ಇರಾನ್‌ ಅಧ್ಯಕ್ಷ ಸಾವು: ಇಂದು ಭಾರತದಲ್ಲಿ ಶೋಕಾರಚಣೆ

| Published : May 21 2024, 12:33 AM IST / Updated: May 21 2024, 06:19 AM IST

ಇರಾನ್‌ ಅಧ್ಯಕ್ಷ ಸಾವು: ಇಂದು ಭಾರತದಲ್ಲಿ ಶೋಕಾರಚಣೆ
Share this Article
  • FB
  • TW
  • Linkdin
  • Email

ಸಾರಾಂಶ

ಇರಾನ್‌ ಅಧ್ಯಕ್ಷ ರೈಸಿ ಹೆಲಿಕಾಪ್ಟರ್‌ ದುರಂತದಲ್ಲಿ ಸಾವನ್ನಪ್ಪಿದ ಕಾರಣ ಮಂಗಳವಾರ ಭಾರತದಾದ್ಯಂತ ಶೋಕಾಚರಣೆ ಮಾಡಲಾಗುತ್ತಿದೆ.

ನವದೆಹಲಿ: ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಹೆಲಿಕಾಪ್ಟರ್ ಅಪಘಾತದಲ್ಲಿ ಸಾವನ್ನಪ್ಪಿದ ಹಿನ್ನಲೆಯಲ್ಲಿ, ಅವರ ಗೌರವಾರ್ಥವಾಗಿ ಭಾರತದಲ್ಲಿ ಮಂಗಳವಾರ 1 ದಿನದ ಶೋಕಾಚರಣೆಗೆ ಕರೆ ನೀಡಲಾಗಿದೆ.

‘ಇರಾನ್ ಅಧ್ಯಕ್ಷರಿಗೆ ಗೌರವ ಸೂಚಕವಾಗಿ ಮಂಗಳವಾರ ಭಾರತದಾದ್ಯಂತ ಶೋಕಾಚರಣೆ ನಡೆಸಲಾಗುವುದು’ ಎಂದು ಕೇಂದ್ರ ಗೃಹ ಸಚಿವಾಲಯ ಪ್ರಕಟಣೆ ಹೊರಡಿಸಿದೆ.

‘ಶೋಕಾಚರಣೆಯ ಭಾಗವಾಗಿ, ನಿತ್ಯ ರಾಷ್ಟ್ರಧ್ವಜವನ್ನು ಹಾರಿಸುವ ಕಡೆ ಮಂಗಳವಾರ ರಾಷ್ಟ್ರ ಧ್ವಜವನ್ನು ಅರ್ಧಕ್ಕೆ ಹಾರಿಸಲಾಗುತ್ತದೆ. ಈ ವೇಳೆ ಯಾವುದೇ ಅಧಿಕೃತ ಮನೋರಂಜನಾ ಕಾರ್ಯಕ್ರಮಗಳು ನಡೆಯುವುದಿಲ್ಲ’ ಎಂದು ಅಧಿಕಾರಿಗಳು ತಿಳಿಸಿದ್ದಾರೆ.