್‌, ಜಪಾನ್‌, ಟರ್ಕಿ, ಪಾಕಿಸ್ತಾನ್‌ ಮತ್ತು ಇಟಲಿ ದೇಶಗಳು ಮೊದಲ 10 ಸ್ಥಾನದಲ್ಲಿದೆ.

 ಭೂತಾನ್‌, ಮಾಲ್ಡೋವಾ, ಸುರಿನಾಮ್‌, ಸೊಮಾಲಿಯಾ, ಬೆನಿನ್‌, ಲೈಬೀರಿಯಾ, ಬೆಲೈಜ್‌, ಸಿರಾ ಲಿಯೋನ್‌, ಕೇಂದ್ರ ಆಫ್ರಿಕಾ ರಿಪಬ್ಲಿಕ, ಎಸ್‌ಲ್ಯಾಂಡ್‌ ಕೊನೆ 10 ಸ್ಥಾನಗಳಲ್ಲಿವೆ. ಟಾಪ್‌ 5 ಮಿಲಿಟರಿ ರಾಷ್ಟ್ರಗಳು
1. ಅಮೆರಿಕ
2. ರಷ್ಯಾ
3. ಚೀನಾ
4. ಭಾರತ
5. ದ.ಕೊರಿಯಾ