ಸಾರಾಂಶ
ಆತಿಥ್ಯ ರಾಷ್ಟ್ರ ಎಂಬ ಕಾರಣಕ್ಕೆ ಹೆಸರು ನಮೂದು. ಹೀಗಾಗಿ ಚಾಂಪಿಯನ್ಸ್ ಟ್ರೋಫಿ ಲೋಗೊ ಜೊತೆ ಪಾಕ್ ಹೆಸರು ಸಹ ಭಾರತದ ಜೆರ್ಸಿ ಮೇಲೆ ಕಾಣಿಸಿಕೊಂಡಿದೆ.
ದುಬೈ: ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಭಾರತ ತಂಡದ ಹೊಸ ಜೆರ್ಸಿ ಬಿಡುಗಡೆಯಾಗಿದೆ. ವಿಶೇಷವೇನೆಂದರೆ, ಜೆರ್ಸಿಯಲ್ಲಿ ಆತಿಥ್ಯ ರಾಷ್ಟ್ರ ಪಾಕಿಸ್ತಾನದ ಹೆಸರು ಕಾಣಿಸಿಕೊಂಡಿದೆ.
ಟೂರ್ನಿಗೆ ಪಾಕ್ ಆತಿಥ್ಯ ವಹಿಸಿದರೂ, ಭಾರತ ತಂಡ ಪಾಕ್‌ಗೆ ತೆರಳುವುದಿಲ್ಲ, ಬದಲಾಗಿ ತನ್ನ ಎಲ್ಲಾ ಪಂದ್ಯಗಳನ್ನು ದುಬೈನಲ್ಲಿ ಆಡಲಿದೆ. ಹೀಗಾಗಿ ಟೀಂ ಇಂಡಿಯಾ ಜೆರ್ಸಿ ಮೇಲೆ ಪಾಕಿಸ್ತಾನದ ಹೆಸರು ಇರುವವುದಿಲ್ಲ ಎಂದು ಈ ಮೊದಲು ವರದಿಯಾಗಿತ್ತು. ಆದರೆ ಐಸಿಸಿ ಟೂರ್ನಿಯಲ್ಲಿ ಆತಿಥ್ಯ ದೇಶದ ಹೆಸರು ನಮೂದಿಸುವುದು ಕಡ್ಡಾಯ. ಹೀಗಾಗಿ ಚಾಂಪಿಯನ್ಸ್ ಟ್ರೋಫಿ ಲೋಗೊ ಜೊತೆ ಪಾಕ್ ಹೆಸರು ಸಹ ಭಾರತದ ಜೆರ್ಸಿ ಮೇಲೆ ಕಾಣಿಸಿಕೊಂಡಿದೆ.ತಂದೆ ನಿಧನ: ತವರಿಗೆ ಮರಳಿದ ಬೌಲಿಂಗ್ ಕೋಚ್ ಮೋರ್ಕೆಲ್ದುಬೈ: ಭಾರತ ತಂಡದ ಬೌಲಿಂಗ್ ಕೋಚ್ ಮೋರ್ನೆ ಮೋರ್ಕೆಲ್ ಐಸಿಸಿ ಚಾಂಪಿಯನ್ಸ್ ಟ್ರೋಫಿ ತೊರೆದು ತವರಿಗೆ ಹಿಂದಿರುಗಿದ್ದಾರೆ. ತಮ್ಮ ತಂದೆ ನಿಧನ ಹೊಂದಿದ ಕಾರಣಕ್ಕೆ ಅವರು ತವರು ದೇಶ ದಕ್ಷಿಣ ಆಫ್ರಿಕಾಕ್ಕೆ ತೆರಳಿದ್ದಾರೆ ಎಂದು ವರದಿಯಾಗಿದೆ. ಇತ್ತೀಚೆಗೆ ದುಬೈಗೆ ತೆರಳಿದ್ದ ಭಾರತ ತಂಡದ ಜೊತೆ ಮೋರ್ಕೆಲ್ ಕೂಡಾ ಇದ್ದರು. ಬಳಿಕ ತಂಡದ ಮೊದಲ ಅಭ್ಯಾಸ ಶಿಬಿರದಲ್ಲೂ ಮೋರ್ಕೆಲ್ ಉಪಸ್ಥಿತರಿದ್ದರು. ಆದರೆ ಸೋಮವಾರ ಅವರು ತಂಡದ ಜೊತೆ ಕಾಣಿಸಲಿಲ್ಲ. ಇನ್ನು, ಅವರು ಚಾಂಪಿಯನ್ಸ್ ಟ್ರೋಫಿ ವೇಳೆ ತಂಡ ಕೂಡಿಕೊಳ್ಳುವ ಬಗ್ಗೆ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ ಎಂದು ಮಾಧ್ಯಮಗಳಲ್ಲಿ ವರದಿಯಾಗಿದೆ. ಟೂರ್ನಿ ಬುಧವಾರ ಆರಂಭಗೊಳ್ಳಲಿದೆ.