ಸಾರಾಂಶ
ಮೂರು ದಿನಗಳ ಸತತ ರಜೆಯ ನಂತರ ಭಾರತೀಯ ಷೇರುಪೇಟೆ ಭಾರೀ ಪ್ರಮಾಣದಲ್ಲಿ ಕುಸಿತವಾಗಿದೆ.
ಮುಂಬೈ: ಬಾಂಬೆ ಷೇರುಪೇಟೆಯ ಸಂವೇದಿ ಸೂಚ್ಯಂಕವಾದ ಸೆನ್ಸೆಕ್ಸ್ ಮಂಗಳವಾರ 1053 ಅಂಕಗಳ ಭಾರೀ ಕುಸಿತ ಕಂಡು 70370 ಅಂಕಗಳಲ್ಲಿ ಮುಕ್ತಾಯವಾಗಿದೆ.
450 ಅಂಕಗಳ ಏರಿಕೆಯೊಂದಿಗೆ ಸೆನ್ಸೆಕ್ಸ್ ಆರಂಭಗೊಂಡರೂ ಬಳಿಕ ಭಾರೀ ಕುಸಿತ ಕಂಡಿತು.ಇದೇ ವೇಳೆ ನಿಫ್ಟಿ ಕೂಡಾ 330 ಅಂಕ ಕುಸಿದು 21241 ಅಂಕಗಳಲ್ಲಿ ಅಂತ್ಯಗೊಂಡಿದೆ.
ರಿಲಯನ್ಸ್, ಎಚ್‌ಡಿಎಫ್‌ಸಿ, ಎಸ್‌ಬಿಐ ಮತ್ತು ಬ್ಯಾಂಕಿಂಗ್ ವಲಯದ ಇತರೆ ಷೇರುಗಳ ಇಳಿಕೆ ಸೂಚ್ಯಂಕದ ಮೇಲೆ ಪರಿಣಾಮ ಬೀರಿತು.ಪರಿಣಾಮ ಹೂಡಿಕೆದಾರರ 8.5 ಲಕ್ಷ ಕೋಟಿ ರು. ಸಂಪತ್ತು ಒಂದೇ ದಿನದಲ್ಲಿ ಕರಗಿ ಹೋಗಿದೆ.