ಭಾರತದ ‘ಕರಾಚಿ ಬೇಕರಿ’ಗೂ ಸಂಕಷ್ಟ!

| N/A | Published : May 09 2025, 06:40 AM IST

karachi bakery

ಸಾರಾಂಶ

ಭಾರತ- ಪಾಕ್ ಉದ್ವಿಗ್ನತೆ ನಡುವೆ ಹೈದರಾಬಾದ್‌ನಲ್ಲಿ ‘ಕರಾಚಿ ಬೇಕರಿ’ ಸಂಕಷ್ಟಕ್ಕೊಳಗಾಗಿದ್ದು, ಬೇಕರಿ ಹೆಸರಿನ ಬದಲಾವಣೆಗೆ ಆಗ್ರಹ ಕೇಳಿ ಬಂದಿದೆ. ಈ ಬೆನ್ನಲ್ಲೇ ಮಾಲೀಕರು ಸ್ಪಷ್ಟನೆ ನೀಡಿದ್ದು, ‘ಇದು ನೂರಕ್ಕೆ ನೂರರಷ್ಟು ಭಾರತದ ಉತ್ಪನ್ನ. ನಾವು ಭಾರತೀಯರು’ ಎಂದಿದೆ.

ಹೈದರಾಬಾದ್‌: ಭಾರತ- ಪಾಕ್ ಉದ್ವಿಗ್ನತೆ ನಡುವೆ ಹೈದರಾಬಾದ್‌ನಲ್ಲಿ ‘ಕರಾಚಿ ಬೇಕರಿ’ ಸಂಕಷ್ಟಕ್ಕೊಳಗಾಗಿದ್ದು, ಬೇಕರಿ ಹೆಸರಿನ ಬದಲಾವಣೆಗೆ ಆಗ್ರಹ ಕೇಳಿ ಬಂದಿದೆ. ಈ ಬೆನ್ನಲ್ಲೇ ಮಾಲೀಕರು ಸ್ಪಷ್ಟನೆ ನೀಡಿದ್ದು, ‘ಇದು ನೂರಕ್ಕೆ ನೂರರಷ್ಟು ಭಾರತದ ಉತ್ಪನ್ನ. ನಾವು ಭಾರತೀಯರು’ ಎಂದಿದೆ.

ಎರಡು ದೇಶಗಳ ನಡುವೆ ಉದ್ವಿಗ್ನತೆ ಬೆನ್ನಲ್ಲೇ ವಿಶಾಖಪಟ್ಟಣದಲ್ಲಿ ಸಂಘಟನೆಗಳು ಬೇಕರಿ ಹೆಸರಿನ ಬದಲಾವಣೆಗೆ ಆಗ್ರಹಿಸಿ ಪ್ರತಿಭಟಿಸಿದ್ದರು, ಈ ಬೆನ್ನಲ್ಲೇ ಮಾಲೀಕರು ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದು ‘ ಜನರು ಪಾಕಿಸ್ತಾನದ ಸ್ಥಳದ ಹೆಸರು ಇರುವ ಕಾರಣಕ್ಕೆ ಪ್ರತಿಭಟನೆಯನ್ನು ನಡೆಸಿದ್ದಾರೆ. ಆದರೆ ವಾಸ್ತವದಲ್ಲಿ ಇದು ಭಾರತದ ಹೈದರಾಬಾದ್‌ನ ಕಂಪನಿ. ವಿಭಜನೆಯ ನಂತರ ನಮ್ಮ ಅಜ್ಜ ಭಾರತಕ್ಕೆ ಬಂದ ನಂತರ ಈ ಬ್ರ್ಯಾಂಡ್‌ಗೆ ಕರಾಚಿ ಬೇಕರಿ ಎಂದು ಹೆಸರಿಟ್ಟರು. ಇದು ಶೇ.100ರಷ್ಟು ಭಾರತದ ಉತ್ಪನ್ನ. 1953ರಲ್ಲಿ ಸ್ಥಾಪನೆಯಾಯಿತು. ನಮ್ಮ ಹೆಸರು ನಮ್ಮ ಇತಿಹಾಸದ ಸಂಕೇತ ಹೊರತು ರಾಷ್ಟ್ರೀಯತೆ ಅಲ್ಲ. ದಯವಿಟ್ಟು ನಮಗೆ ಸಹಕರಿಸಿ’ ಎಂದಿದ್ದಾರೆ.

ಜೊತೆಗೆ ಹೆಸರಿನಲ್ಲಿ ಯಾವುದೇ ಬದಲಾವಣೆ ಆಗದಂತೆ ತಡೆಯಲು ತೆಲಂಗಾಣ ಸಿಎಂ ರೇವಂತ್ ರೆಡ್ಡಿ ಮತ್ತು ಪೊಲೀಸರಿಗೆ ಮನವಿ ಮಾಡಿದ್ದಾರೆ.

ಕರಾಚಿ ಬೇಕರಿಯನ್ನು ರಾಜೇಶ್‌ ರಾಮ್ನಾನಿ ಮತ್ತು ಹರೀಶ್‌ ರಾಮ್ನಾನಿ ಎನ್ನುವವರು ನಡೆಸುತ್ತಿದ್ದಾರೆ. 1953ರಲ್ಲಿ ಅವರ ಅಜ್ಜ ಖಾನ್‌ಚಂದ್ ರಾಮ್ನಾನಿ ಎನ್ನುವವರು ಬೇಕರಿ ಸ್ಥಾಪಿಸಿದ್ದರು. ಭಾರತ ಪಾಕ್ ವಿಭಜನೆಯ ಸಂದರ್ಭದಲ್ಲಿ ಖಾನ್‌ಚಂದ್‌ ಭಾರತಕ್ಕೆ ಬಂದಿದ್ದರು.