ದೇಶದ ಮೊದಲ ಸ್ವದೇಶಿ ನಿರ್ಮಿತ ಹೈಡ್ರೋಜನ್ ಚಾಲಿತ ವಾಟರ್ ಟ್ಯಾಕ್ಸಿ(ಕಿರು ಪ್ರವಾಸಿ ಹಡಗು) ಸೇವೆಗೆ ವಾರಾಣಸಿಯಲ್ಲಿ ಚಾಲನೆ ಸಿಕ್ಕಿದೆ. ಈ ಮೂಲಕ ಶುದ್ಧ ಇಂಧನದಿಂದ ಚಲಿಸುವ ಜಲಸಾರಿಗೆ ಹೊಂದಿರುವ ಕೆಲವೇ ಕೆಲ ದೇಶಗಳ ಸಾಲಿಗೆ ಇದೀಗ ಭಾರತ ಸೇರ್ಪಡೆಯಾಗಿದೆ. ಚೀನಾ, ನಾರ್ವೆ, ನೆದರ್‌ಲ್ಯಾಂಡ್, ಜಪಾನ್ ದೇಶಗಳು ಈ ರೀತಿ ಹೈಡ್ರೋಜನ್ ಚಾಲಿತ ಹಡಗುಗಳನ್ನು ಹೊಂದಿವೆ.
ಕೇಂದ್ರ ಬಂದರು ಸಚಿವ ಸೋನಾವಾಲ್ ಚಾಲನೆನವದೆಹಲಿ: ದೇಶದ ಮೊದಲ ಸ್ವದೇಶಿ ನಿರ್ಮಿತ ಹೈಡ್ರೋಜನ್ ಚಾಲಿತ ವಾಟರ್ ಟ್ಯಾಕ್ಸಿ(ಕಿರು ಪ್ರವಾಸಿ ಹಡಗು) ಸೇವೆಗೆ ವಾರಾಣಸಿಯಲ್ಲಿ ಚಾಲನೆ ಸಿಕ್ಕಿದೆ. ಈ ಮೂಲಕ ಶುದ್ಧ ಇಂಧನದಿಂದ ಚಲಿಸುವ ಜಲಸಾರಿಗೆ ಹೊಂದಿರುವ ಕೆಲವೇ ಕೆಲ ದೇಶಗಳ ಸಾಲಿಗೆ ಇದೀಗ ಭಾರತ ಸೇರ್ಪಡೆಯಾಗಿದೆ. ಚೀನಾ, ನಾರ್ವೆ, ನೆದರ್‌ಲ್ಯಾಂಡ್, ಜಪಾನ್ ದೇಶಗಳು ಈ ರೀತಿ ಹೈಡ್ರೋಜನ್ ಚಾಲಿತ ಹಡಗುಗಳನ್ನು ಹೊಂದಿವೆ.
ಹಡಗು ಮತ್ತು ಜಲಸಾರಿಗೆ ಸಚಿವ ಸರ್ಬಾನಂದ ಸೋನಾವಾಲ್ ಅವರು ಬುಧವಾರ ನಮೋ ಘಾಟ್‌ನಲ್ಲಿ ವಾಟರ್ ಟ್ಯಾಕ್ಸಿ ಸೇವೆಗೆ ಚಾಲನೆ ನೀಡಿದ್ದು, ಇದು ರವಿದಾಸ್ ಘಾಟ್‌ನಿಂದ ನಮೋ ಘಾಟ್ ನಡುವೆ ಸಂಚರಿಸಲಿದೆ.ಕೊಚ್ಚಿನ್ ಶಿಪ್‌ಯಾರ್ಡ್‌ನಿಂದ ನಿರ್ಮಿತ ಈ ವಾಟರ್ ಟ್ಯಾಕ್ಸಿಯಲ್ಲಿ 50 ಮಂದಿ ಪ್ರಯಾಣಿಸಬಹುದಾಗಿದೆ. ಸಸ್ಯಾಹಾರಿ ತಿಂಡಿ-ತಿನಿಸು, ಸಿಸಿಟೀವಿ ಕಣ್ಗಾವಲು, ಬಯೋ ಟಾಯ್ಲೆಟ್ ನಂಥ ಸೌಲಭ್ಯಗಳಿವೆ. ಹೈಬ್ರಿಡ್ ಎಲೆಕ್ಟ್ರಿಕ್-ಹೈಡ್ರೋಜನ್ ಎಂಜಿನ್‌ನಿಂದ ಈ ವಾಟರ್ ಟ್ಯಾಕ್ಸಿ ಸಂಚರಿಸುತ್ತದೆ. ಈ ವಾಟರ್ ಟ್ಯಾಕ್ಸಿಯಲ್ಲಿ ಮೂರು ಕಿಲೋ ವ್ಯಾಟ್‌ನ ಸೋಲಾರ್ ಪ್ಯಾನಲ್ ಅಳವಡಿಸಲಾಗಿದೆ. ಯಾವುದೇ ಸದ್ದಿಲ್ಲದೆ, ಹೊಗೆಯುಗುಳದೆ ಪರಿಸರ ಸ್ನೇಹಿಯಾಗಿ ಕಾರ್ಯ ನಿರ್ವಹಿಸುತ್ತದೆ. ಕೇಂದ್ರ ಸರ್ಕಾರದ ಸ್ವಚ್ಛ, ಹಸಿರು ಸಾರಿಗೆಗೆ ಉತ್ತೇಜನ ನೀಡುವ ಭಾಗವಾಗಿ ಈ ವಾಟರ್ ಟ್ಯಾಕ್ಸಿ ಸೇವೆಗೆ ಚಾಲನೆ ಸಿಕ್ಕಿದೆ.