ಭಾರತೀಯ ನೌಕಾಪಡೆಯ ಕಾರ್ಯಾಚರಣೆ : ಹಡಗಿನಲ್ಲಿ ಸಾಗಿಸುತ್ತಿದ್ದ 2500 ಕೇಜಿ ಡ್ರಗ್ಸ್‌ ಜಪ್ತಿ

| N/A | Published : Apr 03 2025, 02:49 AM IST / Updated: Apr 03 2025, 06:43 AM IST

ಸಾರಾಂಶ

ಭಾರತೀಯ ನೌಕಾಪಡೆಯ ಮಂಚೂಣಿ ಯುದ್ಧನೌಕೆ ಐಎನ್‌ಎಸ್‌ ತರ್ಕಶ್‌ ಮಹತ್ವದ ಕಾರ್ಯಾಚರಣೆ ನಡೆಸಿದ್ದು. ಪಶ್ಚಿಮ ಹಿಂದೂ ಮಹಾಸಾಗರದಲ್ಲಿ ಹಡಗೊಂದರಲ್ಲಿ ಸಂಗ್ರಹವಾಗಿದ್ದ ಬರೋಬ್ಬರಿ 2,500 ಕೇಜಿ ಮಾದಕ ವಸ್ತು ವಶಪಡಿಸಿಕೊಂಡಿದೆ.

ನವದೆಹಲಿ: ಭಾರತೀಯ ನೌಕಾಪಡೆಯ ಮಂಚೂಣಿ ಯುದ್ಧನೌಕೆ ಐಎನ್‌ಎಸ್‌ ತರ್ಕಶ್‌ ಮಹತ್ವದ ಕಾರ್ಯಾಚರಣೆ ನಡೆಸಿದ್ದು. ಪಶ್ಚಿಮ ಹಿಂದೂ ಮಹಾಸಾಗರದಲ್ಲಿ ಹಡಗೊಂದರಲ್ಲಿ ಸಂಗ್ರಹವಾಗಿದ್ದ ಬರೋಬ್ಬರಿ 2,500 ಕೇಜಿ ಮಾದಕ ವಸ್ತು ವಶಪಡಿಸಿಕೊಂಡಿದೆ. ಮಾ.31ರಂದು ಹಲವು ಹಡಗುಗಳ ಅನುಮಾನಸ್ಪದ ಚಲನವಲನದ ಬಗ್ಗೆ ಭಾರತೀಯ ನೌಕಾಪಡೆಗೆ ಖಚಿತ ಸಿಕ್ಕಿತ್ತು. 

ಈ ಬೆನ್ನಲ್ಲೇ ಐಎನ್‌ಎಸ್‌ ತರ್ಕಶ್‌ ಯುದ್ಧನೌಕೆಯು ಪಿ8ಐ ಸಾಗರ ಕಣ್ಗಾವಲು ವಿಮಾನ ಮತ್ತು ಮುಂಬೈನ ಸಾಗರ ಕಾರ್ಯಾಚರಣೆ ಕೇಂದ್ರದ ಸಂಘಟಿತ ಪ್ರಯತ್ನದಿಂದಾಗಿ ಶಂಕಿತ ದೋಣಿಯೊಂದನ್ನು ತಡೆದು ನಿಲ್ಲಿಸಿ ಶೋಧ ನಡೆಸಿದಾಗ ಅಪಾರ ಪ್ರಮಾಣದ ಮಾದಕ ವಸ್ತು ಪ್ಯಾಕೇಟ್‌ಗಳು ಪತ್ತೆಯಾಗಿವೆ. ಹೆಚ್ಚಿನ ತಪಾಸಣೆ ಮತ್ತು ವಿಚಾರಣೆ ನಡೆಸಿದಾಗ ಹಡಗಿನಲ್ಲಿರುವ ವಿವಿಧ ಸರಕು ವಿವಿಧ ವಿಭಾಗಗಳಲ್ಲಿ ಸಂಗ್ರಹಿಸಲಾದ 2386 ಕೇಜಿ ಹಶಿಶ್‌ ಮತ್ತು 121 ಕೇಜಿ ಹೆರಾಯಿನ್‌ ಸೇರಿದಂತೆ 2500 ಕೇಜಿಗೂ ಹೆಚ್ಚು ಮಾದಕ ವಸ್ತು ಪತ್ತೆಯಾಗಿದೆ.

