ಭಾರತ- ಪಾಕ್‌ ನಡುವಿನ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ ವಾಯು ರಕ್ಷಣಾ ಸಾಮರ್ಥ್ಯ ಪ್ರದರ್ಶನ

| N/A | Published : Apr 24 2025, 11:45 PM IST / Updated: Apr 25 2025, 07:00 AM IST

Indian Army
ಭಾರತ- ಪಾಕ್‌ ನಡುವಿನ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ ವಾಯು ರಕ್ಷಣಾ ಸಾಮರ್ಥ್ಯ ಪ್ರದರ್ಶನ
Share this Article
  • FB
  • TW
  • Linkdin
  • Email

ಸಾರಾಂಶ

ಭಾರತ- ಪಾಕ್‌ ನಡುವಿನ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ ಭಾರತ ಬುಧವಾರ ಅರಬ್ಬೀ ಸಮುದ್ರ ತೀರದಲ್ಲಿ ತನ್ನ ವಾಯುರಕ್ಷಣಾ ಸಾಮರ್ಥ್ಯವನ್ನು ಪ್ರದರ್ಶಿಸಿದೆ.  

 ನವದೆಹಲಿ: ಭಾರತ- ಪಾಕ್‌ ನಡುವಿನ ಉದ್ವಿಗ್ನ ಪರಿಸ್ಥಿತಿಯ ನಡುವೆಯೇ ಭಾರತ ಬುಧವಾರ ಅರಬ್ಬೀ ಸಮುದ್ರ ತೀರದಲ್ಲಿ ತನ್ನ ವಾಯುರಕ್ಷಣಾ ಸಾಮರ್ಥ್ಯವನ್ನು ಪ್ರದರ್ಶಿಸಿದೆ. ಭಾರತೀಯ ನೌಕಾಪಡೆಎ ಸೇರಿದ ಐಎನ್‌ಎಸ್‌ ಸೂರತ್‌ ಯುದ್ಧ ನೌಕೆಯು ಸಮುದ್ರದಲ್ಲಿ ತನ್ನತ್ತ ಹಾರಿಬರುತ್ತಿದ್ದ ಗುರಿಯನ್ನು ಯಶಸ್ವಿಯಾಗಿ ಪತ್ತೆ ಮಾಡಿ ಹೊಡೆದುರುಳಿಸಿದೆ.

ಇದು ಆಗಸದಿಂದ ಭಾರತಕ್ಕೆ ಎದುರಾಗಬಹುದಾಗ ಯಾವುದೇ ಅಪಾಯಗಳನ್ನು ಯಶಸ್ವಿಯಾಗಿ ಮೆಟ್ಟಿನಿಲ್ಲುವ ಭಾರತದ ಸಾಮರ್ಥ್ಯವನ್ನು ಮತ್ತೊಮ್ಮೆ ನೆರೆ ಹೊರೆಯ ದೇಶಗಳಿಗೆ ರವಾನಿಸಿದೆ. ಅತ್ತ ಪಾಕಿಸ್ತಾನ ಕ್ಷಿಪಣಿ ಪರೀಕ್ಷೆಗೆ ಮುಂದಾದ ಬೆನ್ನಲ್ಲೇ ಭಾರತವೂ ತನ್ನ ವಾಯುರಕ್ಷಣಾ ಸಾಮರ್ಥ್ಯ ಪ್ರದರ್ಶನ ಮೂಲದ ನೆರೆಯ ಶತ್ರು ದೇಶಕ್ಕೆ ಪರೋಕ್ಷವಾಗಿ ಎಚ್ಚರಿಕೆಯ ಸಂದೇಶ ರವಾನಿಸಿದೆ.

ಕರಾಚಿ ಕರಾವಳಿಯಲ್ಲಿ ಪಾಕ್‌ನಿಂದ ಕ್ಷಿಪಣಿ ಪರೀಕ್ಷೆ

ನವದೆಹಲಿ: ಕಾಶ್ಮೀರದಲ್ಲಿ 26 ಪ್ರವಾಸಿಗರ ನರಮೇಧದ ಬಳಿಕ ಭಾರತ ಮತ್ತು ಪಾಕಿಸ್ತಾನದ ನಡುವೆ ಉದ್ವಿಗ್ನ ಪರಿಸ್ಥಿತಿ ನಿರ್ಮಾಣವಾಗಿರುವ ಹೊತ್ತಿನಲ್ಲೇ, ಪಾಕಿಸ್ತಾನ ನೆಲ ಅಥವಾ ಯುದ್ಧನೌಕೆಗಳಿಂದ ಹಾರಿಸುವ ಕ್ಷಿಪಣಿ ಪರೀಕ್ಷೆಗೆ ಸಜ್ಜಾಗಿದೆ.ಕರಾಚಿಯ ವಿಶೇಷ ಆರ್ಥಿಕ ವಲಯದ ವ್ಯಾಪ್ತಿಯಲ್ಲಿ ಏ.24-25ರಂದು ಕ್ಷಿಪಣಿ ಪ್ರಯೋಗ ನಡೆಸುವುದಾಗಿ ಪಾಕ್‌ ಸರ್ಕಾರ ಅಧಿಕಾರಿ ಹೇಳಿಕೆ ಬಿಡುಗಡೆ ಮಾಡಿದೆ. ಪೆಹಲ್ಗಾಮ್‌ ಉಗ್ರ ಕೃತ್ಯದ ಬಳಿಕ ಭಾರತ ತನ್ನ ಮೇಲೆ ವಾಯುದಾಳಿ ನಡೆಸಬಹುದು ಎಂಬ ಆತಂಕದಲ್ಲಿ ಕಳೆದ 2 ದಿನಗಳಿಂದ ಪಾಕಿಸ್ತಾನದ ವಾಯುಪಡೆ ವಿಮಾನಗಳು ಭಾರತದ ಗಡಿಯಲ್ಲೇ ದಿನವಿಡೀ ಹಾರಾಟ ನಡೆಸಿದ್ದವು. ಅದರ ಬೆನ್ನಲ್ಲೇ ಪಾಕ್‌ ಸರ್ಕಾರ ಕ್ಷಿಪಣಿ ಪರೀಕ್ಷೆಗೆ ಮುಂದಾಗಿದೆ.