ಆಸ್ಕರ್‌ ರೇಸಲ್ಲಿ ಭಾರತದ ಟು ಕಿಲ್‌ ಏ ಟೈಗರ್‌ ಚಿತ್ರ

| Published : Jan 24 2024, 02:03 AM IST / Updated: Jan 24 2024, 07:59 AM IST

ಸಾರಾಂಶ

ಭಾರತದ ಜಾರ್ಖಂಡ್‌ನಲ್ಲಿ ನಡೆದ ನೈಜ ಘಟನೆಯನ್ನಾಧರಿಸಿ ಕೆನಡಾದಲ್ಲಿ ಹಿಂದಿ ಭಾಷೆಯಲ್ಲಿ ತಯಾರಾಗಿದ್ದ ಟು ಕಿಲ್‌ ಎ ಟೈಗರ್‌ ಸಾಕ್ಷ್ಯಚಿತ್ರವು ಆಸ್ಕರ್‌ ಪ್ರಶಸ್ತಿಯ ಅಂತಿಮ ಸುತ್ತು ಪ್ರವೇಶಿಸಿದೆ.

ನವದೆಹಲಿ: 2024ನೇ ಸಾಲಿನ ಪ್ರತಿಷ್ಠಿತ ಆಸ್ಕರ್‌ ಪ್ರಶಸ್ತಿಗೆ ನಾಮ ನಿರ್ದೇಶನಗೊಂಡ ಅಂತಿಮ ಚಿತ್ರಗಳ ಪಟ್ಟಿ ಬಿಡುಗಡೆಯಾಗಿದ್ದು, ಭಾರತದಿಂದ ‘ಟು ಕಿಲ್‌ ಏ ಟೈಗರ್‌’ ಎಂಬ ಸಾಕ್ಷ್ಯ ಚಿತ್ರ ಮಾತ್ರ ಆಯ್ಕೆಯಾಗಿದೆ.

ಇದನ್ನು ಹೊರತುಪಡಿಸಿ ಇತ್ತೀಚೆಗೆ ಬಿಡುಗಡೆಯಾಗಿ ಭಾರಿ ಜನಮನ್ನಣೆ ಪಡೆದ ‘ಓಪನ್‌ಹೈಮರ್‌’ ಚಿತ್ರ 13 ವಿಭಾಗಳಲ್ಲಿ ಆಯ್ಕೆಯಾಗಿದೆ. ‘ಅನಾಟಮಿ ಆಫ್‌ ಎ ಫಾಲ್‌’ ಚಿತ್ರವು 5 ವಿಭಾಗಳಲ್ಲಿ ಆಯ್ಕೆಯಾಗಿದೆ.‘ಟು ಕಿಲ್‌ ಎ ಟೈಗರ್‌’ ಚಿತ್ರವ ನಿಷಾ ಪಹುಜಾ ಎಂಬ ಭಾರತ ಮೂಲದ ಕೆನಡಾ ನಿವಾಸಿ ನಿರ್ದೇಶಿಸಿದ್ದು, ಕೆನಡಾ ದೇಶದ ‘ಕೋರ್ನೇಲಿಯಾ ಪ್ರಿನ್ಸಿಪಿ’ ತಂಡ ಹಾಗೂ ಡೇವಿಡ್‌ ಓಪನ್‌ ಹೈಮ್‌ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ.

ಈ ಚಿತ್ರವು ಜಾರ್ಖಂಡ್‌ನಲ್ಲಿ ನಡೆದ ಘಟನೆಯಾಗಿದ್ದು, 13 ವರ್ಷದ ಮಗಳಿಗಾದ ಲೈಂಗಿಕ ಕಿರುಕುಳದ ವಿರುದ್ಧ ತಂದೆ ಹೋರಾಡಿದ ಪರಿಯನ್ನು ಕಥೆಯಾಗಿಸಿಕೊಂಡಿದೆ.

ಭಾರತದ ಜಾರ್ಖಂಡ್‌ನಲ್ಲಿ ನಡೆದ ನೈಜ ಘಟನೆಯನ್ನಾಧರಿಸಿ ಕೆನಡಾದಲ್ಲಿ ಹಿಂದಿ ಭಾಷೆಯಲ್ಲಿ ತಯಾರಾಗಿದ್ದ ಟು ಕಿಲ್‌ ಎ ಟೈಗರ್‌ ಸಾಕ್ಷ್ಯಚಿತ್ರವು ಆಸ್ಕರ್‌ ಪ್ರಶಸ್ತಿಯ ಅಂತಿಮ ಸುತ್ತು ಪ್ರವೇಶಿಸಿದೆ.