ಮಹಾದೇವ್ ಬೆಟ್ಟಿಂಗ್ ಆ್ಯಪ್‌ ಹಗರಣದಲ್ಲಿ ಮಾಜಿ ಸಿಎಂ ಬಘೇಲ್ ಆರೋಪಿ: ಸಿಬಿಐ

ನವದೆಹಲಿ: ಮಹಾದೇವ ಬೆಟ್ಟಿಂಗ್ ಆ್ಯಪ್ ಹಗರಣ ಸಂಬಂಧ ಹಣ ವರ್ಗಾವಣೆ ಆರೋಪ ಎದುರಿಸುತ್ತಿರುವ ಛತ್ತೀಸ್‌ಗಢದ ಮಾಜಿ ಸಿಎಂ ಭೂಪೇಶ್‌ ಬಘೇಲ್ ಕೂಡ ಈ ಹಗರಣದ ಫಲಾನುಭವಿಗಳಲ್ಲಿ ಒಬ್ಬರು ಎಂದು ಸಿಬಿಐ ಅಧಿಕಾರಿಗಳು ಎಫ್‌ಐಆರ್‌ನಲ್ಲಿ ಉಲ್ಲೇಖಿಸಿದ್ದಾರೆ.ಜಾರಿ ನಿರ್ದೇಶಾನಲಯದ ಅಧಿಕಾರಿಗಳು ನಡೆಸಿದ ತನಿಖೆ ವರದಿ ಆಧರಿಸಿ ಸಿಬಿಐ ಎಫ್‌ಐಆರ್‌ ದಾಖಲಿಸಿದೆ. 

ಪ್ರಕರಣದ 19 ಆರೋಪಿಗಳಲ್ಲಿ ಬಘೇಲ್ ಅವರನ್ನು 6ನೇ ಆರೋಪಿಯನ್ನಾಗಿ ಕೇಂದ್ರೀಯ ತನಿಖಾ ಸಂಸ್ಥೆ ಹೆಸರಿಸಿದೆ. ಸಿಬಿಐ ಕಳೆದ ವರ್ಷ ಡಿ.18ರಂದು ಎಫ್‌ಐಆರ್‌ ದಾಖಲಿತ್ತ. ಇದೇ ಮಾ.26ರಂದು ಬಘೇಲ್‌ ನಿವಾಸದಲ್ಲಿ ಶೋಧ ನಡೆಸಿತು. ಮಂಗಳ ವಾರ ಸಿಬಿಐ ಆ ಎಫ್‌ಐಆರ್‌ ಬಹಿರಂಗಪಡಿಸಿದ್ದು, ಅದರಲ್ಲಿ ಬಘೇಲ್ ಹೆಸರು ಉಲ್ಲೇಖಗೊಂಡಿದೆ. ಆದರೆ ಈ ಆರೋಪವನ್ನು ಬಘೇಲ್ ನಿರಾಕರಿಸಿದ್ದು ಸಿಬಿಐ ಕ್ರಮ ರಾಜಕೀಯ ಪ್ರೇರಿತ ಎಂದಿದ್ದಾರೆ.

ಘಿಬ್ಲಿ ಫೋಟೋ ಸೃಷ್ಟಿಗೆ ವಿಶ್ವಾಸಾರ್ಹ ಆ್ಯಪ್ಬಳಸಿ:  ಪೊಲೀಸ್‌ ಸಲಹೆಪಣಜಿ: ಸಾಮಾಜಿಕ ಜಾಲತಾಣದಲ್ಲಿ ಸದ್ಯ ಟ್ರೆಂಡ್‌ ಸೃಷ್ಟಿಸಿರುವ ಘಿಬ್ಲಿ ಬಗ್ಗೆ ಗೋವಾ ಪೊಲೀಸರು ಸಲಹೆಯೊಂದನ್ನು ನೀಡಿದ್ದು, ‘ನಿಮ್ಮ ಖಾಸಗಿತನವನ್ನು ಕಾಪಾಡಿಕೊಳ್ಳುವ ಕಾರಣಕ್ಕಾಗಿ ಪೋಟೋವನ್ನು ಜನರೇಟ್‌ ಮಾಡಲು ವಿಶ್ವಾಸಾರ್ಹ ಎಐ ಆ್ಯಪ್‌ಗಳನ್ನು ಮಾತ್ರವೇ ಬಳಸಿ’ ಎಂದಿದ್ದಾರೆ. ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಈ ಬಗ್ಗೆ ರಾಜ್ಯ ಪೊಲೀಸರು ಮಾಹಿತಿ ನೀಡಿದ್ದು, ‘ ಎಐ ಆಧಾರಿತ ಘಿಬ್ಲಿಗೆ ಸೇರಿಕೊಳ್ಳುವುದು ಮನರಂಜನೆ ವಿಷಯ. ಆದರೆ ಎಲ್ಲ ಕೃತಕ ಬುದ್ಧಿಮತ್ತೆಯ ಆ್ಯಪ್‌ಗಳು ನಿಮ್ಮ ಖಾಸಗಿತನ ರಕ್ಷಿಸುವುದಿಲ್ಲ. ಘಿಬ್ಲಿ ಕಲೆಯು ಅದರ ಕಲ್ಪನೆಯಿಂದ ಎಲ್ಲರಿಗೂ ಇಷ್ಟವಾಗಿದೆ, ಆದರೆ ನಿಮ್ಮ ವೈಯುಕ್ತಿಕ ಫೋಟೋವನ್ನು ಅಪ್ಲೋಡ್‌ ಮಾಡುವಾಗ ಯೋಚಿಸಿ. ಫೋಟೋ ಜನರೇಟ್‌ ಮಾಡಲು ವಿಶ್ವಾಸಾರ್ಹ ಆ್ಯಪ್‌ಗಳನ್ನು ಮಾತ್ರವೇ ಬಳಸಿ’ ಎಂದಿದೆ.